ಸಿಂದಗಿ : ನಮ್ಮ ಮೀಸಲಾತಿ ಹೋರಾಟಕ್ಕೆ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ ಇಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತಿದ್ದೆವೆ ಮುಂದಿನ ದಿನಮಾನಗಳಲ್ಲಿ ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಗೌರವಾಧ್ಯಕ್ಷ ಚಂದ್ರಶೇಖರ ನಾಗರಬೇಟ್ಟ ಹೇಳಿದರು.
ಬಸವೇಶ್ವರ ವೃತ್ತದ ಹತ್ತಿರ ಜಮಾವಣೆಗೊಂಡ ಪಂಚಮಸಾಲಿ ಸಮಾಜದ ಹಲವು ಮುಖಂಡರು ಅಲ್ಲಿನ ಚತುರಮಖದ ಮುಖ್ಯರಸ್ತೆ ಬಂದ್ ಮಾಡಿ ಹೋರಾಟದ ಕುರಿತು ಮಾತನಾಡಿದ ಅವರು ನಮ್ಮ ಸಮಾಜ ಒಗ್ಗಟಾಗಿದೆ ನಮ್ಮ ಬೇಡಿಕೆಗಳು ಈಡೇರಿಸದೆ ಇದ್ದರೆ ಮುಂದಿನ ದಿನಮಾನಗಳಲ್ಲಿ ಬೊಮ್ಮಾಯಿ ಸರಕಾರಕ್ಕೆ ತಕ್ಕ ಮುತ್ತರ ಪಂಚಮಸಾಲಿ ಸಮುದಾಯ ನೀಡುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಮಾತನಾಡಿದ ಸಮಾಜದ ಮುಖಂಡ ಆನಂದ ಶಾಬಾದಿ 750 ಕಿ.ಮೀ ಪಾದಯಾತ್ರೆ ಯನ್ನುಮಾಡಿ ಸುಮಾರು 10 ಲಕ್ಷ ಜನರೊಂದಿಗೆ ಬೆಂಗಳೂರಿನ ಪ್ರಿಡಂ ಪಾರ್ಕ್ ನಲ್ಲಿ ಹೋರಾಟ ಮಾಡಿದ್ದು ಹಾಗೂ ಇಗ ನಿರಂತರವಾಗಿ 50 ದಿನಗಳಿಂದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಜಿಗಳು ಹೋರಾಟ ಮಾಡುತ್ತಿದ್ದಾರೆ. ಆದರೆ ಇಂದು 2ಎ ಮೀಸಲಾತಿ ನೀಡುವೆವು ನಾಳೆ ನೀಡುವೆವು ಎಂಬ ಮಾತುಗಳು ಕೇಳಿ ಜನರು ರೋಷಿ ಹೋಗಿದ್ದಾರೆ ಮಾರ್ಚ 15 ರೊಳಗಾಗಿ ಸರಕಾರ ನಮ್ಮ ಬೇಡಿಕೆ ಇಡೇರಿಸದಿದ್ದರೆ ಅದರ ಪರಿಣಾಮ ಸರಕಾರ ೆದುರಿಸಬೇಕಾಗುತ್ತದೆ ಎಂದರು. ಜೆಡಿಎಸ್ ತಾಲೂಕಾಧ್ಯಕ್ಷ ದಾನಪ್ಪಗೌಡ ಚನ್ನಗೊಂಡ ಹಾಗೂ ವಿಶ್ವನಾಥ ಕುರಡೆ ಮಾತನಾಡಿದರು.
ಪ್ರತಿಭಟನೆ ವೇಳೆ 1 ಕಿಲೋ ಮೀಟರ್ ಗು ಅಧಿಕವಾಗಿ ವಾಹನಗಳ ದಟ್ಟಣೆ ಕಂಡುಬಂತು. ಸಮಾಜದ ಪ್ರಮುಖ ರಾಜಕೀಯ ಮುಖಂಡರ ಗೈರು ಹಾಜರಾತಿ ಎದ್ದುಕಾಣುತಿತ್ತು. ಚುನಾವಣೆ ಸಂಭಂದವಾಗಿ ಅವರು ಗೈರಾಗಿದ್ದಾರೆ ಅವರು ನಮ್ಮ ಜೊತೆಗಿದ್ದಾರೆ ಎಂದು ಸಮಾಜದ ಅಧ್ಯಕ್ಷರಾದ ಎಮ್.ಎಮ್.ಹಂಗರಗಿ ಸ್ಪಷ್ಟನೆ ನೀಡಿದರು. ಈ ಸಂದಂರ್ಭದಲ್ಲಿ ಸಿದ್ದಾರಾಮ ಪಾಟೀಲ ಹೊನ್ನಳ್ಳಿ, ಚನ್ನು ಹೊಡ್ಲ , ಕುಮಾರ ದೇಸಾಯಿ, ರಾಜು ಮುಜಗೊಂಡ, ಕಲ್ಯಾಣಿ ಬಿರಾದಾರ, ಕಾಳಪ್ಪಗೌಡ ಬಗಲಿ, ಗುರುಗೌಡ ಬಿರಾದಾರ, ಬಾಪುಗೌಡ ಬಿರಾದಾರ ಹಲವು ಸಮಾಜದ ಯುವಕರು ಮುಖಂಡರು ಉಪಸ್ಥಿತರಿದ್ದರು.
Leave a Reply