ಸಿಂದಗಿ : ನಗರದ ಪ್ರಮುಖ ಬೀದಿಗಳಲ್ಲಿ ಮದ್ಯರಾತ್ರಿ 12 ಗಂಟೆಯಿಂದ ಬಾಳ ಬಟ್ಟಲು ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಅಮವಾಸೇಯ ಮುಂಚಿನ ದಿನದಂದ ಗಂಗಸ್ಥಳ ಕಾರ್ಯಕ್ರಮವು ಅಗಸಿಯಲ್ಲಿರುವ ಹನುಮಾನ ಮಂದಿರದ ಬಾವಿಯಲ್ಲಿ ಗಂಗಸ್ಥಳದ ಪೂಜೆ ಮಾಡುವುದರೊಂದಿಗೆ ಪ್ರಾರಂಭವಾಯಿತು.
ಕುಂಬಾರ ಸಮಾಜದ ಆರಾದ್ಯದೇವ ಶ್ರೀ ಚೌಡೇಶ್ವರಿ ದೇವಿಯ ಮಂದಿರದಿಂದ ಪ್ರಾರಂಭವಾಗುವ ವಿಶೇಷ ಬಾಳು ಬಟ್ಟಲು ಕಾರ್ಯಕ್ರಮ ವಿವೇಕಾನಂದ ವೃತ್ತದ ಮುಖಾಂತರ ಬಂದಾಳ ರಸ್ತೆ ಹತ್ತಿರ ಇರುವ ಚೌಡೇಶ್ವರಿ ದೇವಿಯ ಮಂದಿರಕ್ಕೆ ಬೇಟಿ ನೀಡಿ, ಬಂದಾಳ ರಸ್ತೆಗೆ ಹಾದು ಪ್ರಮುಖ ರಸ್ತೆಯ ಮುಖಾಂತರ ಗಾಂಧೀ ವೃತ್ತಕ್ಕೆ ತೆರಳಿ ಮಾದಿಗ ಸಮಾಜದ ಜಟ್ಟಿಂಗರಾಯ ಮಂದಿರಕ್ಕೆ ಹೋಗಿ ಅಲ್ಲಿನ ಭಕ್ತರಿಗೆ ಆಶೀರ್ವದಿಸಿ, ಟಿಪ್ಪು ಮಾರ್ಗವಾಗಿ ಅಗಸಿ ಪ್ರವೇಶಿಸಿ ಅಲ್ಲಿನ ಭಕ್ತರ ಮನೆ-ಮನೆ ಪೂಜೆಗೆ ಹೋಗುವುದು ಸಂಪ್ರದಾಯ. ನಗರದ ಪ್ರಮುಖ ಬೀದಿಗಳಲ್ಲಿ ಪ್ರದಕ್ಷೀಣೆ ಹಾಕುವುದರಿಂದ ದುಷ್ಠ ಶಕ್ತಿಗಳು, ಭೂತ, ಪ್ರೇತ, ಪಿಶಾಚಿಗಳು ಸಂಹಾರ ವಾಗುತ್ತವೆ ಎಂಬುದು ಭಕ್ತರ ಅಗಾದವಾದ ನಂಬಿಕೆಯಾಗಿದೆ. ಸುಮಾರು 8 ರಿಂದ 9 ದಶಕಗಳಿಂದ ಆಚರಣೆ ನಡೆದುಕೊಂಡು ಬಂದಿದೆ ಎನ್ನಲಾಗಿದೆ.
ಇಂದು ಶ್ರೀ ಚೌಡೇಶ್ವರಿ ದೇವಿ ಜಾತ್ರೆ
ಇಂದು ಸಾಯಂಕಾಲ 4 ಗಂಟೆಗೆ ತಾಯಿ ನೀಲಗಂಗಾ ದೇವಿಯ ದೇವಸ್ಥಾನದ ಮುಂದೆ ಹಾಕಿರುವ ಬೇವಿನ ತೊಪ್ಪಲ ಚಪ್ಪರದಲ್ಲಿ ಮಜ್ಜಿಗೆ ಮಾಡಿ ಅಗ್ಗಿ ಹಾಯುವುದು, ಬಜಾರದಲ್ಲಿ ಕೋಲಾಟ ಆಡುವುದು, ಚಾವಡಿಯ ಮುಂಬಾಗದಲ್ಲಿ ಊರ ಗೌಡರ ಸಮ್ಮುಖದಲ್ಲಿ ಕೊಬ್ಬರಿ ಆಟ ಆಡುವಳು , ನಗರದ ನೂರಾರು ಭಕ್ತರ ಮನೆ-ಮನೆಗೆ ಹೋಗಿ ಹರಕೆಗಳನ್ನು ಹೇಳಿ ಶುಭ ಹಾರೈಸುತ್ತಾ ಮೂಲ ದೇವಸ್ಥಾನಕ್ಕೆ ದೇವಿಯು ಆಗಮಿಸುವಳು.
Leave a Reply