ಸಿಂದಗಿ: ನಗರದ ನಾವು ಜನಪ್ರತಿನಿಧಿಯಾದವರು ಅಂದುಕೊಂಡಂತೆ ಇನ್ನು ಅಭಿವೃದ್ದಿಯಾಗಿಲ್ಲ ಜನರ ಬಗ್ಗೆ ಊರಿನ ಬಗ್ಗೆ ಬಹಳಷ್ಟು ಕಳಕಳಿ ಬೇಕು ಬರೀ ಪ್ರಚಾರಕ್ಕಾಗಿ ಒಂದು ಪೋಟೋ ತೆಗೆಸಿಕೊಂಡು ಪ್ರಚಾರ ತೆಗೆದುಕೊಂಡರೆ ಸಾಲದು, ನಾವು ಮಾಡಿದಂತ ಕೆಲಸಗಳು ಪ್ರಚಾರವಾಗಬೇಕು ಎನ್ನುವ ದೇಹ ದೋರಣೆ ಹೊಂದಿದ್ದಾಗ ಮಾತ್ರ ಅಭಿವೃದ್ದಿ ಕಾಣಲು ಸಾಧ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಶಿವಶಂಕರ ಬಡಾವಣೆಯಲ್ಲಿ ನಗರೋತ್ತಾನ ಹಂತ 4ರ ಪ್ಯಾಕೇಜ್ 1 ಮತ್ತು 2ರ ಅಡಿಯಲ್ಲಿ ಕಿಣಗಿಯವರ ಮನೆಯಿಂದ ಲಾಳಸಂಗಿ ಮನೆಯವರೆಗೆ ರೂ 19 ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ಹಾಗೂ ಡಾಂಬರಿಕರಣ ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿ, ಜನರಿಗೆ ಬೇಕಾಗಿರುವುದು ಅಚ್ಚುಕಟ್ಟ ರಸ್ತೆ ಮತ್ತು ಶುದ್ಧ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು ಬೇರೆನು ಕೇಳುವುದಿಲ್ಲ. ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಕಾರ್ಯಗಳನ್ನು ಮಾಡಿದರೆ ಜನಪ್ರತಿನಿದಿ ಅನ್ನಿಸಿಕೊಳ್ಳಲು ಸಾದ್ಯ ಈ ಕಾಮಗಾರಿಯ ಗುತ್ತಿಗೆದಾರರಾದ ಎಂ.ಎಂ.ಮುಂಡೇವಾಡಗಿ ಬಹಳಷ್ಟು ಅಚ್ಚುಕಟ್ಟುತನದಿಂದ ರಸ್ತೆ ಗಾಮಗಾರಿ ಮಾಡಬೇಕು. ಅಲ್ಲದೆ ಸಾರ್ವಜನಿಕರು ಕೂಡಾ ಅವರಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಪುರಸಭೆ ಸದಸ್ಯ ಬಸವರಾಜ ಯರನಾಳ ಮಾತನಾಡಿ, ಕಳೇದ 2018ರಲ್ಲಿ ದಿ. ಎಂ.ಸಿ.ಮನಗೂಳಿ ಅವರು ಸಚಿವರಿದ್ದಾಗ ಅಭಿವೃದ್ದಿ ಪ್ರಾರಂಭ ಮಾಡಿದ್ದರು ಅವರ ನಿಧನ ನಂತರ 2 ವರ್ಷಗಳಿಂದ ಅಭಿವೃದ್ದಿ ಮರಿಚಿಕೆಯಾಗಿತ್ತು ನೆನೆಗುದಿಗೆ ಬಿದ್ದಿದ್ದ ಮತ್ತು ತುಕ್ಕು ಕಾಮಗಾರಿಗಳು ಮರು ಪ್ರಾರಂಭವಾಗುತ್ತಿದ್ದು ಈಗ ಅಭಿವೃದ್ಧಿ ಪರ್ವ ಪ್ರಾರಂಬವಾಗಿದೆ ಆಡಳಿತ ಚುರುಕುಗೊಳಿಸಿದ್ದಾರೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಹಣಮಂತ ಸುಣಗಾರ ಮಾತನಾಡಿ, ಶಾಸಕರು ಹೆಚ್ಚಿನ ಅನುದಾನ ತಂದು ಶಿವಶಂಕರ ಬಡಾವಣೆಯನ್ನು ಇನ್ನಷ್ಟು ಅಭೀವೃದ್ಧಿ ಪಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಹಾಸೀಂ ಆಳಂದ, ಮುಖಂಡರಾದ ಡಾ. ರಾಜಶೇಖರ ಸಂಗಮ, ಇಬ್ರಾಹಿಂ ನಾಟೀಕಾರ, ರಾಜು ಖೇಡ, ಬಾಬು ಮರ್ತುರ, ಗೌಶೀಯಾ ನಾಟೀಕಾರ, ಭೀಮನಗೌಡ ಬಿರಾದಾರ, ಮಹೇಶ ಮನಗೂಳಿ, ಬಸು ಕಾಂಬಳೆ, ಈರಣ್ಣ ಗಡ್ಡಿ, ಪ್ರಸನ್ ಜೇರಟಗಿ, ಪರಸುರಾಮ ಯಂಪೂರೆ, ಶಾಂತೂ ರಾಣಾಗೋಳ, ಪುರಸಭೆ ಮುಖ್ಯಾಧಿಕಾರಿ ಜಾಧವ, ಜೆಇ ಎ.ಜೆ.ನಾಟೀಕಾರ, ಸೇರಿದಂತೆ ಹಲವರು ಇದ್ದರು.
Leave a Reply