ಮೊಬೈಲ್ ಕಳ್ಳನಿಗೆ ಕಂಬಿ ರುಚಿ ತೋರಿಸಿದ ಭೀಮಪ್ಪ ರಬಕವಿ ತಂಡ

ಮೋಬೈಲ್ ಕಳ್ಳತನ ಮಾಡಿ ಪರಾರಿಯಾದ ಆರೋಪಿಯ ಬಂಧನ, ಕಾರ್ಯಾಚರಣೆಗೆ ಪೊಲೀಸ್ ಅಧೀಕ್ಷಕ ಎಚ್.ಡಿ.ಆನಂದಕುಮಾರ ಶ್ಲಾಘನೆ.

ಸಿಂದಗಿ : ಬಂಧಿತ ಆರೋಪಿಯನ್ನು ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದ ಮುತ್ತು ಶಂಕ್ರಪ್ಪ ಆಸಂಗಿ (25) ಎಂದು ಗುರುತಿಸಲಾಗಿದೆ. ಆರೋಪಿ ಪ್ರಸ್ತುತ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಎಂಬಲ್ಲಿ ವಾಸಿಸುತಿದ್ದ ಎಂದು ತಿಳಿಸಿದ್ದಾನೆ.

ಮೇ.25ರಂದು ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಓಂಕಾರ ಕೆಂಭಾವಿ ಅವರ ಮಾಲೀಕತ್ವದಲ್ಲಿರುವ ಓಂಕಾರ ಮೋಬೈಲ್ ಅಂಗಡಿಯಲ್ಲಿ ಮೋಬೈಲ್ ಕಳ್ಳತನ ಮಾಡಿದ್ದೂ, ಪ್ರಕರಣ ದಾಖಲಾಗಿತ್ತು.

https://vegadhut.com/?p=2195&noamp=mobile

ಪಟ್ಟಣದಲ್ಲಿ ಘಟಿಸುತ್ತಿದ್ದ ಕಳ್ಳತನದ ಪ್ರಕರಣಗಳ ಪತ್ತೆ ಕುರಿತು ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಚ್.ಡಿ. ಆನಂದಕುಮಾರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶಂಕರ ಮಾರಿಹಾಳ, ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಮತ್ತು ಸಿಂದಗಿ ಸಿಪಿಐ ಡಿ. ಹುಲುಗಪ್ಪರವರ  ಸಿಂದಗಿ ಪಿ.ಎಸ್.ಆಯ್. ಭೀಮಪ್ಪ. ಎಮ್. ರಬಕವಿ ಅವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಎಮ್.ಜಿ. ಪಾಟೀಲ, ಎ.ಎಸ್.ಐ, ಬಿ.ಎಲ್.ಪಟ್ಟೇದ, ಆರ್.ಎಲ್. ಕಟ್ಟಿಮನಿ, ಎಸ್.ಪಿ. ಹುಣಸಿಕಟ್ಟಿ, ಎಸ್. ಡಿ. ಚಾವರ, ಎಸ್. ಎಸ್. ಕೊಂಡಿ, ಪಿ. ಕೆ. ನಾಗರಾಳ, ಎಸ್. ಡಿ. ದೊಡಮನಿ ಇವರನ್ನು ಒಳಗೊಂಡ ಒಂದು ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು. 

   ತಂಡವು ಆರೋಪಿತರ ತಪಾಸಣೆಯಲ್ಲಿ ಇದ್ದಾಗ ಅಗಸ್ಟ್ 7ರಂದು ಬೆಳಿಗ್ಗೆ 09 ಗಂಟೆ ಸುಮಾರಿಗೆ ಸಿಂದಗಿ ಪಟ್ಟಣದ ಬಸ್ಸ್ ನಿಲ್ದಾಣದಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಆರೋಪಿತನಿಗೆ ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆತಂದು ವಿಚಾರಣೆ ಮಾಡಿ, 7,73,500/-ರೂ. ಕಿಮ್ಮತ್ತಿನ ಸ್ಯಾಮಸಂಗ್, ಓಪ್ಪೋ, ರೀಯಲ್‌ಮಿ, ಐ.ಪೋನ್ ಹಾಗೂ ಇತರೆ ಕಂಪನಿಯ ಒಟ್ಟು 24 ಮೊಬೈಲ್‌ಗಳನ್ನು ಜಪ್ತು ಮಾಡಿಕೊಂಡಿದ್ದಾರೆ.

ಈ ಪ್ರಕರಣ ಪತ್ತೆ ಕಾರ್ಯ ನಡೆಸಿದ ತಂಡದ  ಸಿಬ್ಬಂದಿಗಳ ಕರ್ತವ್ಯವನ್ನು ವಿಜಯಪುರ ಜಿಲ್ಲಾ ಪೋಲೀಸ್ ಅಧೀಕ್ಷಕರು ಶ್ಲಾಘನೀಯ ವ್ಯಕ್ತಪಡಿಸಿ ಬಹುಮಾನವನ್ನು ಘೋಷಿಸಿದ್ದಾರೆ.