ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ | ಜೇನು ತುಪ್ಪ, ಸಕ್ಕರೆ ನೀರು ಮಗುವಿಗೆ ನೀಡಬೇಡಿ ; ಶ್ರೀಹರಿ ಕುಲಕರ್ಣಿ

ಎದೆ ಹಾಲು ಕುಡಿಸುವದರಿಂದ ಎದೆ ಕ್ಯಾನ್ಸರ್, ಗರ್ಭಾಶಯ ಕ್ಯಾನ್ಸರ್ ಬರುವದಿಲ್ಲ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ  ಹೇಳಿದರು.

ಜಾಹಿರಾತು

ಸಿಂದಗಿ : ನಗರದ ವಾರ್ಡ ನಂ 12 ರ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಎದೆಹಾಲು ಅಮೃತಕ್ಕೆ ಸಮಾನ ಅದ್ದರಿಂದ ಎಲ್ಲಾ ತಾಯಂದಿರು ಹೆರಿಗೆಯಾದ ಒಂದು ಗಂಟೆಯ ಒಳಗೆ ಎದೆಹಾಲು ಮಕ್ಕಳಿಗೆ ಕುಡಿಸಬೇಕು. 

ಎರಡು ದಿನಗಳಲ್ಲಿ ಬರುವ ಗಿಣ್ಣದ ಹಾಲಿನಲ್ಲಿ ಕೊಲೆಸ್ಟ್ರಮ್ ಅಂಶ ಇದ್ದು ಇದು ತುಂಬಾ ಪೌಷ್ಟಿಕ ದಿಂದ ಕೂಡಿರುತ್ತದೆ ಅದ್ದರಿಂದ ತಾಯಂದಿರು ಮರೆಯದೆ ಎದೆ ಹಾಲು ಮಕ್ಕಳಿಗೆ ನೀಡಬೇಕು. ಆರು ತಿಂಗಳವರೆಗೆ ಎದೆ ಹಾಲು ಮಾತ್ರ ಕೊಡಬೇಕು. ಜೇನು ತುಪ್ಪ, ಸಕ್ಕರೆ ನೀರು, ಬೇರೆ ಹಾಲು ಕುಡಿಸಬಾರದು. ಗರಿಷ್ಠ ಎರಡು ವರ್ಷದವರೆಗೆ ಎದೆಹಾಲು ಕೊಡುವುದರಿಂದ ಮಗುವಿನ ಸರ್ವಾಂಗೀಣ ಬೆಳವಣೆಗೆ ಆಗುವುದು ಅಲ್ಲದೆ ತಾಯಿ ಎದೆ ಹಾಲು ಕುಡಿಸುವದರಿಂದ ಎದೆ ಕ್ಯಾನ್ಸರ್, ಗರ್ಭಾಶಯ ಕ್ಯಾನ್ಸರ್ ಬರುವದಿಲ್ಲ ಎಂದು ತಿಳಿಸಿದರು. 

ಜಾಹಿರಾತು

ನಂತರ ಅತಿಥಿಗಳಾಗಿ ಆಗಮಿಸಿದ ಶಿಶು ಅಭಿವೃದ್ಧಿ ಅಧಿಕಾರಿ ಎಸ್.ಎನ್.ಕೊರವಾರ ಮಾತನಾಡಿ ಎದೆ ಶ್ರೇಷ್ಠ ವಾದದ್ದು..ಮೇಲಿನ ಹಾಲು,ಬಾಟಲ್ ಹಾಲು ಕುಡಿಸಬಾರದು,ತಾಯಿ ಮಗುವಿಗೆ ಎದೆ ಹಾಲು ಪ್ರಥಮ ಲಸಿಕೆ ಇದ್ದಂತೆ ಅದರಿಂದ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು.

 ಕಾರ್ಯಕ್ರಮ ದಲ್ಲಿ ಪಿ.ಎಚ್.ಸಿ.ಒ ಜೆ.ಕೆ.ಚಿಕ್ಕರಡ್ಡಿ ,ಆಶಾ ಸುಗಮಕಾರರಾದ ರೂಪಾ ಆಲಮೇಲ,ಆಶಾ ಕಾರ್ಯಕರ್ತೆ ಗೀತಾ ಕೂಚಬಾಳ ಅಂಗನವಾಡಿ ಕಾರ್ಯಕರ್ತೆ ದುಂಡಮ್ಮ  ಕೋರಬುಯರು ಇದ್ದರು. ,ಅಂಗನವಾಡಿ ಮೇಲ್ವಿಚಾರಕಿ ಸುನೀತಾ ಕಪ್ಪೇನವರ ಕಾರ್ಯಕ್ರಮ ನಿರೂಪಿಸಿದರು.

ಜಾಹಿರಾತು