ನಾಳೆ ಸರ್ಕಾರದ ರೈತ ವಿರೋಧಿ ನೀತಿಗಳ ವಿರೋಧಿಸಿ ಬೃಹತ್ ಪ್ರತಿಭಟನೆ ; ರಮೇಶ ಭೂಸನೂರ

ಬಿಜೆಪಿ ಸರಕಾರ ನೀಡಿರುವ ಯೋಜನೆಗಳು ನಿಲ್ಲಿಸಿ ಗ್ಯಾರಂಟಿ ಯೋಜನೆಗಳು ನೀಡುತ್ತಿರುವುದು ಖಂಡನಾರ್ಹ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು. 

ಸಿಂದಗಿ : ರಮೇಶ ಭೂಸನೂರ ಅವರ  ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು  ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೆ ರೈತರಿಗೆ ನೀಡುತ್ತಿದ್ದ 4000 ರೂ ಕಿಸಾನ್ ಸಮ್ಮಾನ್ ಯೋಜನೆ, ರೈತ ವಿಧ್ಯಾನಿಧಿ ಯೋಜನೆ, ಭೂ ಸಿರಿ ಯೋಜನೆ ಶ್ರಮಶಕ್ತಿ ಯೋಜನೆ, ರೈತ ಸಂಪದ ಯೋಜನೆ,  ಕೈ ಬಿಟ್ಟಿದೆ. 

ಅಷ್ಟೇ ಅಲ್ಲದೆ ಜಿಲ್ಲೆಗೊಂದು ಗೋಶಾಲೆ, ಎಪಿಎಂಸಿ ಕಾಯ್ದೆ ರದ್ದು, ಕೃಷಿ ಭೂಮಿ ಮಾರಟ ಕಾಯ್ದೆಯನ್ನು ಕೈಬಿಟ್ಟಿದೆ.  ಹಾಲೂ ಉತ್ಪಾದಕರ ಹಿತವನ್ನೂ ಕಡೆಗಣಿಸಿ ಕ್ಷೀರ ಸಮೃದ್ಧಿ ಸಹಕಾರಿ ಬ್ಯಾಂಕ್ ಸ್ಥಾಪಿಸುವ ಯೋಜನೆಯನ್ನು ಕೈ ಬಿಟ್ಟು ಹಾಳು ಉತ್ಪಾದಕರ ಹಿತವನ್ನು ಕಾಂಗ್ರೇಸ್ ಸರ್ಕಾರ ಬಲಿ ಕೋಟ್ಟಿದೆ. ಇದರ ವಿರುದ್ಧ ರಾಜ್ಯಾದ್ಯಂತ ರೈತ ವಿರೋಧಿ ನೀತಿ ಜನ ವಿರೋಧಿ ನಿಲುವು ಎಂಬ ವಾಕ್ಯದೊಂದಿಗೆ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ  ನಾಳೆ ಅಂಬೇಡ್ಕರ್ ವೃತ್ತದಿಂದ ತಾಲೂಕಾ ದಂಡಾಧಿಕಾರಿಗಳ ಕಚೇರಿಗೆ ಬೃಹತ್ ಪ್ರತಿಭಟನೆ ಮೂಲಕ ಬಂದು ಮನವಿ ಸಲ್ಲಿಸಲಾಗುವುದು. 

ಇನ್ನು ಸ್ಥಳಿಯ ಶಾಸಕರ ದ್ವೇಷ ರಾಜಕಾರಣ  ಮುಂದುವರೆದಿದ್ದು  ಸರಿಯಾದದ್ದಲ್ಲ ದ್ವೇಷ ರಾಜಕಾರಣ ಬಿಟ್ಟು ಕ್ಷೇತ್ರದ ಅಭೀವೃದ್ಧಿಯತ್ತ ಗಮನಹರಿಸಲಿ  ಅದನ್ನು ಬಿಟ್ಟು ನಮ್ಮ ಕಾಲಾ ಅವದಿಯಲ್ಲಿ ಆಯ್ಕೆ ಮಾಡಿದ ಪಲಾನುಭವಿಗಳ  ಪಟ್ಟಿ ಬದಲಾವಣೆ ಮಾಡಲು ಅಧಿಕಾರಿಗಳಿಗೆ ಒತ್ತಡ ಹಾಕುತ್ತಿರುವುದರ ಪರಿಣಾಮವಾಗಿ ಗೋರವಗುಂಡಗಿಯ ಪರಶುರಾಮ ಮಾದರ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿ ಶಾಸಕರ ಮೇಲೆ ಆರೋಪ ಮಾಡಿ  ಆತ್ಮಹತ್ಯೆಗೆ ಯತ್ನ ಮಾಡಿರುವುದು ಇಂದು ಆಸ್ಪತ್ರೆಯಲ್ಲಿ ಜೀವನ್ಮರಣದಲ್ಲಿ ಹೋರಾಟ ನಡೆಸುತ್ತಿದ್ದಾನೆ. ಅಷ್ಟೇ ಅಲ್ಲದೆ ಸ್ಥಳಿಯ ಪುರಸಭೆಯಲ್ಲಿ ಮನೆಗಳಿಗಾಗಿ   ಪಲಾನುಭವಿಗಳ ಆಯ್ಕೆ  ಮಾಡಿರುವುದನ್ನು ಬದಲಾಯಿಸುವಂತೆ ಅಧಿಕಾರಿಗಳಿಗೆ ಒತ್ತಡ ಹಾಕುತ್ತಿರುವುದು ಧ್ವೇಷ ರಾಜಕಾರಣ ಎತ್ತಿ ತೋರಿಸುತ್ತಿದೆ. 

ಇವೇಲ್ಲವನ್ನು ಬಿಟ್ಟು ನಾವು ಭೂಮಿ ಪೂಜೆ ಮಾಡಿರುವ ಹಂದಿಗನೂರು ಸಿದ್ರಾಮಪ್ಪನವರ ರಂಗಮಂದಿರ ಹಾಗೂ ಶಿಕ್ಷಕರ ಭವನದ ಕಾಮಗಾರಿಗಳು ಪ್ರಾರಂಭಮಾಡಲಿ. ಇಗಲ್ಲೆ ಕಾಮಗಾರಿಗಳು ಪ್ರಾರಂಭ ಮಾಡಿದರೆ ನಮ್ಮ ಹೆಸರು ಬರುತ್ತದೆ ಎಂಬ ದುರುದೇಶ ಇದ್ದಿರಬಹುದು ಅದಕ್ಕೆ ತಡಮಾಡಿ ಪ್ರಾರಂಬಿಸಲು ಗುತ್ತಿಗೆದಾರರಿಗೆ ಹೇಳಿದಂತಿದೆ. ಈ ಸರಕಾರದಲ್ಲಿ ಶಾಸಕರಿಗೆ  ನೀಡಬೇಕಾದ 2ಕೋಟಿ ಅನುಧಾನದ ಬದಲು 50ಲಕ್ಷರೂ ಮಾತ್ರ ಬಿಡುಗಡೆ ಮಾಡಿದ್ದಾರೆ.  ಕಾಂಗ್ರೇಸ್ ನಿಂದ ಅಭಿವೃದ್ಧಿ ಸಾದ್ಯವಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ  ಈರಣ್ಣ ರಾವೂರ, ಗುರು ತಳವಾರ  ಪೀರು ಕೆರೂರ  ಮಾದ್ಯಮ ಪ್ರಮುಖ ಶಿವಕುಮಾರ ಬಿರಾದಾರ ಇದ್ದರು.


Comments

Leave a Reply

Your email address will not be published. Required fields are marked *