ಪ್ರಥಮಬಾರಿ ವಿಧಾನಸಭೆಗೆ ಆಯ್ಕೆಯಾದ ಮುತ್ಯಾನ ಮಗ ಅಶೋಕ

ಸಿಂದಗಿ :  ಸಿಂದಗಿ ಮತಕ್ಷೇತ್ರದ ಜನರ ಆಶೀರ್ವಾದಕ್ಕೆ ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿ ಪಾತ್ರರಾಗಿದ್ದಾರೆ. 

ಉಪ ಚುನಾವಣೆಯ ಸೋಲಿನ ಬಳಿಕ ಕಾಂಗ್ರೇಸ್ ಪಕ್ಷ ಸಂಘಟಿಸುವಲಿ ಶ್ರಮವಹಿಸಿದ ಅಶೋಕ ಮನಗೂಳಿ ಸಿಂದಗಿ ಮತಕ್ಷೇತ್ರದಿಂದ ಪ್ರಥಮಬಾರಿಗೆ ವಿಧಾನಸೌಧಕ್ಕೆ ಆಯ್ಕೆಯಾಗಿದ್ದಾರೆ.  86771 ಮತಗಳನ್ನು ಪಡೆದ ಅಶೋಕ ಮನಗೂಳಿ  7808 ಮತಗಳಿಂದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರನ್ನು ಪರಾಜಿತಗೋಳಿಸಿದ್ದಾರೆ. ಅವರು 78691 ಮತಗಳನ್ನು ಪಡೆದರು. ಜೆಡಿಎಸ್ ನ  ವಿಶಾಲಾಕ್ಷಿ ಪಾಟೀಲ  2251 ಮತಗಳು ಪಡೆದರೆ, ಬಿಎಸ್.ಪಿಯ  ದಸಗೀರ ಮುಲ್ಲಾ 808 ಮತ, ಎಎಪಿಯ ಮುರಗೇಪ್ಪಗೌಡ ರದ್ದೇವಾಡಗಿ 850 ಮತ , ಕೆ.ಆರ್.ಎಸ್. 265,  ಪಕ್ಷೇತರ ಅಭ್ಯರ್ಥಿ ಜಿಲಾನಿ ಮುಲ್ಲಾ 169,  ದೀಪಿಕಾ.ಎಸ್ 370, ಮಹ್ಮದ ಮುಸ್ತಾಕ ನಾಯ್ಕೋಡಿಗೆ 274     ಹಾಗೂ ನೋಟಾಗೆ 960 ಮತಗಳು  ಬಿದ್ದಿರುವುದು ವಿಶೇಷ.

 


Comments

Leave a Reply

Your email address will not be published. Required fields are marked *