ರೈತರ ಹಲವು ಬೇಡಿಕೆಗಳಿಗಾಗಿ ಬೆಂಗಳೂರು ಚಲೋ

ಸಿಂದಗಿ: ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಖಾಸಗಿ ಕರಣ ಬಿಲ್ಲ್ ಅನ್ನು ಕೈ ಬಿಡಬೇಕು ರೈತರ ಪಂಪಸಟ್ ಗಳಿಗೆ ಮೀಟರ್ ಅಳವಡಿಸುವ ಕಾರ್ಯ  ರೈತರ ಹೊಟ್ಟೆ ಮೇಲೆ  ಬೇರೆ ಎಳದಂತಾಗುತ್ತದೆ.

ರಾಜ್ಯ ಸರಕಾರ ರೈತರ ಬೆಳೆಗಳಿಗೆ ಕಾನೂನಾತ್ಮಕ ಬೆಲೆ ನಿಗದಿ ಮಾಡಬೇಕು ತರಕಾರಿ ಬೆಳೆಗೆ ಕೇರಳ ಮಾದರಿಯಲ್ಲಿ ಬೆಲೆ ನಿಗದಿಪಡಿಸಬೇಕು.

ರಾಜ್ಯಾದ್ಯಂತ ರೈತರ ಕಬ್ಬು ಬೆಳೆಗೆ ಕಾರ್ಖಾನೆಗಳು ಒಂದೊಂದು ಬೆಲೆ ನಿಗದಿ ಮಾಡುತ್ತಿದು, ರಾಜ್ಯಾದ್ಯಂತ ಒಂದೆ ದರವನ್ನು ನಿಗದಿಪಡಿಸಬೇಕು.

ಸರಕಾರದ  ಗೋಮಾಳ ಜಾಗವನ್ನು ಉದ್ಯಮಿಗಳಿಗೆ, ಸಂಘ-ಸಂಸ್ಥೆಗಳಿಗೆ ನೀಡುತ್ತಿರುವುದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಖಂಡಿಸುತ್ತದೆ. ಇನ್ನು ಹಲವಾರು ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ  ಇದೆ ಸೆಪ್ಟೆಂಬರ್ 12ರಂದು ವಿಧಾನಸಭೆ ಕಲಾಪ ಆರಂಭ ವಾಗುತ್ತಿದೆ ಆದಕಾರಣದಿಂದ ರೈತರ ಸಂಕಷ್ಟಗಳನ್ನು ಸರಕಾರಕ್ಕೆ ಮನವರಿಕೆ ಮಾಡಿ  ಮಲಗಿರುವ ಸರ್ಕಾರವನ್ನು ಎಚ್ಚರಿಸಲು ದಿನಾಂಕ 12-09-2022ರಂದು ರೈತ ಸಂಘದ ರಾಜ್ಯಾಧ್ಯಕ್ಷರಾದ  ವಾಸುದೇವ ಮೇಟಿ ಇವರ ನೇತೃತ್ವದಲ್ಲಿ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಂಡಿದ್ದು ವಿಜಯಪುರ ಜಿಲ್ಲೆಯ ಎಲ್ಲ ರೈತರು ಹೋರಾಟಕ್ಕೆ ಆಗಮಸಿ  ಹೋರಾಟ ಯಶಸ್ವಿಗೋಳಿಸಬೇಕೆಂದು ರಾಜ್ಯ ಕಾರ್ಯದರ್ಶಿ ಪೀರು ವಿ.ಕೇರೂರ ಎಪಿಎಂಸಿ ಯ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಾ ಮಣ್ಣೂರ, ಜಿಲ್ಲಾ ಉಪಾಧ್ಯಕ್ಷ ಸಿದ್ದು ಯಂಕಂಚಿ, ಅಮೋಘಸಿದ್ಧ ಯಂಕಂಚಿ    ಆಲಮೇಲ ಅಧ್ಯಕ್ಷ ಗುರಪ್ಪ ನಾಟೀಕಾರ, ಶಂಕರ ದಶವಂತ, ಉಪಸ್ಥಿತರಿದ್ದರು ಸಿಂದಗಿ ತಾಲ್ಲೂಕು ಅಧ್ಯಕ್ಷರಾದ  ಮಂಜುನಾಥ ಬಿರಾದಾರ ಸ್ವಾಗತಿಸಿದರು.