ನೂತನ ಬಿಜೆಪಿ ಕಾರ್ಯಾಲಯ ಉಧ್ಘಾಟಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದ ಭೂಸನೂರ

ಸಿಂದಗಿ :  ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರವಿರುವ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬ್ಯಾಂಕಿನ ಮೇಲಿರುವ ಕಟ್ಟಡದಲ್ಲಿ ಪಕ್ಷದ ಕಾರ್ಯಾಲಯ  ಉದ್ಘಾಟನೆಯನ್ನು ಹಾಲುಮತ ಸಮಾಜದ ನಾಗಪ್ಪ ಶಿವೂರ ಇವರ ಹಸ್ತದಿಂದ   ಮಾಡಿಸಿದರು.

ನಂತರ ಪತ್ರಿಕಾಗೋಷ್ಠಿಯಲ್ಲಿ ಸಾರ್ವತ್ರಿಕ ಚುನಾವಣೆ-2023ರ ಸ್ಥಳಿಯ ಪ್ರಣಾಳಿಕೆ ಉದ್ಘಾಟಿಸಿ ಮಾತನಾಡಿದ  ಶಾಸಕ ರಮೇಶ ಭೂಸನೂರ ಸಿಂದಗಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಇಗಾಗಲೇ ಪ್ರಗತಿ ಹಂತದಲ್ಲಿವೆ. ಸಿಂದಗಿ ಕ್ಷೇತ್ರಕ್ಕೆ ಒಳಾಂಗಣ ಕ್ರೀಡಾಂಗಣ ತರಬೇಕು ಎಂಬ ಪ್ರಯತ್ನದಿಂದ ಕೇಂದ್ರ ಸರ್ಕಾರದ ಮಹತ್ವವಾದ ಯೋಜನೆಯಾದಂತಹ ಖೇಲೊ ಇಂಡಿಯಾ ಯೋಜನೆಯಲ್ಲಿ ಇಗಾಗಲೆ ಪ್ರತಿಶತ ಎಂಬತ್ತರಷ್ಟು ಕಛೇರಿ  ಕೆಲಸ ಮುಗಿದಿದೆ. ಇನೇನ್ನು 20ರಷ್ಟು ಕೆಲಸ ಚುನಾವಣೆ ನಂತರ ಮುಗಿಯುತ್ತದೆ.  ಕ್ರೀಡಾಪಟುಗಳಿಗೆ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ಆದಷ್ಟು ಬೇಗನೆ ಒದಗಲಿದೆ.

ಗುತ್ತರಗಿ ಮತ್ತು  ಭಂಟನೂರ ಗ್ರಾಮಸ್ಥರ ಬಹುಬೇಡಿಕೆಯಾದಂತಹ  ಆಲಮೇಲ ತಾಲೂಕಿನಿಂದ ತೆಗೆದು ಸಿಂದಗಿ ತಾಲ್ಲೂಕಿಗೆ ಸೇರಿಸುವ ಕುರಿತು ಕಂದಾಯ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಜಿಲ್ಲಾಧೀಕಾರಿಗಳಿಗೆ ಇಗಾಗಲೇ ಸೂಚಿಸಿದ್ದಾರೆ.  ಜಿಲ್ಲಾಧಿಕಾರಿಗಳು ತಮ್ಮ ವರದಿಯನ್ನು  ಸಹಿತ ಇಲಾಖೆಯ  ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿದ್ದಾರೆ ಅದು ಸಹಿತ ಚುನಾವಣೆ ಮುಗಿದ ನಂತರ ಗ್ರಾಮಸ್ಥರ ಬೇಡಿಕೆಯಂತಾಗುವುದು.  ಇಂದು 27 ಅಂಶಗಳುಳ್ಳ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಅದನ್ನು ಸಮರ್ಪಕವಾಗಿ ಮುಟ್ಟಿಸುವ ಕೆಲಸ ಮಾಡಲು ನನ್ನಗೆ ಮತ್ತೊಂದು ಅವಕಾಶ ನೀಡಬೇಕಾಗಿ ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.

ಪ್ರಣಾಳಿಕಾ ಸಮಿತಿಯ ಜಿಲ್ಲಾ ಸಂಚಾಲಕ  ಅಶೋಕ ಅಲ್ಲಾಪುರ ಮಾತನಾಡಿ ಸ್ಥಳಿಯ ಪ್ರಣಾಳಿಕಾ ಪಟ್ಟಿಯನ್ನು ಇಗಾಗಲೇ ರಾಜ್ಯಕ್ಕೆ ಕಳುಹಿಸಲಾಗಿದೆ ಮುಂದಿನ ದಿನಮಾನಗಳಲ್ಲಿ ಪ್ರಣಾಳಿಕಾ ಅಂಶಗಳಂತೆ ಕೆಲಸ ಮಾಡಲಾಗುವುದು ಎಂದರು. ಬಿಜೆಪಿಯ ಪ್ರಣಾಳಿಕಾ ಪಟ್ಟಿ ಇಂತಿದೆ.

ಸಿಂದಗಿ ಬಿಜೆಪಿಯು ಬಿಡುಗಡೆಗೊಳಿಸಿದ ಪ್ರಣಾಳಿಕೆಯ ಪ್ರತಿ

ಈ ವೇಳೆ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಬಿ.ಹೆಚ್.ಬಿರಾದಾರ, ಜಿ.ಪಂ ಸದಸ್ಯ ಬಿ ಆರ್ ಯಂಟಮಾನ, ನಾಗಪ್ಪ ಶಿವೂರ, ಸಿದ್ದು ಬುಳ್ಳಾ, ವೀರಭದ್ರ ಕತ್ತಿ, ಬಸವರಾಜ ಹೂಗಾರ, ಡಾ.ಅನೀಲ ನಾಯಕ, ರಾಜೂ ಪೂಜಾರಿ, ಶ್ರೀಮಂತ ನಾಗೂರ, ಮಹಾನಂದ ಸಾಲಕ್ಕಿ, ನೀಲಮ್ಮ ಯಡ್ರಾಮಿ, ಅರವಿಂದ ಕನ್ನೂರ, ಯಶವಂತರಾಯಗೌಡ ರೂಗಿ, ಅನಂತ ದೇವರಡ್ಡಿ ಇದ್ದರು.