ಜೆಜೆಎಮ್ ಕಾಮಗಾರಿಗೆ ತರಲಾಗಿದ್ದ ಪೈಪ್ ಗಳನ್ನು ಸುಟ್ಟು ಹಾಕಿದ ಘಟನೆ ಸಿಂದಗಿ ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ನಡೆದಿದೆ.
ಸಿಂದಗಿ : ತಾಲೂಕಿನ ಮನ್ನಾಪೂರ ಗ್ರಾಮದ ಜಲ್ ಜೀವನ ಮಷಿನ್ ಯೋಜನೆ ಅಡಿಯಲ್ಲಿ ಕಾಮಗಾರಿಗೆ ತಂದಿರಿಸಿದ್ದ 4.76 ಲಕ್ಷ ಮೌಲ್ಯದ ಕಾಮಗಾರಿಗೆ ಸಂಬಂದಿಸಿದ ಪೈಪ್ಗಳು ಸ್ಥಳಿಯರಾದ ಮಲ್ಲಣ್ಣ ಮನಗೂಳಿ ರವರ ಮನೆ ಮುಂದೆ ಇಡಲಾಗಿತ್ತು ಅದನ್ನು ಬೆಂಕಿಹಚ್ಚಿ ಸುಡಲಾಗಿದೆ ಎಂದು ಆರೋಪಿಸಿ ತಾಲೂಕಿನ ಗುತ್ತಿಗೆದಾರರು ಒಗ್ಗೂಡಿ ಸಿಂದಗಿ ಪೊಲೀಸ್ ಠಾಣೆಗೆ ಬಂದು ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಮನವಿ ನೀಡಿ ಮಾತನಾಡಿದ ಗುತ್ತಿಗೆದಾರ ಎಂ.ಎಂ.ಮುಂಡೇವಾಡಗಿ ಒಂದಲ್ಲಾ ಒಂದು ತೊಂದರೆಗಳಿಂದ ಗುತ್ತಿಗೆದಾರರು ಸಂಕಷ್ಠದಲ್ಲಿ ಸಿಲುಕಿಗೋಳ್ಳುತ್ತಿರುವುದು ವಿಷಾದನೀಯ ಸಂಗಂತಿ. ಇಂದು ಒಬ್ಬರಿಗೆ ನಷ್ಟವನ್ನುಂಟು ಮಾಡಿದ್ದಾರೆ ನಾಳೆ ಇನ್ನೋಬ್ಬರ ಮೇಲೆ ಆಗುತ್ತೆ ಈ ಪ್ರಕರಣವನ್ನು ಗಂಭೀರವಾಗಿ ಪೊಲೀಸ್ ಇಲಾಖೆ ತೆಗೆದುಕೋಳ್ಳಬೇಕು ಎಂದು ಹೇಳಿದರು.
ಮನವಿ ಸ್ವೀಕರಿಸಿದ ಪಿ.ಎಸ್.ಐ ಭಿಮಪ್ಪ ರಬಕವಿ ಇಲಾಖೆಯ ಮೇಲೆ ವಿಶ್ವಾಸವಿಡಿ, ಕೂಡಲೆ ಪ್ರಾಥಮಿಕ ಹಂತದ ತನಿಖೆ ಪ್ರಾರಂಬಿಸಿ ಪ್ರಕರಣ ದಾಖಲಿಸಿ ಕೋಳ್ಳಲಾಗುವುದು ಎಂದರು. ಈ ಸಂಧಂರ್ಭದಲ್ಲಿ ಗುತ್ತಿಗೆದಾರರಾದ ಎಸ್.ಸಿ.ಮಹಾದೇವಪ್ಪ, ಬಿ.ಎಸ್.ಬಿರಾದಾರ, ನಾರಾಯಣ ಕುಲಕರ್ಣಿ, ಎಸ್.ಸಿ.ಕರ್ನಾಳ, ಶ್ರೀಶೈಲಗೌಡ ಬಿರಾದಾರ, ಮಹಾಂತೇಶ ಕೋರಿ, ಸತೀಶ ಬಿರಾದಾರ, ರಾಮನಗೌಡ ಬಿರಾದಾರ ಬನ್ನೇಟ್ಟಿ, ಮಲ್ಲಣ್ಣ ಮನಗೂಳಿ, ಮಹೇಶ ಮನಗೂಳಿ, ಮುತ್ತು ಮಾಳೇಗಾರ, ಭೀಮನಗೌಡ ಬಿರಾದಾರ, ಪ್ರವೀಣ ಕಂಟಿಗೊಂಡ, ನಿಂಗನಗೌಡ ಬಿರಾದಾರ, ದೇವಿಂದ್ರ ಕಕ್ಕಳಮೇಲಿ ಸೇರಿದಂತೆ ಹಲವರು ಇದ್ದರು.
Leave a Reply