ನವೆಂಬರ್ 7ರಂದು ವಿಧ್ಯಾರ್ಥಿದಿನವನ್ನಾಗಿ ಆಚರಿಸಿ ; ಬಾಲಕೃಷ್ಣ ಛಲವಾದಿ

ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಥಮ ಬಾರಿಗೆ‌ ಶಾಲೆಗೆ ಹೋದ ದಿನವನ್ನು ವಿಧ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಲಿ ಎಂದು ದಲಿತ ಸೇನೆಯ ತಾಲೂಕಾಧ್ಯಕ್ಷ  ಬಾಲಕೃಷ್ಣ ಛಲವಾದಿ ಹೇಳಿದರು.

ಸಿಂದಗಿ: ಪಟ್ಟಣದ ತಾಲೂಕು ಆಡಳಿತ ಸೌಧ ಕಾರ್ಯಾಲಯದಲ್ಲಿ  ದಲಿತ ಸೇನೆಯ ಕಾರ್ಯಕರ್ತರು ತಾಲೂಕಾ  ದಂಡಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಬಾಬಾಸಾಹೇಬರು 1900 ನವೆಂಬರ್ 7ರಂದು ಪ್ರಥಮ ಬಾರಿಗೆ ಮಹಾರಾಷ್ಟ್ರದ ಸಿತಾರ್ ಜಿಲ್ಲೆಯ ಪ್ರಧಾಬಸಿಂಗ್ ಪ್ರೌಡ ಶಾಲೆಗೆ ಸೇರಿದರು. 

ಸಾಮಾಜಿಕ ದೌರ್ಜನ್ಯ, ಅಸ್ಪೃಶ್ಯತೆ, ಅನಿಷ್ಠ ಪದ್ಧತಿಗಳನ್ನು ಬಾಲ್ಯದಲ್ಲಿ ಅನುಭವಿಸಿಕೊಂಡು ಬೆಳೆದ ಅವರು ಶಿಕ್ಷಣ ಪಡೆಯುವಲ್ಲಿ ಯಾರು ವಂಚಿತರಾಗಬಾರದೆಂದು ವಿಶೇಷವಾಗಿ  ಸಂವಿಧಾನದ ಕಲಂ  29 ಮತ್ತು 30 ರ ಮೂಲಕ ವಿದ್ಯಾರ್ಥಿಗಳಿಗೆ ಶಕ್ತಿಯಾಗಿದ್ದಾರೆ ಆದರಿಂದ ಈ ದಿನವನ್ನು ವಿದ್ಯಾರ್ಥಿ ದಿನವನ್ನಾಗಿ ಆಚರಿಸಲು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ  ವಿನಂತಿಸುವೆ ಎಂದರು. ದಂಡಾಧಿಕಾರಿಗಳ ಪರವಾಗಿ ಶಿರಸ್ತೇದಾರ ರೋಡಗಿ ಮನವಿ ಸ್ವೀಕರಿಸಿದರು. 

ಮೈಬೂಬ ಸಿಂದಗಿಕರ, ಖಾಜು ಹೊಸಮನಿ, ಸಂಜು ಕೂಟನೂರ, ದಸ್ತಗಿರಿ ಆಳಂದ ಸೇರಿದಂತೆ ದಲಿತ ಸೇನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.