ಕೊಳ್ಳೇಗಾಲ : ಸಂವಿಧಾನ ಬದಲಿಸಲು ಅದೆನ್ನು ಮಗ್ಗಿಪುಸ್ತಕ ಅಲ್ಲ ಹರಿ,ಹರ,ಬ್ರಹ್ಮ ಬಂದರು ಸಂವಿಧಾನ ಬದಲಿಸಲು ಬಿಡಲ್ಲ ಅಪಪ್ರಚಾರ ಮಾಡುವುದು ಬಿಡಿ ಎಂದು ಶಾಸಕ ಎನ್.ಮಹೇಶ್ ಗುಡುಗಿದರು.
ಮತಕ್ಷೇತ್ರದ ದಲಿತ ಕಾಲೋನಿಗೆ ಮತಯಾಚನೆಗೆ ತೆರಳಿದ ಅವರು ಕಾಂಗ್ರೇಸ್ ಬಿಜೆಪಿ ವಿರುದ್ದ ಅಪಪ್ರಚಾರ ಮಾಡುತ್ತಿದೆ. 70 ವರ್ಷಗಳ ಕಾಲ ಆಡಳಿತ ಮಾಡಿದ ಕಾಂಗ್ರೇಸ್ ಸಂವಿಧಾನದ ಬಗ್ಗೆ ಚರ್ಚೆ ಮಾಡಲಿಲ್ಲ ಯಾಕೆ? ಬಿಜೆಪಿ ಸರಕಾರದಲ್ಲಿ ಆರು ದಿನಗಳ ಕಾಲ ಅಧಿವೇಶನದಲ್ಲಿ ಚರ್ಚೆಮಾಡಲಾಯಿತು. ಬಿಜೆಪಿ ಯವರು ಸಂವಿಧಾನ ಬದಲಿಸುತ್ತಾರೆ ಎಂದು ಮಾತನಾಡುತ್ತಿರಿ ಹರಿ,ಹರ,ಬ್ರಹ್ಮ ಬಂದರು ನಾವು ಬಿಡಲ್ಲ. ಶ್ರೀನಿವಾಸ ಪ್ರಸಾದರು ಹೇಳಿಲ್ಲವಾ ಸಂವಿಧಾನ ಬದಲಿಸಲು ಮಗ್ಗಿ ಪುಸ್ತಕನಾ? ಹುಚ್ಚು-ಹುಚ್ಚರಂತೆ ಮಾತನಾಡುವುದು ಕಾಂಗ್ರೇಸ್ ನವರು ನಿಲ್ಲಿಸಲಿ.
ನಾವು ರಾಜಕಾರಣ ಮಾಡುತ್ತಿರುವುದೆ ಅಂಬೇಡ್ಕರವಾದಿ ರಾಜಕಾರಣ ನಾನು ಬಿಜೆಪಿಗೆ ಸೇರಿದ್ದು ಯಾಕೆ ಗೋತ್ತಾ? ಬಾಬಾಸಾಹೇಬರು ತೀರಿಕೊಂಡಾಗ ಅವರ ಶವಸಂಸ್ಕಾರಕ್ಕೆ ಜಾಗ ಕೋಡಲಿಲ್ಲ. ಅವರಿಗೆ ಓಟ ಹಾಕಬೇಕಂತೆ ಓಟು. ಅದೇ ಜಾಗದಲ್ಲಿ ನರೇಂದ್ರ ಮೋದಿಜಿ ಅವರು 200 ಕೋಟಿಗು ಅಧಿಕ ವೇಚ್ಚದಲ್ಲಿ ಮಹಾ ಪರಿನಿರ್ವಾಣ ಸ್ಥಳ ಅಂತಾಃ ಮಾಡಿದ್ದಾರೆ ನಿಮ್ಮಗೆ ಆತ್ಮಸಾಕ್ಷಿ ಇದ್ದರೆ ಗೂಗಲ್ ಅಲ್ಲಿ ಹೊಡೆದು ನೋಡಿ. ಸುಮ್ಮ ಸುಮ್ಮನೆ ಯಾವುದೇ ಪಾರ್ಟಿಗೆ ಸೇರಲ್ಲ ನಾವು ಇಂದು ಬಾಲರಾಜ ಅವರಿಗೆ ಅವಮಾನವಾಗಿದೆ ಅವರಿಗೆ ಗೌರವ ಸಿಗುವ ಜಾಗ ಬಿಜೆಪಿ ಎಂದು ಅವರು ಅನುಭವದಿಂದ ಹೇಳುತ್ತಿದ್ದಾರೆ.
77 ರಲ್ಲಿ ಮೊದಲ ಬಾರಿಗೆ ಓಟ ಮಾಡಿದ್ದಾಗ ಜನತಾ ಪಕ್ಷಕ್ಕೆ ಓಟ ಹಾಕಿದೆ. ಅಂದು ನಮ್ಮೂರವರೆಲ್ಲ ಕಾಂಗ್ರೇಸ್ ಪಕ್ಷಕ್ಕೆ ಮತ ಹಾಕಿದರು, ನಮ್ಮಪ್ಪ ಯಾರಿಗೆ ಹುಟಿದಿಯೋ ನೀನು ಎಂದು ಪ್ರಶ್ನೆ ಮಾಡಿದ ಅದಕ್ಕೆ ನಿನೇನು ಗಾಂಧೀಗೆ ಹುಟಿದಿಯಾ ಎಂದು ಪ್ರಶ್ನೇ ಮಾಡಿದೆ. ಸಮ್ಮನೆ ಹುಡುಗಾಟ ಆಡೋಕೆ, ಮಜಾ ಮಾಡೋಕೆ, ಇಸ್ಪೀಟ್ ಆಡೋಕೆ, ಎಣ್ಣೆ ಕುಡಕೊಂಡು ಇರೋಕೆ ರಾಜಕಾರಣಕ್ಕೆ ಬಂದಿಲ್ಲಾರಿ. ಬಾಬಾಸಾಹೇಬರ ಹೆಸರನ್ನ ಆಕಾಶದೇತ್ತರಕ್ಕೆ ಒಯ್ಯಲು ರಾಜಕಾರಣ ಮಾಡಲು ಬಂದಿರೋದು. ದಯವಿಟ್ಟು ಅರ್ಥ ಮಾಡಿಕೋಳಿ ಅಂತಾಃ ಧ್ವನಿ ಅಡಗಿಸಬೇಕಿದ್ದರೆ ಅಡಗಿಸಬಿಡಿ, ಬಾಬಾಸಾಹೇಬರ ಧ್ವನುಯು ಹಂಗೆ ಅಡಗಿಸಿದಿರಿ, ಅಡಗಿಸಿಬಿಡಿ. ರಾಜಕೀಯ ಗುಲಾಮಗಿರಿಗಾಗಿ ನಾವು ಬಂದಿಲ್ಲ ನಾನು ಬಾರತೀಯ ಜನತಾ ಪಾರ್ಟಿಗೆ ಹೋದ ಮೇಲೆ ಬಾರತೀಯ ಜನತಾ ಪಾರ್ಟಿಯ ನಡುವಳಿಕೆ, ಭಾಷೆ ಬದಲಾಗಿದೆ. ಅದನ್ನು ಬದಲಿಸುವ ಶಕ್ತಿ ದಲಿತರಿಗಿದೆ ಈ ಎಲ್ಲ ಹಿನ್ನಲ್ಲೆಯಲ್ಲಿ ರಾಜಕೀಯಕ್ಕೆ ಬಂದಿದೇನೆ. ಕೈ ಮುಗಿದು ಮನವಿ ಮಾಡುವೆ ಯಾರಾದರು ಕಿವಿಗೆ ಎನ್ನಾದರು ಹೇಳುತ್ತರೆ ಅದನ್ನು ನಂಬಬೇಡಿ ಅಂಬೇಡ್ಕರ್ ಅವರನ್ನು ಮೊದಲು ಓದಿ ಎಂದು ಹೇಳಿದರು.
ವೀಡಿಯೊ ಗಾಗಿ ಕೆಳಗಿನ ಲಿಂಕ್ ಗೆ ಹೋಗಿ.
Leave a Reply