ಪಟ್ಟಣದ ಆರ್.ಡಿ.ಪಾಟೀಲ ಪದವಿ-ಪೂರ್ವ ಕಾಲೇಜಿನಲ್ಲಿ ಪೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವ್ಹಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಆಯ್.ಪಿ.ನಾಯಕ ಉದ್ಘಾಟಿಸಿದರು.
ಸಿಂದಗಿ: ಜೀವನ ವಿವಿಧ ಹಂತಗಳಲ್ಲಿ ಸರಿಯಾದ ಮಾರ್ಗ ಆಯ್ಕೆ ಮಾಡಿಕೊಳ್ಳುವುದರ ಅಗತ್ಯವಿದೆ. ಪ್ರೀತಿ, ಪ್ರೇಮ, ಪ್ರಣಯ ಎಂದು ಅಡ್ಡದಾರಿ ಹಿಡಿಯದೇ ಸರಿಯಾದ ಮಾರ್ಗ ಆಯ್ಕೆ ಮಾಡಬೇಕು ಮೊಬೈಲ್ ಗೀಳಿಗೆ ಒಳಗಾಗಬಾರದು ಎಂದು ಹಿರಿಯ ಸಿವ್ಹಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಆಯ್.ಪಿ.ನಾಯಕ ಹೇಳಿದರು.
ಸಿಂದಗಿ ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಸಿಂದಗಿ ಮತ್ತು ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಪೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಜೀವನ ಹೂವಿನಂತೆ ಅರಳಬೇಕು. ಇಂದಿನ ಮಕ್ಕಳಿಗೆ ಸ್ಪರ್ಷ ಜ್ಞಾನದ ಅಗತ್ಯವಿದೆ. ದೇಶ ಸಾಕಷ್ಟು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದರೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಶೋಷಣೆ ಪ್ರಕರಣಗಳು ಮಾತ್ರ ಇನ್ನೂ ನಿಂತಿಲ್ಲ. ಪೋಕ್ಸೋ ಕಾಯ್ದೆ ಬಗ್ಗೆ ಮಕ್ಕಳು, ಪೋಷಕರು, ಶಿಕ್ಷಕರಲ್ಲಿ ಸಮರ್ಪಕವಾಗಿ ಅರಿವಿಲ್ಲದ ಕಾರಣ ಬಹುತೇಕ ಪ್ರಕರಣಗಳು ವರದಿಯೇ ಆಗುವುದಿಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಎಂದು ತಿಳಿಸಿದರು.
ಈ ವೇಳೆ ಪೋಕ್ಸೋ ಕಾಯ್ದೆ ಕುರಿತು ವಕೀಲ ಎಸ್.ಬಿ.ಪಾಟೀಲ ಉಪನ್ಯಾಸ ನೀಡಿದ ಅವರು, ಪೋಕ್ಸೋ ಕಾಯ್ದೆ ಪ್ರಕಾರ ದೌರ್ಜನ್ಯವೆಸಗುವ ಅಪರಾಧಿಗಳಿಗೆ ನೀಡುವ ಶಿಕ್ಷೆಯ ಸ್ವರೂಪ ಕಠಿಣವಾಗಿವೆ. ಅಸಭ್ಯ ನಡವಳಿಕೆಯನ್ನೂ ಹಗುರವಾಗಿ ಪರಿಗಣ ಸುವಂತಿಲ್ಲ. ಕನಿಷ್ಠ 5 ವರ್ಷದ ಶಿಕ್ಷೆಗೆ ಅರ್ಹವಾದ ಅಪರಾಧವಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ವಿದ್ಯಾರ್ಥಿನಿಯರು ಧೈರ್ಯವಾಗಿ ಮುಂದೆ ಬರಬೇಕು. 2019ರ ಕಾಯ್ದೆ ತಿದ್ದುಪಡಿಯಿಂದಾಗಿ ಆರೋಪಿಗಳಿಗೆ ದಂಡ ವಿಧಿಸುವುದರ ಜತೆಗೆ 10 ವರ್ಷಕ್ಕಿಂತ ಹೆಚ್ಚು ಕಠಿಣ ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿದೆ.
ಇದೇ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ದೊಡಮನಿ, ಸಹಾಯಕ ಸರಕಾರಿ ವಕೀಲ ಆನಂದ ರಾಠೋಡ, ಅಪರ ಸರಕಾರಿ ವಕೀಲ ಎಂ.ಎಸ್.ಪಾಟೀಲ, ಪ್ರಾಚಾರ್ಯ ವಿಮಲಕಾಂತ ಪಾಟೀಲ, ಬಿ.ಎಂ.ಸಿಂಗನಳ್ಳಿ, ಪಿ.ವ್ಹಿ.ಮಹಲಿನಮಠ, ಎನ್.ಬಿ.ಪೂಜಾರಿ, ಗವಿಸಿದ್ದಪ್ಪ ಆನೆಗುಂದಿ, ಎಸ್.ಆರ್.ಬೂದಿಹಾಳ, ವ್ಹಿ.ಪಿ.ನಂದಿಕೋಲ, ಎಸ್.ಎಚ್.ಜಾಧವ, ವ್ಹಿ.ಕೆ.ಹಿರೇಮಠ, ಎಂ.ಐ.ಮುಜಾವರ, ರೋಹಿತ ಸುಲ್ಪಿ, ಎನ್.ಎಂ.ಶೆಳ್ಳಗಿ, ಸಂಗಮೇಶ ಚಾವರ, ಆರ್.ಎಂ.ಕೊಳ್ಳೂರೆ, ನೀಲಕಂಠ ಮೇತ್ರಿ, ರಾಹುಲ ನಾರಾಯಣಕರ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
Leave a Reply