ಸಿಂದಗಿ: ಅಲ್ಪ ಸಂಖ್ಯಾತ ಬಂಧುಗಳು ಭಯ ಪಡುವ ಅವಶ್ಯಕತೆಯಿಲ್ಲ ನಿಮ್ಮೊಂದಿಗೆ ನಾನು ಇದ್ದೇನೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಬುಧವಾರದಂದು ಆಡಳಿತ ಸೌಧದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಶಾಸಕ ರಮೇಶ ಭೂಸನೂರ ನಾನು ಗೆದ್ದರೆ ಕಾರ್ಯಕರ್ತರ ಗೆದ್ದಂತೆ ವಿರೋಧ ಪಕ್ಷದವರು ಗೆದ್ದರೆ ಕುಟುಂಬ ಗೆದ್ದಂತೆ ಉಪ ಚುನಾವಣೆಯಲ್ಲಿ ಕೊಟ್ಟ ಭರವಸೆಯಾದ ತಳವಾರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮತ್ತು ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆಗೆ ನೀರನ್ನು ಹರಿಸುವ ಮೂಲಕ ಕ್ಷೇತ್ರದ ಜನರ ಭರವಸೆಯನ್ನು ಉಳಿಸಿಕೊಂಡಿರುವೆ ಅಲ್ಲದೇ ಹಾಲುಮತ ಸಮುದಾಯಕ್ಕೆ 3 ಕೋಟಿ 91 ಲಕ್ಷ ವೆಚ್ಚದಲ್ಲಿ ಅತಿ ಹೆಚ್ಚು ಸಮುದಾಯ ಭವನಗಳನ್ನು ಮಂಜೂರು ಮಾಡಿದ್ದೇನೆ ಎಂದು ಹೇಳಿದರು.
ಮಾತನಾಡಿದ ವಿ.ಪ ಸದಸ್ಯ ಹಣಮಂತ ನಿರಾಣಿ ಈ ಮೂರುವರೆ ವರ್ಷದಲ್ಲಿ ನಾಡ ಅಭಿವೃದ್ದಿಗಾಗಿ ಪಕ್ಷ ಶ್ರಮಿಸಿದೆ ಈ ಕ್ಷೇತ್ರದಲ್ಲಿ ಭೂಸನೂರವರ ಕೊಡುಗೆಗಳನ್ನು ಪರಿಗಣಿಸಿ ಮತ್ತೊಮ್ಮೆ ಕ್ಷೇತ್ರದ ಸೇವೆ ಮಾಡಲು ಇಲ್ಲಿನ ಮತದಾರರು ಅವಕಾಶ ಮಾಡಿಕೊಡಲು ಸನ್ನದ್ದರಾಗಿದ್ದಾರೆ ಎಂದರು.
ಮಾತನಾಡಿದ ಮಾಜಿ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಈ ಕ್ಷೇತ್ರದಲ್ಲಿ ಅನುಕಂಪದ ಅಲೆ ನಡೆಯುವುದಿಲ್ಲ ಮೂರು ಬಾರಿ ಶಾಸಕರಾದ ಅನುಭವ ರಮೇಶ ಭೂಸನೂರ ಇದೆ ಕಾರಣ ಹೊಸಬರಿಗೆ ಆದ್ಯತೆ ಕೊಟ್ಟರೆ ಮತ್ತೊಮ್ಮೆ ಚುನಾವಣೆ ಬರುವವರೆಗೆ ಶಾಸಕ ಸ್ಥಾನದ ತರಬೇತಿಯನ್ನೇ ನೀಡಬೇಕಾಗುತ್ತದೆ ಕಾರಣ ಅನುಭವಿ ರಾಜಕಾರಣಿಗೆ ಮತ ನೀಡುವ ಮೂಲಕ ಮತ್ತೊಮ್ಮೆ ಕ್ಷೇತ್ರದ ಅಭಿವೃದ್ದಿಗೆ ಅವಕಾಶ ಮಾಡಿಕೊಡಿ ಎಂದು ಹೇಳಿದರು.ನಾಮಪತ್ರ ಸಲ್ಲಿಕೆ ಹೊರಟ ಮೆರವಣಿಗೆ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತ, ಅಂಬಿಗರ ಚೌಡಯ್ಯ ವೃತ್ತ ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತ ತಲುಪಿತು.
ಈ ವೇಳೆ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ ಕೊಚಬಾಳ, ಮಾಜಿ ಲಿಂಬೆ ನಿಗಮ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಮಲ್ಲಿಕಾರ್ಜುನ ಜೋಗುರು, ಶ್ರೀಶೈಲಗೌಡ ಬಿರಾದಾರ, ಸಂತೋಷ ಪಾಟೀಲ ಡಂಬಳ, ಶಿಲ್ಪಾ ಕುದರಗೊಂಡ ಇದ್ದರು.
ಕಾಂಗ್ರೇಸ್ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಕೆ
ಬುಧವಾರ ಸಾವಿರಾರು ಕಾರ್ಯಕರ್ತರೊಂದಿಗೆ ಮಹಾತ್ಮಾ ಗಾಂಧೀಜಿ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು, ಅಂಬೇಡ್ಕರ ವೃತ್ತ, ಟಿಪ್ಪು ಸುಲ್ತಾನ ವೃತ್ತ, ಸ್ವಾಮಿ ವಿವೇಕಾನಂದ ವೃತ್ತದ ಮೂಲಕ ಬಸವೇಶ್ವರ ವೃತ್ತಕ್ಕೆ ತಲುಪಿ, ಚುನಾವಣಾಧಿಕಾರಿ ಸಿದ್ರಾಮ ಮಾರಿಹಾಳ ಅವರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ನಾಮಪತ್ರ ಸಲ್ಲಿಸಿದರು.
ಬಸವನಬಾಗೇವಾಡಿ ಶಾಸಕ ಹಾಲಿ ಅಭ್ಯರ್ಥಿ ಶಿವಾನಂದ ಪಾಟೀಲ ಅವರು ಮಾತನಾಡಿ, ಕಳೆದ ಉಪ ಚುನಾವಣೆಯಲ್ಲಿ ಮಾಜಿ ಪಿಎಂ, ಮಾಜಿ ಹಾಗೂ ಹಾಲಿ ಸಿಎಂಗಳು, ಎಂಪಿ, ಎಮ್ಮೆಲ್ಲೆಗಳು ನಿಂತು ನೋಟು ಹಂಚಿ ಕ್ಷೇತ್ರ ದಕ್ಕಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಹಿಂದುತ್ವದ ಆಧಾರದಲ್ಲಿ ದೇಶವನ್ನು ಆಳುವ ಹುಚ್ಚುತನಕ್ಕಿಳಿದಿದ್ದಾರೆ. ಇಂದಿರಾ ಗಾಂಧಿಯನ್ನು, ಸೋನಿಯಾಗಾಂಧಿಯನ್ನು ಗೆಲ್ಲಿಸಿರುವ ಕರ್ನಾಟಕದ ಜನರು ಕಾಂಗ್ರೆಸ್ಸನ್ನು ಕೈ ಬಿಡರು. ಇತ್ತೀಚೆಗೆ ಬಿಜೆಪಿ ಮಾಜಿ ಸಿಎಂ, ಎಂಪಿ, ಎಮ್ಮೆಲ್ಲೆಗಳು ಪಕ್ಷವನ್ನೇ ಬಿಡುತ್ತಿದ್ದಾರೆ. ಈ ಚುನಾವಣೆ ನಂತರದಲ್ಲಿ ರಾಜ್ಯದ ಜನರು ಕಮಲವನ್ನು ಕೈ ಬಿಡಲಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಅನ್ನ ಭಾಗ್ಯದ ಮಿತಿ ಹೆಚ್ಚಳ, ಮಹಿಳೆಯರಿಗೆ 2000 ಹಣ, 200ಯುನಿಟ್ ಉಚಿತ ವಿದ್ಯುತ್, ನೀರಾವರಿಗಾಗಿ 10ಸಾವಿರ ಕೋಟಿ ಬದಲಾಗಿ 40ಸಾವಿರ ಕೋಟಿ ಖರ್ಚು ಮಾಡುವುದಾಗಿ ಭರವಸೆ ನೀಡಿ, ಮತಕ್ಷೇತ್ರದಲ್ಲಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ, ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಒಗ್ಗಟ್ಟಾಗಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಿಂದಗಿಯಲ್ಲಿ ಅಭ್ಯರ್ಥಿ ಅಶೋಕ ಮನಗೂಳಿಯನ್ನು ಗೆಲ್ಲಿಸಲು ಪಣ ತೊಟ್ಟಿದ್ದೇವೆ. ಗೆದ್ದೇ ಗೆಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ವಕ್ತಾರ ಎಸ್.ಎಂ.ಪಾಟೀಲ, ಬ್ಲಾಕ ಅಧ್ಯಕ್ಷ ವಿಠ್ಠಲ ಕೊಳ್ಳೂರ, ಮಾಜಿ ಜಿಪಂ ಸದಸ್ಯ ನರಸಿಂಗಪ್ರಸಾದ ತಿವಾರಿ, ರಾಕೇಶ ಕಲ್ಲೂರ ಸೇರಿದಂತೆ ಮತ್ತಿತರರಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೇಸ್ ಪರವಾದ ಅಥಣಿ ಕ್ಷೇತ್ರದ ವಿಡಿಯೋ ಎನ್ನಲಾದ, ಸಿಂದಗಿ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ನಾಮಪತ್ರ ಸಲ್ಲಿಕೆಗೆ ಬಂದಿರುವ ಜನಸಾಗರ ದಂತೆ ಬಿಂಬಿಸಿರುವುದು ಕಂಡುಬಂದಿದೆ ಅದು ಕಾಂಗ್ರೇಸ್ ಹಲವು ಕುತಂತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿದೆಯಾ ಎಂಬ ಅನುಮಾನಗಳು ಜನರಲ್ಲಿ ಮೂಡುತ್ತಿವೆ.
Leave a Reply