ವಾರದ ಕುಟುಂಬದಿಂದ ಉಚಿತ ಆರೋಗ್ಯ ಶಿಬಿರ

ಪೂಜ್ಯ ಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ಸಾರಂಗಮಠ, ಸಿಂದಗಿ ಹಾಗೂ ಲಿಂ.ಡಾ.ಆರ್.ಆರ್. ವಾರದ ಅವರು ತೃತೀಯ ಪುಣ್ಯಸ್ಮರಣೆ ಅಂಗವಾಗಿ ಉಚಿತ ನೇತ್ರ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಉಚಿತ ಚರ್ಮರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು. 

ಜಾಹಿರಾತು

ಸಿಂದಗಿ : ಮೌನಾಚರಣೆ ಯಲ್ಲಿರುವ  ಪೂಜ್ಯ ಷ.ಬ್ರ. ಡಾ|| ಪ್ರಭು ಸಾರಂಗದೇವ ಶಿವಚಾರ್ಯರು ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು.

ಪಟ್ಟಣದ ಸಾರಂಗಮಠದಲ್ಲಿ ನಡೆದ ಆರೋಗ್ಯ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅಶೋಕ ವಾರದ ಇಂದು ಆರೋಗ್ಯ ಶಿಬಿರ ಮಾಡುವುದರಿಂದ ಹಲವಾರು ಬಡ ಜನರಿಗೆ ಉಪಯೋಗವಾಗಲಿ ಎಂಬ ಉದ್ದೇಶವಿಟ್ಟು ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ಕೆಲ  ಜನರಿಗೆ‌ ಆರೋಗ್ಯ ಸಮಸ್ಯೆ ಇದ್ದರೂ ಆರ್ಥಿಕ ಸಮಸ್ಯೆ ಇರುವುದರಿಂದ  ಆಸ್ಪತ್ರೆಗೆ ಹೋಗುವುದು ಆಗುವುದಿಲ್ಲ ಅಂತಹವರಿಗೆ ಆರೋಗ್ಯ ಶಿಬಿರಗಳು ಆಸರೆಯಾಗಬಹುದು. ಅಂತಹವರ ಕುಟುಂಬದ ಕಷ್ಟಗಳಲ್ಲಿ  ನಮ್ಮ ವಾರದ ಕುಟುಂಬದಿಂದ ನಡೆಯುತ್ತಿರುವುದು ಆತ್ಮತೃಪ್ತಿ ತಂದಿದೆ ಎಂದರು. 

ಚರ್ಮರೋಗ ವೈದ್ಯ ಡಾ.ಸಿದ್ರಾಮಪ್ಪ ಆರ್ ವಾರದ  ಎಮ್.ಡಿ ಚರ್ಮರೋಗ ವೈದ್ಯರು, ಹಾಗೂ ಡಾ.ವಿಜಯಲಕ್ಷ್ಮಿ  ಎಸ್.ವಾರದ ಇವರು  ಶಿಬಿರದಲ್ಲಿ ಒಟ್ಟು 45 ಚರ್ಮರೋಗಿಗಳಿಗೆ ತಪಾಸಣೆ ನಡೆಸಿ ಅವರಿಗೆ ಅವಶ್ಯಕತೆ ಇರುವ ಔಷಧಿಗಳನ್ನು ಉಚಿತವಾಗಿ ನೀಡಿದರು.

ಕಣ್ಣಿನ ತಪಾಸಣೆಗೆಂದು ಆಗಮಿಸಿದ 100 ಜನರಿಗೆ ತಪಾಸಣೆ ಮಾಡಿ ಅದರಲ್ಲಿ 45 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ತಿಳಿಸಲಾಗಿದೆ. ಎಂದು ವೈದ್ಯರಾದ ಸುಷ್ಮಾ ವಿ. ವಾರದ  ಹಾಗೂ ವಂದನಾ ಎಸ್.ಕಾಮಶೆಟ್ಟಿ ತಿಳಿಸಿದರು. 

ಡಾ.ವಾರದ ಚರ್ಮರೋಗ ದವಾಖಾನೆ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಇವರ ಸಹಯೋಗದಲ್ಲಿ ಆರೋಗ್ಯ ಶಿಬಿರ ನಡೆಯಿತು. ಆರೋಗ್ಯ ಶಿಬಿರದಲ್ಲಿ ನೆಹರು ಪೋರವಾಲ ಸೇರಿದಂತೆ ವಾರದ ಕುಟುಂಬ ಭಾಗವಹಿಸಿದ್ದರು ನೂರಾರು ರೋಗಿಗಳು ಚಿಕಿತ್ಸೆ ಪಡೆದರು.

ಜಾಹಿರಾತು