ಸಿಂದಗಿ: ತಾಲೂಕಿನ ವಿವಿಧ ಗ್ರಾಮದ ಬ್ರಾಹ್ಮಣ ಸಮಾಜದ ಭಾಂದವರು ಪ್ರತಿವರ್ಷದಂತೆ ಈ ವರ್ಷವೂ ಸಹ ಮಂತ್ರಾಲಯಕ್ಕೆ ಹೊರಟಿದ್ದಾರೆ ಎಂದು ಮಠದ ಅರ್ಚಕರಾದ ವಿಠ್ಠಲಾಚಾರ್ಯರು ಹೇಳಿದರು.
ನಗರದ ಶ್ರೀಗುರು ರಾಘವೇಂದ್ರ ಸ್ವಾಮಿಗಳ ದೇವಸ್ಥಾನದಲ್ಲಿ ಸೋಮವಾರ ನಡೆದ ಪಾದಯಾತ್ರಿಕರಿಗೆ ಶುಭ ಹಾರೈಸಿ ಮಾತನಾಡಿದ ಅವರು, ಶ್ರೀಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದ28 ವರ್ಷಗಳಿಂದ ಮಂತ್ರಾಲಯಕ್ಕೆ ಹೊರಡುತ್ತಿದ್ದು, ಅವರ ಈ 28ನೆಯ ಪಾದಯಾತ್ರೆಯು ಶುಭವಾಗಲಿ ಹಾಗೂ ವರ್ಷದಿಂದ ವರ್ಷಕ್ಕೆ ಪಾದಯಾತ್ರಿಗಳ ಸಂಖ್ಯೆ ಹೆಚ್ಚುತ್ತಿದ್ದು ಶ್ರೀಗುರು ರಾಘವೇಂದ್ರ ಸ್ವಾಮಿಗಳು ಅವರಿಗೆ ಮತ್ತಷ್ಟು ಅನುಗ್ರಹಿಸಲಿ ಎಂದರು.
ಈ ವೇಳೆ ಡಾ.ಡಿ.ಕೆ ಕುಲಕರ್ಣಿ, ಶ್ರೀಪಾದ ಕುಲಕರ್ಣಿ(ಕಾಚಾಪುರ), ಅಶೋಕ ಕುಲಕರ್ಣಿ (ಗಬಸಾವಳಗಿ), ಆನಂದ ಪೊದ್ದಾರ, ಶ್ರೀಕಾಂತ ಕುಲಕರ್ಣಿ, ಸಂಗು ಹುಣಸಗಿ, ರಾಘವೇಂದ್ರ ಕುಲಕರ್ಣಿ, ಪ್ರಹ್ಲಾದ ಪಾಟೀಲ (ಹಡಗಿನಾಳ), ಶಾಮಲಾ ಜಾಗಿರದಾರ, ಅನ್ನಪುರ್ಣ ಕುಲಕರ್ಣಿ, ಪದ್ಮಾವತಿ ಕುಲಕರ್ಣಿ, ಸಂಗೀತಾ ಕುಲಕರ್ಣಿ, ಸಾವಿತ್ರಿ ಕುಲಕರ್ಣಿ, ಪಲ್ಲವಿ ಕುಲಕರ್ಣಿ, ಆಶಾ ಪೊದ್ದಾರ ಸೇರಿದಂತೆ ಅನೇಕರಿದ್ದರು.
Leave a Reply