ಸಿಂದಗಿ : ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದ ಹತ್ತಿರ ಘಟನೆ ನಡೆದಿದ್ದು ಸರ್ಕಾರಿ ಬಸ್ಸಿಗೆ ದ್ವಿಚಕ್ರ ವಾಹನ ಹಾಯ್ದು ಬೈಕ್ ಸವಾರ ಮೃತ್ತಪಟ್ಟಿದ್ದಾನೆ.
ಸಿಂದಗಿ ಯಿಂದ ವಿಜಯಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸಿಗೆ ಅಲ್ಲಿರುವ ದಾಬಾದಿಂದ ಕುಡಿದು ಬರುತ್ತಿರುವಾಗ ಘಟನೆ ನಡೆದಿದೆ. ದಾಬಾದಲ್ಲಿ ಮಾರುವ ಅಕ್ರಮ ಮದ್ಯಪಾನಕ್ಕೆ ಜೀವ ಬಲಿಯಾಗಿದೆ ಅಬಕಾರಿ ಇಲಾಖೆ ವಿಫಲವಾಗಿದೆ ಕಿರಾಣಿ ಅಂಗಡಿಯಲ್ಲಿಯು ಮಧ್ಯಪಾನ ಮಾರಲಾಗುತ್ತಿದೆ, ಆದರು ಎನ್ನು ಮಾಡಲಾಗದು ಎಂದು ಜನರು ಮಾತನಾಡುತ್ತಿದ್ದಾರೆ.
ಮೃತ್ತ ವ್ಯಕ್ತಿಯ ತಾಯಿಯ ಶವಗಾರದ ಮುಂದಿನ ಆಕ್ರಂದನ ಕೇಳುವವರಿಲ್ಲದೆ ಅವಳ ದುಃಖ ಭರಿತ ನೋವು ಹೊರಹಾಕುತ್ತಿರುವುದು ನೋಡಿದರೆ ಕರುಳು ಚುರ್ ಎನ್ನಿಸುತ್ತಿತ್ತು.
ರೋಡಿನ ಕಾಮಗಾರಿಯ ಕೆಲಸಕ್ಕಾಗಿ ಸಿಂದಗಿಗೆ ಬನ್ನೆಟ್ಟಿ ಗ್ರಾಮಕ್ಕೆ ತೆರಳುವ ರೋಡಿನ ಕೆಲಸ ಮಾಡುತ್ತಿದ್ದಾರೆ ಎಂದು ಜೊತೆ ಕೆಲಸಗಾರ ಮಾಹಿತಿ ನೀಡಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅತ್ತಿಗೇರಿ ಗ್ರಾಮದವನಾಗಿದ್ದು ಮೃತ್ತ ವ್ಯಕ್ತಿ ಅಲ್ಲಾಭಕ್ಷ ತಂದೆ ನೂರಸಾಬ ಜಾತಗಾರ ವಯಸ್ಸು 20 ಎಂದು ತಿಳಿದುಬಂದಿದೆ. ಸಿಂದಗಿ ಪೋಲೀಸ್ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ.
Leave a Reply