ಹಲವು ದಿನಗಳಿಂದ ಸಿಂದಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಅತಿಕ್ರಮಣ ಗೊಂಡ ರಸ್ತೆ ಕಾರ್ಯಾಚರಣೆ ದೀಪಾವಳಿ ನಂತರ ಮತ್ತೆ ಬೂಲ್ಡೋಜರ್ ಸದ್ದು ಮಾಡಲು ಪ್ರಾರಂಭಿಸಿದೆ.
ಸಿಂದಗಿ : ಬಾಬಾಸಾಹೇಬ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ತೆರವು ಕಾರ್ಯಾಚರಣೆ ಟಿಪ್ಪು ಸುಲ್ತಾನ್ ವೃತ್ತಕ್ಕೆ ಬಂದು ದೀಪಾವಳಿ ಅಂಗವಾಗಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು.
ಇಂದು ಪುನಃ ತೆರವು ಕಾರ್ಯಾಚರಣೆಗೆ ಇಳಿದ ಪುರಸಭೆ ಸಿಬ್ಬಂದಿ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ತಮ್ಮನಾದ ತಮ್ಮಣ್ಣನವರ ಮಾಲಿಕತ್ವದ ಬಹುತೇಕ ಸ್ಟೆಪ್ಸ್ಗಳು ತೆರವು ಮಾಡಿದರು ಈ ಸಂದರ್ಭದಲ್ಲಿ ಮಾಜಿ ಶಾಸಕ ಶರಣ್ಣಪ್ಪ ಸುಣಗಾರ ಅವರು ಬೇಟಿ ನೀಡಿ ಯಾರದೆ ಆಗಿರಲ್ಲಿ ತೆಗೆಯಿರಿ ಅಭಿವೃದ್ಧಿ ದೃಷ್ಟಿಯಿಂದ ಸಹಕಾರ ಅಗತ್ಯ ಒಬ್ಬರಿಗೊಂದು ಇನ್ನೊಬ್ಬರಿಗೊಂದು ಮಾಡಬೇಡಿ ತೆರವಿನ ಸಮಯದಲ್ಲಿ ಹೇಚಿನ ಲಾಸ್ ಆಗುತ್ತಿದ್ದರೆ ಎರಡು ಮೂರು ದಿನಗಳ ಕಾಲಾವಕಾಶ ನೀಡಿ ಎಂದರು.
ಸಿಂದಗಿ ಅಗಸಿಯಲ್ಲಿರುವ ಬ್ಯಾಕೋಡ ಅವರ ಮಾಲಿಕತ್ವದ ಗೊಬ್ಬರ ಅಂಗಡಿ ಯಾಕೆ ತೆರವುಮಾಡಿಲ್ಲ ಎಂಬ ಗೂಡಾಂಗಡಿ ಜನರು ಶ್ರೀಮಂತರಿಗೆ ಒಂದು ನ್ಯಾಯ ಬಡವರಿಗೆ ಒಂದು ನ್ಯಾಯ ಎಂದು ಮಾತುಗಳು ಪ್ರಾರಂಭವಾಗುತ್ತಿರುವಾಗಲೆ ಸ್ಥಳಕ್ಕೆ ಬೇಟಿ ನೀಡಿದ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಸ್ಥಳ ಪರಿಶೀಲನೆ ನಡೆಸಿ ಸಂಪೂರ್ಣ ಕಟ್ಟಡವೇ ಕುಸಿದು ಬಿಳುವ ಸಾಧ್ಯತೆ ಇದೆ ಆದರಿಂದ ಮೂರುದಿನಗಳ ಹೇಚ್ಚುವರಿ ಕಾಲಾವಕಾಶ ನೀಡುತ್ತಿದೇನೆ ಅವರು ಸಹಕರಿಸುತ್ತಿದ್ದಾರೆ, ತೆಗೆದು ಕೊಳ್ಳದೆ ಇದ್ದರೆ ಸಿಬ್ಬಂದಿಗಳು ತೆಗೆಯುವುದು ನಿಶ್ಚಿತ ಎಂದರು.
ಚಿಕನ್, ಮಟನ್ ಅಂಗಡಿಗಳು ಶಿಪ್ಪಿಂಗ್
ಮುಂದುವರಿದು ಮಟನ್ ಮಾರ್ಕೆಟ್ ವಿಕ್ಷೀಸಿದ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಊರಲ್ಲಿ ಎಲ್ಲೆಂದರಲ್ಲಿ ಮಟನ್ ಚಿಕನ್ ಮಾರುವಂತಿಲ್ಲ. ಈಗಿನ ಮಟನ್ ಮಾರ್ಕೆಟ್ ಶೀತಲ ಗೊಂಡಿದೆ. ಅದನ್ನು ತೆರವುಗೊಳಿಸಿ ಶೇಡ್ ನಿರ್ಮಾಣ ಮಾಡಿಕೊಡುತ್ತೆನೆ ಎಂದರು. ಊರಲ್ಲಿ ಅಲ್ಲಲ್ಲಿ ಮಟನ್ ಚಿಕನ್ ಅಂಗಡಿಗಳಿಗೆ ನೋಟಿಸ್ ನೀಡಿ ಅವರಿಗೆ ಅಂಗಡಿಗಳು ಗುರುತಿಸಲಾಗುವುದೆಂದು ತಿಳಿಸಿದರು.
ವಿಡಿಯೋ ವರದಿಗಳು ಕೆಳಗಿನಂತಿವೆ.
https://www.facebook.com/share/v/15XpPnSCoa/
Leave a Reply