ಸಿಂದಗಿ: ಮುಸ್ಲಿಂರು ಬಿಜೆಪಿಗೆ ಬೆಂಬಲ ಕೊಡುತ್ತಿಲ್ಲ ಕೆಲವು ವ್ಯಕ್ತಿಗಳು ಮಾತ್ರ ಹೋಗಿದಕ್ಕೆ ಸಮಾಜವೆ ಹೋಗಿದೆ ಎಂಬುದು ತಪ್ಪು ಎಂದು ಕಾಂಗ್ರೇಸ್ ಪಕ್ಷದ ವಕ್ತಾರರಾದ ಎಸ್.ಎಂಪಾಟೀಲ ಗಣಿಯಾರ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಚುನಾವಣೆಗು ಮುನ್ನ 2ಬಿ ಮಿಸಲಾತಿಯನ್ನು ಬಿಜೆಪಿ ಪಕ್ಷ ಕೈ ಬಿಟ್ಟಿರುವುದು ರಾಜ್ಯವ್ಯಾಪಿ ವಿರೋಧವ್ಯಕ್ತ ಪಡಿಸಲಾಗುತ್ತಿದೆ. ಬಿಜೆಪಿಯು ಗೋಹತ್ಯೆ ನೆಪದಲ್ಲಿ ಮುಸ್ಲಿಂರನ್ನು ಹಿಂಸಿಸಲಾಗುತ್ತಿದೆ, ಹಿಜಾಬ್ ವಿಷಯವನ್ನು ನ್ಯಾಯಾಲಯದ ವರೆಗೆ ತೆಗೆದುಕೊಂಡು ಹೋದರು, ಗುಡಿ-ಮಂದಿರಗಳ ಮುಂದೆ ಮುಸ್ಲಿಂರು ವ್ಯಾಪಾರ ಮಾಡಬೇಡಿ ಎಂದು ತಡೆಹಿಡಿದರು, ಅಜಾನ್ ಗಳು ಬಂದ್ ಮಾಡುವಂತೆ ಕಾನೂನು ತಂದರು, ಹಲಾಲ್ ಕಟ್- ಜಟಕಾ ಕಟ್ ಎಂದು ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡಿದರು. ಆಡಳಿತದಿಂದ ಮುಸ್ಲಿಂರನ್ನು ಹೊರಗಿಡಲಾಗುತ್ತಿದೆ, ಈ ದೇಶದ ಸಂಪತ್ತಿನಲ್ಲಿ ಮುಸ್ಲಿಂರ ತೆರಿಗೆ ಹಣವು ಇದೆ ಆದರೆ ಮುಸ್ಲಿಂರ ಹತ್ಯಗಳಾದಾಗ ಅವರ ಮನೆಗೆ ಪರಿಹಾರ ಸಿಗುವುದಿಲ್ಲ ಆದರೆ ಹಿಂದು ಕಾರ್ಯಕರ್ತರ ಹತ್ಯೆಯಾದರೆ ಇಡೀ ಬಿಜೆಪಿ ಸರಕಾರವೆ ತೆರಳಿ ಅವರಿಗೆ ಪರಿಹಾರ ಕೊಡಲಾಗುವುದು ಇಂತಹ ಕೋಮುವಾದ ಮಾಡುವುದರಿಂದ ಮುಸ್ಲಿಂರು ಬಿಜೆಪಿಗೆ ಸಾಮಾನ್ಯವಾಗಿ ಮತಹಾಕುವುದಿಲ್ಲ.
ಒಬ್ಬ – ಇಬ್ಬರು ಬಿಜೆಪಿ ಸೇರಿರುವುದಕ್ಕೆ ಇಡೀ ಮುಸ್ಲಿಂರು ಅಥವಾ ಮುಸ್ಲಿಂ ಸಮಾಜವೇ ಬಿಜೆಪಿ ಸೇರಿದೆ ಎಂಬುದು ಅವರ ತಪ್ಪು ಕಲ್ಪನೆ ಎಂದರು. ಬಿಜೆಪಿಯಲ್ಲಿರುವ ಅವರು ನಾವು ಪಕ್ಷ ನೋಡಿ ಹೋಗಿಲ್ಲ ನಾವು ರಮೇಶ ಭೂಸನೂರ ಎಂಬ ವ್ಯಕ್ತಿ ನೋಡಿ ಹೋಗಿದೇವೆ ಎಂದು ಹೇಳುತ್ತಾರೆ. ರಮೇಶ ಭೂಸನೂರ ನನ್ನಗು ಆತ್ಮಿಯರು ಆದರೆ ಪಕ್ಷದ ಸಿದ್ದಾಂತ ಬಂದಾಗ ಅವರು ಬಿಜೆಪಿ ತೆಗೆದುಕೊಂಡ ನಿರ್ಣಯಗಳಿಗೆ ಕೈ ಎತ್ತುವ ಮೂಲಕ ನಮ್ಮ ಸಿದ್ದಾಂತಗಳಿಗೆ ವಿರೋಧಿಸುವರು ಆವಾಗ ಎನು ಮಾಡಬೇಕು ಎಂದು ಪ್ರಶ್ನೇ ಹಾಕಿದರು. ಮುಸ್ಲಿಂರು ಬೆಂಬಲ ಎಂದು ಹೇಳಿಕೆ ನೀಡಿರುವುದನ್ನು ನಾವು ಖಂಡಿಸುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಇರ್ಪಾನ್ ಭಾಗವಾನ ಇದ್ದರು
ಬಿಜೆಪಿಯಲ್ಲಿರುವ ಮುಸ್ಲಿಂರನ್ನು ಬಿಜೆಪಿಯ ಪ್ರಚಾರ ಮಾಡಿದರೆ ಅವರನ್ನು ಜಮಾತ್ ( ಸಮಾಜ) ದಿಂದ ಹೊರಗಿಡುತ್ತೇವೆ, ಎಂದು ಭಯಹಾಕುವ ಕೆಲಸ ಕಾಂಗ್ರೇಸ್ ಮುಸ್ಲಿಂ ನಾಯಕರು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ ಎಂಬ ವರದಿಗಾರರ ಪ್ರಶ್ನೇಗೆ ಪ್ರತಿಕ್ರಿಯಿಸಿದ ಅವರು ಈ ರೀತಿಯ ಮಾತುಗಳು ಸರಿಯಾದದ್ದಲ ಅವರಿಗೆ ಅವರದೇ ಆದ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ಇದೆ ಎಂದು ಹೇಳಿದರು.
Leave a Reply