ವಕ್ಫ್ ಬೋರ್ಡ್ ರೈತರ ಆಸ್ತಿ ಎಂದು ಆದೇಶ ಹೋರಡಿಸಬೇಕು ; ಛಲವಾದಿ ನಾರಾಯಣಸ್ವಾಮಿ ಒತ್ತಾಯ

ಇದು ಕಾಂಗ್ರೆಸ್ ಆಸ್ತಿ ಕಬಳಿಸುವ ಹುನ್ನಾರದಿಂದ ವಕ್ಫ್ ಮೂಲಕ ರೈತರಿಗೆ, ಮಠಗಳಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಸಿಂದಗಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಮೊದಲು ಪರಿಶಿಷ್ಟ ವರ್ಗಗಳಿಗೆ ಮಿಸಲಿರುವ 187 ಕೋಟಿ ದುರ್ಬಳಕೆ ಹಗರಣದಲ್ಲಿ ಬಿಜೆಪಿ ಹೋರಾಟಕ್ಕಿಳಿದರೆ 187 ಅಲ್ಲಿ ಕೇವಲ 87ಕೋಟಿ ಎಂದು ಒಪ್ಪಿದಾಯಿತ್ತು. ಮುಡಾ ಹಗರಣದಲ್ಲಿ ಕದ್ದಿರುವ ಸೈಟ್ ಗಳು ರಾತ್ರೋ ರಾತ್ರಿ ವಾಪಸ್ ಕೋಟಿರುವುದಾಯಿತು. ಆದರು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಗ್ಗೋದಿಲ್ಲ ಬಗ್ಗೋದಿಲ್ಲ ಎಂಬುದು ಬಿಟ್ಟು ರಾಜಿನಾಮೆ ನೀಡಿಬೇಕು.

ವಕ್ಫ್ ಬೋರ್ಡ್ ಆಸ್ತಿಯನ್ನು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್. ಮಲ್ಲಿಕಾರ್ಜುನ ಖರ್ಗೆ, ಎನ್.ಎ.ಹ್ಯಾರಿಸ್, ಸಿ.ಎಂ.ಇಬ್ರಾಹಿಂ ಸೇರಿದಂತೆ ನಗರಗಳಲ್ಲಿನ ಪ್ರಮುಖ ವಕ್ಫ್ ಆಸ್ತಿ ಕಬಳಿಸಿದ ವರದಿ ಬಹಿರಂಗಗೊಂಡರು ಅವರ ವಿರುದ್ಧ ಕ್ರಮ ಜರುಗಿಸದೆ. ಇಡೀ ರಾಜ್ಯವೆ ವಕ್ಫ್ ಬೋರ್ಡಿನದು ಎಂಬುದು ಯಾವ ನ್ಯಾಯ? ಹಿಂದುಗಳನ್ನು ಗುರಿಯಾಗಿಸಿಕೊಂಡು ನೋಟಿಸ್ ನೀಡಲಾಗುತ್ತಿದೆ. ಇತಿಹಾಸವುಳ್ಳ ಸಿಂದಗಿಯ ವಿರಕ್ತಮಠದ ಆಸ್ತಿ ಸೇರಿದಂತೆ ಹಲವಾರು ರೈತರ ಮಠ, ಮಂದಿರಗಳ ಆಸ್ತಿಗಳನ್ನು ಕಬಳಿಸುವ ದೋಡ್ಡ ಹುನ್ನಾರ ಕಾಂಗ್ರೆಸ್ ಮಾಡುತ್ತಿದೆ. ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ರದ್ದು ಮಾಡಬೇಕೆಂದು ಆಗ್ರಹಿಸಿದರು.

ಇಂದು ನೋಟಿಸ್ ವಾಪಸ್ ಪಡೆಯುತ್ತೆವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಎಂಬ ಮಾಹಿತಿ ಬರುತ್ತಿದೆ ಆದರೆ ನೋಟಿಸ್ ನೂರು ನೀಡಿ ನೂರು ವಾಪಸ್ ಪಡೆಯಬಹುದು ಆದರೆ ದಾಖಲೆಗಳಲ್ಲಿರುವ ವಕ್ಫ್ ಬೋರ್ಡ್ ಆಸ್ತಿ ಎಂಬುದು ತೆಗೆದುಹಾಕಲು ಸುಪ್ರೀಂ ಕೋರ್ಟ್ ಗೂ ಹೋಗುವಂತಿಲ್ಲ ವಕ್ಫ್ ಮಂಡಳಿಯಲ್ಲಿಯೆ ಹೋಗಬೇಕು. ಅವರೆ ದುರುದ್ದೇಶ ಪೂರ್ವಕವಾಗಿ ಸೇರಿಸಿರುವುದರಿಂದ ಅಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ. ಆದರಿಂದ ವಕ್ಫ್ ಬೋರ್ಡ್ ಖುದ್ದಾಗಿ ರೈತರ ಆಸ್ತಿ ಎಂದು ದಾಖಲೆಗಳಲ್ಲಿ ಘೋಷಿಸಬೇಕೆಂದು ಹೇಳಿದರು.

ಮಾಜಿ ಶಾಸಕ ರಮೇಶ ಭೂಸನೂರ,ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಚಿದಾನಂದ ಛಲವಾದಿ, ಶ್ರೀಕಾಂತ ಬಿಜಾಪುರ, ಪೀರು ಕೆರೂರ, ಮಲ್ಲು ಪೂಜಾರಿ, ಸೇರಿದಂತೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

https://youtu.be/QCh8s8dlXyA?si=eUwy000dYukO0mMY

https://www.facebook.com/share/v/3ML43GE64ZKTzz5K/