ಮರುಕಳಿಸಲಿ ಬಾವ್ಯಕ್ಯತೆಯಿಂದ ಆಚರಿಸುವ ಉತ್ಸವಗಳು- ಹಬ್ಬಗಳು

ಗಣೇಶ, ಮೊಹರಂ, ಜಯಂತಿಗಳು ಬಾವ್ಯಕ್ಯತೆಯಿಂದ ಜರುಗಲಿ.  ಸಿಂದಗಿ ಮಾದರಿಯಾಗಲಿ ಎಂಬ ಆಶಯದೊಂದಿಗೆ.

ಸಿಂದಗಿ :  ಪಟ್ಟಣದಲ್ಲಿ ಹಲವು ವರ್ಷಗಳ    ಹಿಂದೆ ಕೇಲ ಕೀಡಗೇಡಿಗಳು  ಸಾಮರಸ್ಯ ಕದಡುವ ಕಾರ್ಯಾಗಳು ಮಾಡಿದರ ಪರಿಣಾಮವಾಗಿ ಸಿಂದಗಿ ಕ್ಷೇತ್ರಕ್ಕೆ  ಕಳೆದ ಹತ್ತು ವರ್ಷಗಳಿಂದ ಕಪ್ಪು ಚುಕ್ಕೆ ಅಂಟಿದಂತಾಗಿದೆ.  2013 ರಲ್ಲಿ ಗಣೇಶ ವಿಸರ್ಜನೆ ಸಂಭ್ರಮದಿಂದ ಜರುಗುತಿತ್ತು. ಪ್ರಮುಖ  ರಸ್ತೆಗಳಿಂದ ಟಿಪ್ಪು ವೃತ್ತಕ್ಕೆ ಬಂದ ಗಜಾನನ ಮೆರವಣಿಗೆಯಲ್ಲಿ ಪಾಲ್ಗೊಂಡ ಕೆಲ ಕಿಡಗೇಡಿಗಳು ಪ್ರಚೋದನಕಾರಿ ಘೋಷಣೆಗಳು  ಅಲ್ಲಿ  ನಡೆದ ಘಟನೆಗಳಿಂದ   ಶಾಂತಿ ಕದಡಿತ್ತು. ಸುಕ್ಷ್ಮತೆಯಿಂದ ನೋಡಿದ ಪೊಲೀಸ್ ಇಲಾಖೆಯವರು ಶಾಂತಿ ಕಾಪಾಡುವಲ್ಲಿ ಯಶಸ್ವಿಯಾದರು.

ಮುಂದೆ ಬಂದ ಮುಸ್ಲಿಂ ಸಮುದಾಯ ಆಚರಿಸುವ ಮೊಹರಂ ನಲ್ಲಿ ಹಿಂದೂಗಳು ಭಾಗಿಯಾಗುತ್ತಿದ್ದರು  ಗಜಾನನ ವಿರ್ಸಜನೆಯಲ್ಲಿ ನಡೆದ ಘಟನೆಯ ಪರಿಣಾಮವೋ ಎನೋ  ಮೊಹರಂ  ಮತ್ತು ಟಿಪ್ಪು ಜಯಂತಿಗಳಲ್ಲಿ ಗಲಾಟೆಗಳು ಪ್ರಾರಂಭವಾದವು.  ಸಹೋದರತ್ವದಿಂದ  ಇದ ಸಮುದಾಯಗಳಲ್ಲಿ ಜಾತಿ, ಧರ್ಮ ಎಂಬ ವೈಷ್ಯಮೆಗಳು ಪ್ರಾರಂಭವಾದವು. ಇದನ್ನು ಗಮಿನಿಸುತ್ತಿದ್ದ ಪೊಲೀಸ್ ಇಲಾಖೆ 2014ರಲ್ಲಿ ನಡೆಯುವ ಗಜಾನನ ಮಂಡಳಿಗಳಿಗೆ  ಹಲವು ಕಾನೂನು ಮಾನದಂಡನೆಗಳು ಹಾಕಿದರು.  ಪ್ರಮುಖವಾಗಿ ವಿವೇಕಾನಂದ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತಕ್ಕೆ ತೆರಳುವ ಪ್ರಮುಖ ರಸ್ತೆಗೆ ಜಿಲ್ಲಾಧಿಕಾರಿಗಳಿ  ನಿರ್ಭಂದ ಹೇರಿ ಆದೇಶ ಹೊರಡಿಸಿದರು.

ಇದನ್ನು ಅತೀ ತಿರ್ವವಾಗಿ ಖಂಡಿಸಿದ ಗಜಾನನ ಮಂಡಳಿಗಳು ಅಸಮಾಧಾನ ಹೊರಹಾಕಿದರು. ವಿವೇಕಾನಂದ ಗಜಾನನ ಮಂಡಳಿ ಅಂದು ರಸ್ತೆ ಮದ್ಯದಲ್ಲಿ ಗಣೇಶನ ಇರಿಸಿ  ಪ್ರತಿಭಟನೆ  ಪ್ರಾರಂಭಿಸಿದರು ಅವರ ಪ್ರತಿಭಟನೆಯಿಂದ ಶಾಂತಿ ಕದಡುವ  ಮುನ್ಸುಚನೆ ಪಡೆದ ಪೊಲೀಸರ  ಅದನ್ನು ಗಂಭೀರವಾಗಿ  ತೆಗೆದುಕೊಂಡು ಪ್ರತಿಭಟನೆ ಮೊಟಕು ಗೊಳಿಸಲು ಲಾಠಿಚಾರ್ಜ್ ಮಾಡಿ 53 ಜನರ ಮೇಲೆ ಪ್ರಕರಣ ದಾಖಲು ಮಾಡಿದರು. ಕೇಲವರನ್ನು ಬಂದಿಸಿ ಸೇರೆವಾಸಕ್ಕೆ ತಳ್ಳಿದರು. ಹತ್ತು ವರ್ಷಗಳ ಕಾಲ ನ್ಯಾಯಾಲಯದ ಬಾಗಿಲು ಸುತ್ತಿದ ಎರಡು ಕೋಮಿನ ಜನರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.   ಇದೆ   3 ಮೇ 2023 ರಂದು  ನ್ಯಾಯಾಲಯವು ಸುದೀರ್ಘ ವಿಚಾರಣೆ ನಂತರ ಪ್ರಕರಣದಿಂದ  ಸ್ವತಂತ್ರಗೋಳಿಸಿದೆ.

ಹತ್ತು ವರ್ಷಗಳಿಂದ ಸಿಂದಗಿ ನಗರದಲ್ಲಿ ಬಾವ್ಯಕ್ಯತೆಯಿಂದ ನಡೆಯದ ಹಬ್ಬ ಹರಿದಿನಗಳ ಬಗ್ಗೆ ವೇಗದೂತ ಜನದನಿಗೆ ಪ್ರತಿಕ್ರಿಯಿಸಿದ ವಿವೇಕಾನಂದ ಗಜಾನನ ಮಂಡಳಿಯ ಉಪಾಧ್ಯಕ್ಷ   ಶಿವಾನಂದ ನಿಗಡಿ ಸುಮಾರು ವರ್ಷಗಳ ಹಿಂದೆ ನಡೆದ ಘಟನೆಯಿಂದಾಗಿ ಇದುವರೆಗೂ ಕಾನೂನು ನಿರ್ಭಂದನೆಗಳು ಮುಂದುವರೆಸಲಾಗುತ್ತಿದೆ. ಪೊಲೀಸ್ ಠಾಣೆಯಲ್ಲಿ ನಡೆಯುವ ಶಾಂತಿ ಸಭೆಯಲ್ಲಿ  ಎರಡು ಸಮುದಾಯದವರು ಸೇರಿ ಹೇಳಿದರು ಸ್ಪಂದನೆ  ಸಿಕ್ಕಿಲ್ಲ  ಕಾನೂನಿನ ಮಾನದಂಡನೆಗಳೆ ಹಿಂದೆ ನಡೆದ ಅಹಿತಕರ ಘಟನೆಗಳು ನೆನಪಿಸುತ್ತಿದೆ. ನಾವು ಭಾವನಾತ್ಮಕವಾಗಿ ಸಹೋದರತ್ವದಿಂದ ಇದೇವೆ  ಈ ಬಾರಿ ಗಜಾನನ ಮಂಡಳಿಯ  ಸಭೆ ಕರೆದು ಊರಿನ ಹಿರಿಯರೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೋಳ್ಳುವೆವು ಎಂದರು.

ಚಾಂದಗೌಡ ಬಿರಾದಾರ ಹಿರಿಯರು ಸಿಂದಗಿ ಪ್ರತಿಕ್ರಿಯೆ ನೀಡಿ ಜಗಳಗಳಲ್ಲಿ ಯಾವುದೇ ಲಾಭ ಇಲ್ಲ ಒಂದಾಗಿ ಹಬ್ಬಗಳು  ಆಚರಿಸಬೇಕು ಇವೇಲ್ಲ ಖಾಲಿ ಜಗಳಗಳು ನಮ್ಮ ಹಬ್ಬಕ್ಕೆ ಅವರನ್ನು ಆಮಂತ್ರಸಿಬೇಕು ಅವರ ಹಬ್ಬಗಳಲ್ಲಿ ನಾವು ಭಾಗಿಯಾಗಬೇಕು ಎಂದರು.

ಎರಡು ಜಾತಿಗಳು ಒಂದೇ  ಜಾತಿಗಳು ಸಂಬಂದವಿಲ್ಲ ಕೆಲವರ  ಕೆಟ್ಟ ಮನಸ್ಥಿತಿಯಿಂದ  ಈ ಬಿನ್ನಾಭಿಪ್ರಾಯಗಳು  ಆಗಿವೆ  ಈಗ ಭಾವನೆಗಳು ಬದಲಾಗಿವೆ ಎಲ್ಲರು ಸೇರಿ ಹಬ್ಬ ಮಾಡಬೇಕು ಎಂದು  ಸ್ಥಳಿಯ ವ್ಯಾಪಾರಿ ಮಹ್ಮದ ನಾಸೀರ ಹೇಳಿದರು.

ಗಜಾನನ ಮಹಾ ಮಂಡಳಿ ಮಾಡುವುದು ಕೇವಲ ವಿವೇಕಾನಂದ ಮಂಡಳಿಗೆ ಮಾತ್ರ ಸೀಮಿತವಲ್ಲ ಉಳಿದ ಮಂಡಳಿಗಳು ಮಹಾ ಮಂಡಳಿಯ ನೇತೃತ್ವ ವಹಿಸಲಿ ನಾವು ಅವರೊಂದಿಗೆ ಕೆಲಸ ಮಾಡುತ್ತೇವೆ -ಶಿವಾನಂದ ನಿಗಡಿ ಉಪಾಧ್ಯಕ್ಷ ವಿವೇಕಾನಂದ ಗಜಾನನ ಮಂಡಳಿ