ಸುದ್ಧಿಗೆ ಸ್ಪಂದನೆ
ಡಿ.ದೇವರಾಜ ಅರಸ್ ಮೇಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ನಾಳೆ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ.
ಸಿಂದಗಿ : ಪಟ್ಟಣದ ಹಳೆಯ ಚಾಂದಕವಠೆ ರಸ್ತೆ ಹತ್ತಿರ ಇರುವ ವಸತಿ ನಿಲಯದ ಕಾಮಗಾರಿ ಹಲವಾರು ದಿನಗಳಿಂದ ಕಟ್ಟಡ ಪೂರ್ಣಗೊಂಡರು ಅದನ್ನು ಉಪಯೋಗಿಸದೆ ಹಾಳು ಬಿಳಿಸಲಾಗಿತ್ತು. ಇದರ ಕುರಿತು ವೇಗದೂತ ಜನದನಿ ಸುದ್ಧಿ ಮಾಡಿ ಅಧಿಕಾರಿಗಳಿಗೆ ಎಚ್ಚರಿಸಿತ್ತು. ವರದಿಗೆ ಎಚ್ಚೇತ ಅಧಿಕಾರಿಗಳು ವಸತಿ ನಿಲಯ ಉದ್ಘಾಟನೆಗೆ ನಾಳೆ ಮೊಹರ್ತ ಇಟ್ಟಿದ್ದು, ಹಲವು ದಿನಗಳಿಂದ ಪೋಲಿಗಳ ತಾಣವಾಗಿದ್ದ ವಸತಿ ನಿಲಯ ಉದ್ಘಾಟನೆಯಾಗುತ್ತಿರುವುದು ಅಲ್ಲಿನ ಸ್ಥಳಿಯ ಜನತೆಗೆ ಖುಷಿ ತಂದಿದೆ.
ವಸತಿ ನಿಲಯದ ಮೇಲ್ವಿಚಾರಕಿ ವಿಜಯಲಕ್ಷ್ಮಿ ಹದಗಲ್ಲ ವಸತಿ ನಿಲಯ ಉದ್ಘಾಟನೆ ಸಂತಸ ಮೂಡಿಸಿದೆ ಹಲವು ದಿನಗಳಿಂದ ಪಡುತ್ತಿರುವ ತೊಂದರೆ ಕೊನೆಗೂ ಮುಕ್ತಿ ಸಿಕ್ಕಂತಾಗಿದೆ. ವೇಗದೂತ ಜನದನಿ ವರದಿಗೆ ಧನ್ಯವಾದಗಳು ಹೇಳಿದರು.
Leave a Reply