ಈಗ ಚಿಕ್ಕ ಮಕ್ಕಳಲ್ಲಿ ಕಾಣಿಸಿಕೋಳ್ಳುತ್ತಿರುವ ಅಂಟು ರೋಗವೆಂದರೆ ಅದು ದಿಪ್ತೇರಿಯಾ ಅದಕ್ಕೆ ಸಿಂದಗಿ ಪಟ್ಟಣದಲ್ಲಿ ಮೊದಲು ಹನ್ನೊಂದು ವರ್ಷದ ಬಾಲಕ ಮೃತ್ತ ಪಟ್ಟಿದ್ದಾನೆ.
ಸಿಂದಗಿ : ನಗರದ ವಿದ್ಯಾನಗರದ ನಿವಾಸಿ ರಾಮು ಪತ್ತಾರ ಇವರ ಸುಪುತ್ರ ಹಲವು ದಿನಗಳಿಂದ ಆರೋಗ್ಯದಲ್ಲಿ ಏರಿಳಿತ ಕಂಡಿದ್ದರಿಂದ ಸಿಂದಗಿಯ ಖಾಸಗಿ ಆಸ್ಪತ್ರೆಯಾದ ವೆಂಕಟೇಶ್ವರ ಚಿಕ್ಕ ಮಕ್ಕಳ ಆಸ್ಪತ್ರೆಗೆ ಕುಟುಂಬಸ್ಥರು ಚಿಕೀತ್ಸೆಗೆ ದಾಖಲಿಸಿದಾರೆ ಎನ್ನಲಾಗಿದೆ.
ವೈದ್ಯರ ತಂಡವು ದಿಪ್ತೇರಿಯಾ ಎಂಬುದು ತಿಳಿದು ಹೇಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದಾರೆ. ಅದರಂತೆ ಖಾಸಗಿ ಆಸ್ಪತ್ರೆಯಾದ ವಿಜಯಪುರದ ಬಿದರಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ನೀಡಿದರು ದಿಪ್ತೇರಿಯಾ ಎಂಬ ಮಹಾಮಾರಿಯು ಹನ್ನೊಂದರ ಬಾಲಕ ಚಂದನ ಪತ್ತಾರ ಇವನ ಬದುಕಿಗೆ ಕರಿನೆರಳಾಗಿ ಪುಟ್ಟ ಬಾಲಕನನ್ನು ಬಲಿ ತೆಗೆದುಕೊಂಡಿದೆ.
ಇದರ ಕುರಿತು ಮಾಹಿತಿ ನೀಡಿದ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಎ.ಎ. ಮಾಗಿ ಇಂದಿನ ಪಾಲಕರು ಮಕ್ಕಳಿಗೆ ಲಸಿಕೆ ಹಾಕಿಸಲು ಹಿಂಜರಿಯುತ್ತಾರೆ ದಯವಿಟ್ಟು ಸರ್ಕಾರ ತರುವ ಯೋಜನೆಗಳು ಜನೋಪಯೋಗಿಗಳಾಗಿರುತ್ತವೆ. ಇಂತಹ ಕಾರ್ಯಕ್ರಮಗಳು ಕುರಿತು ಜನರಲ್ಲಿ ಆತಂಕ, ತಪ್ಪು ಕಲ್ಪನೆಗಳು ಸೃಷ್ಠಿಸಿಕೋಳ್ಳುವುದು ಬೇಡ. ದಿಪ್ತೇರಿಯಾ ದಿಂದ ಚಂದನ್ ಮೃತ್ತ ಹೊಂದಿದ್ದು ನೋವು ತಂದಿದೆ.
ಜನರ ಸಹಕಾರವು ನಮ್ಮಗೆ ಅವಶ್ಯಕತೆ ಬಹಳ ಇದೆ ಜನರ ಸಹಕಾರ ವಿಲ್ಲದೆ ಎನ್ನು ಮಾಡಲು ಸಾದ್ಯವಿಲ್ಲ. ಲಸಿಕೆಗಳು ಮಕ್ಕಳಿಗೆ ಹಾಕಿಸದೆ ಇದ್ದರೆ ಇಂತಹ ಅಡ್ಡ ಪರಿಣಾಮಗಳು ಕಾಣುತ್ತವೆ ಆದರಿಂದ ಮಕ್ಕಳಿಗೆ ಸರಿಯಾದ ಸಮಯಕ್ಕೆ ಲಸಿಕೆಗಳು ಕೋಡಿಸಬೇಕು ಎಂದರು.
ಮೃತ ಚಂದನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Leave a Reply