ಸಿಂದಗಿ : ನಾಳೆ ಸಿಂದಗಿ ಮತಕ್ಷೇತ್ರದಲ್ಲಿ ಪ್ರಭಲ ಪೈಪೋಟಿಯೆಂದೆ ಬಿಂಬಿತವಾಗಿರುವ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷಗಳಿಂದ ನಾಮಪತ್ರ ಸಲ್ಲಿಸಲಾಗುತ್ತಿದೆ.
ಬೆಳಿಗ್ಗೆ ಪತತ್ರಿಕಾಗೋಷ್ಠಿ ನಡೆಸಿದ ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ವಿಠ್ಠಲ ಕೋಳ್ಳುರ ಒಗ್ಗಟಿನಿಂದ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ತರಲು ನಾವು ಶ್ರಮಿಸುತ್ತೆವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರು ಸಹಿತ ಸಿಂದಗಿ ಕ್ಷೇತ್ರದಲ್ಲಿ ನಾವು ಅಧಿಕಾರ ಹಿಡಿಯುವಲ್ಲಿ ವಿಪಲವಾಗಿದೆವೆ. ಆದರೆ ಈ ಬಾರಿ ಕಾಂಗ್ರೇಸ್ ಪರವಾಗಿ ಉತ್ತಮ ಅಲ್ಲೆಇದ್ದು ಕಾಂಗ್ರೇಸ್ ಗೇಲವು ನಿಶ್ಚಿತ . ನಾಳೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾದ ಅಶೋಕ ಮನಗೂಳಿ ಅವರ ನಾಮಪತ್ರ ಸಲ್ಲಿಸುತ್ತಿದ್ದು ಗಾಂಧಿ ವೃತ್ತದಿಂದ ಭವ್ಯ ಮೆರವಣಿಗೆ ಪ್ರಾರಂಭಗೊಂಡು ಅಂಬೇಡ್ಕರ್ ವೃತ್ತದಿಂದ ಟಪ್ಪುಸುಲ್ತಾನ ಮಾರ್ಗವಾಗಿ ವಿವೇಕಾನಂದ ವೃತ್ತ ತಲುಪಿ ಆಡಳಿತಸೌಧಕ್ಕೆ ತೆರಳಿ ನಾಮಪತ್ರ ಸಲ್ಲಿಸಲಾಗುವುದು. ಮೆರವಣಿಗೆಯಲ್ಲಿ ಎಲ್ಲ ಕಾರ್ಯಕರ್ತರು ಭಾಗಿಯಾಗುವಂತೆ ಮನವಿ ಮಾಡಿದರು.
ನಂತರ ಮಾತನಾಡಿದ ಕಾಂಗ್ರೇಸ್ ಅಧಿಕೃತ್ತ ಅಭ್ಯರ್ಥಿ ಅಶೋಕ ಮನಗೂಳಿ ಬಿಜೆಪಿಯು ಹಿರಿಯರನ್ನು ಅಗೌರಿಸಿದ ಪರಿಣಾಮ ಇಂದು ಕಾಂಗ್ರೇಸ್ ಗೆ ಸೇರ್ಪಡೆಯಾಗುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೇಸ್ ಪರವಾದ ವಾತಾವರಣವಿದ್ದು ಅಧಿಕಾರ ಒಲಿಯಲಿದೆ. ಕಾಂಗ್ರೇಸ್ ಗ್ಯಾರಂಟಿ ಕಾರ್ಡಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಸ್ಥಳಿಯವಾಗಿ ಬಿಜೆಪಿ ನಾಯಕರು ಸ್ಥಳಿಯ ಆಡಳಿತಕ್ಕೆ ಬೇಸತ್ತು ಕಾಂಗ್ರೇಸ್ ಸೇರ್ಪಡೆಯಾಗುತ್ತಿದದು ಕಾಂಗ್ರೇಸ್ ಗೆ ಆನೆಬಲ ಬಂದಂತಾಗಿದೆ. ನಾಳೆ ನಡೆಯುವ ನಾಮಪತ್ರ ಸಲ್ಲಿಕೆಗೆ ಎಲ್ಲ ಕಾರ್ಯಕರ್ತರು ಆಗಮಿಸಬೇಕಾಗಿ ವಿನಂತಿಸಿದರು.
ಸಿಂದಗಿ ಅಖಾಡಕ್ಕೆ ಲಕ್ಷ್ಮಣ ಸವದಿ ಆಗಮಿಸುವರಾ ?
ಅವರು ಕಾಂಗ್ರೇಸ್ ಸೇರ್ಪಡೆಯಾಗುತ್ತಿದಂತೆ ಸಿಂದಗಿ ಮತಕ್ಷೇತ್ರದ ಕಾಂಗ್ರೇಸ್ ಹಾಗೂ ಗಾಣಿಗ ಸಮುದಾಯದ ಹಲವು ಮುಖಂಡರು ಬೇಟಿ ಮಾಡಿದ್ದು ಎರಡು ಬಾರಿ ಸಿಂದಗಿ ಮತಕ್ಷೇತ್ರದಲ್ಲಿ ಮತಯಾಚನೆ ಮಾಡಲಿದ್ದಾರೆ.
ಕಾಂಗ್ರೇಸ್ ಗ್ಯಾರಂಟಿ ಕಾರ್ಡ ಆಮ್ ಆದ್ಮಿ ಪಕ್ಷದ ಅಧಿಕಾರದ ನಕಲು ಎಂದು ಎಎಪಿ ವ್ಯಂಗ್ಯವಾಡಿದೆ ಎಂದು ವೇಗದೂತ ಪ್ರಶ್ನೇಗೆ ವಿವರಿಸಿದ ಮನಗೂಳಿ ಕಾಂಗ್ರೇಸ್ ಗ್ಯಂರಂಟಿ ಕಾರ್ಡ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಸೇರಿದಂತೆ ಹಲವು ಹಿರಿಯರೊಂದಿಗೆ ಚರ್ಚಿಸಿ ಮೂರು ತಿಂಗಳುಗಳ ಕಾಲ ಅಧ್ಯಯನ ನಡೆಸಿ ಇಬ್ಬರು ನಾಯಕರ ಸಹಿವುಳ್ಳ ಗ್ಯಾರಂಟಿ ಕಾರ್ಡ ವಿತರಿಸಲಾಗಿದೆ ಎಎಪಿ ನಮ್ಮ ವಿರೋಧ ಪಕ್ಷ ಅವರು ಆರೋಪ ಮಾಡುತ್ತಾರೆ ಎಂದರು.
ನಾಳೆ ರಮೇಶ ಭೂಸನೂರ ನಾಮಪತ್ರ ಸಲ್ಲಿಕೆ.
ಮೂರುಬಾರಿ ಅಧಿಕಾರ ಹಿಡಿದಿರುವ ಬಿಜೆಪಿ ಪಕ್ಷದಿಂದ ಮತ್ತೊಮ್ಮೆ ಶಾಸಕ ರಮೇಶ ಭೂಸನೂರ ಅಖಾಡಕ್ಕೆ ದುಮ್ಮುಕಿದ್ದಾರೆ. ನನ್ನ ಅಭಿವೃದ್ಧಿ ಕಾರ್ಯಗಳು ನನ್ನಗೆ ಕೈ ಬಿಡುವುದಿಲ್ಲ ಏ 13 ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಾಗಿದೆ. ನಾಳೆ ಕಾರ್ಯಕರ್ತರೊಂದಿಗೆ ಗಾಂಧೀವೃತ್ತದಿಂದ ಪ್ರಾರಂಭಗೊಂಡು ಬೃಹತ್ ಮೆರವಣಿಗೆ ನೇರವಾಗಿ ಸಂಗೋಳ್ಳಿ ರಾಯಣ್ಣ ವೃತ್ತದಿಂದ ವಿವೇಕಾನಂದ ವೃತ್ತಕ್ಕೆ ತೆರಳಿ ಆಡಳಿತ ಸೌಧಕ್ಕೆ ಆಗಮಿಸುವುದು ಕಾರಣ ಭೂತ್ ಮಟ್ಟದ ಕಾರ್ಯಕರ್ತರು ಆಗಮಿಸಲು ವಿನಂತಿಸಿದ್ದರು.
ಚುನಾವಣಾ ಉಸ್ತುವಾರಿ ಬಾಲಚಂದ್ರ ಮಾತನಾಡಿ ಸಿಂದಗಿ ಮತಕ್ಷೇತ್ರದಲ್ಲಿ ರಮೇಶ ಭೂಸನೂರ ಅವರ ಅಭಿವೃದ್ಧಿ ಕಾರ್ಯಗಳೆ ಅವರ ಗೆಲುವವಿಗೆ ಶ್ರೀರಕ್ಷೆ ಯಾಗಲಿದೆ ಪಕ್ಷದ ಪ್ರಚಾರಕ್ಕೆ ತೆರಳಿದಾಗ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು ಗೆಲವು ನಿಶ್ಚಿತ ಎಂದರು.
ಪಕ್ಷ ವಿರೋಧಿ ಚಟುವಟಿಕೆ ಸುನಂದಾ ಉಚ್ಚಾಟನೆ?
ಮಂಡಲ ಅಧ್ಯಕ್ಷ ಈರಣ್ಣ ರಾವೂರ ನಮ್ಮ ಪಕ್ಷದ ಮಹಿಳಾ ಮೋರ್ಚಾ ಅಧ್ಯಕ್ಷೆ ಹಾಗೂ ಅವರನ್ನು ಪುರಸಭೆಯ ನಾಮನಿರ್ದೇಶಿತ ಸದಸ್ಯರನ್ನಾಗಿ ಬಿಜೆಪಿ ಸರಕಾರ ಅವರಿಗೆ ಸಕಲ ಗೌರವ ನೀಡಿತ್ತು, ಆದರೆ ಯಾವುದೇ ಮಾಹಿತಿ ಇಲ್ಲದೆ ಅವರು ಕಾಂಗ್ರೇಸ್ ಸೇರುವ ಮುಖಾಂತರ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದು ಅವರನ್ನು ಬಿಜೆಪಿ ಪಕ್ಷದಿಂದ ುಚ್ಚಾಟನೆ ಮಾಡಲಾಗಿದೆ. ಸಿಂದಗಿ ಮಹಿಳಾ ಮೋರ್ಚಾ ನೂತನ ಅಧ್ಯಕ್ಷರಾಗಿ ನಿಲಮ್ಮ ಯಡ್ರಾಮಿ ಅವರನ್ನು ನೇಮಿಸಲಾಗಿದೆ ಎಂದರು.
Leave a Reply