ತಾಲೂಕಾ ದಂಡಾಧಿಕಾರಿಗಳಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಶನಿವಾರದ ಮುಸ್ಸಂಜೆಯ ಸಮಯದಲ್ಲಿ ಸಿಂದಗಿ ಕಂದಾಯ ಇಲಾಖೆಯ ಕಛೇರಿಯಿಂದ ಇಬ್ಬರು ತಹಶೀಲ್ದಾರರನ್ನು ಬಿಳ್ಕೋಡುಗೆ ಮಾಡುತ್ತಿರುವುದು ವಿಶೇಷ ಎಂದು ಶಿರಸ್ತೇದಾರ ಎಸ್.ಎಸ್.ಮ್ಯಾಗೇರಿ ಹೇಳಿದರು.

ಸಿಂದಗಿ : ತಾಲೂಕಾ ಆಡಳಿತ ಕಾರ್ಯಾಲಯದಲ್ಲಿ  ನಡೆದ ಬಿಳ್ಕೋಡುಗೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮಗೆ ಶಾಂತಿ-ಕ್ರಾಂತಿ ಯೊಂದಿಗೆ ಕಾರ್ಯ ನಿರ್ವಹಿಸುವ ಅನುಭವ ಸಿಕ್ಕಿದೆ. 

ಉಪ ಚುನಾವಣೆಯ ಸಂದರ್ಭದಲ್ಲಿ ಸಾಕಷ್ಟು ಒತ್ತಡಗಳಲ್ಲಿ ಕೆಲಸ‌ಮಾಡಬೇಕಿತ್ತು, ಆದರೆ ಪ್ರಕಾಶ ಸಿಂದಗಿ ಅವರ ಮಾರ್ಗದರ್ಶನದಲ್ಲಿ ಕೆಲಸಮಾಡಿ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಧೈರ್ಯ ನೀಡಿದವರು ನಿಂಗಣ್ಣ ಬಿರಾದಾರ ಅವರು. 

ಅದರಂತೆ ರಾಜ್ಯವೇ ನೋಡುವಂತ ಉಪ ಚುನಾವಣೆಯಲ್ಲಿ ತಮ್ಮ ತಾಳ್ಮೆಯಿಂದಲೇ ಯಶಸ್ವಿಯಾಗಿ ಚುನಾವಣೆ ನಡೆಸಿರುವುದು  ಪ್ರಕಾಶ ಬ.ಸಿಂದಗಿ. ಅವರು ಅಧಿಕಾರಿಗಳಿಗ ಪ್ರೇರಣಾ ದಾಯಕರಾಗಿದ್ದಾರೆ.

ರಜೆ ಬೇಕೆಂದರೆ ನೂತನ  ಸವಾಲು ಎದುರಿಸಲು ಸಿದ್ದವಾಗಿರಬೇಕಾಗಿತ್ತು. ನಮ್ಮೊಂದಿಗೆ ಸದಾಕಾಲ ನಿಂತ ನಿಂಗಣ್ಣ ಬಿರಾದಾರ ಅವರು ಸ್ವಚ್ಛವಾದ ಮನಸ್ಸಿನಿಂದ ಎದುರಿಗೆ ಮಾತನಾಡುವ ಸ್ವಭಾವದವರು. ಕಛೇರಿಯ ಕಡತಗಳನ್ನು ಸಂಪೂರ್ಣವಾಗಿ ನಿಬಾಯಿಸಿ  ಕ್ರಾಂತಿಯನ್ನು ಮಾಡಿದರು ಎಂದು ಹೇಳಿದರು.

ನಂತರ ಮಾತನಾಡಿದ ದಲಿತ ಮುಖಂಡ ವಾಯ್.ಸಿ.ಮಯೂರ ರಾಜಕೀಯ ಲೇಟರ್ ಉಪಯೋಗಿಸಿ ಅಧಿಕಾರಕ್ಕೆ ಬಂದವರು ಬಗ್ಗೆ ಗೊಂದಲ ಸೃಷ್ಟಿ ಯಾಗಿರುವುದು ಸತ್ಯ. ನಾವು ಪೂರ್ವ ಗ್ರಹ ಪೀಡಿತರಾಗಿರುತ್ತೆವೆ. ಅದರಂತೆಯೇ ನಾವು ದೂರದಿಂದಲೆ ಯಾರ ಬಗ್ಗೆಯೂ ತಪ್ಪು ತಿಳುವಳಿಕೆಯಿಂದ ಮಾತನಾಡಬಾರದು. ಆದರೆ ನಿಂಗಣ್ಣ ಬಿರಾದಾರ ಅವರ ಕಾರ್ಯನೋಡಿದಾಗ ಅವರು ಸಿಂದಗಿ ಕ್ಷೇತ್ರಕ್ಕೆ ಜಾತಿ, ಸಮುದಾಯ, ರಾಜಕೀಯ ಎಲ್ಲವನು ಮೀರಿ ಕೆಲಸ ಮಾಡಿದರು. 

ಅದರಂತೆ ಪ್ರಕಾಶ ಸಿಂದಗಿ ಮೃದು ಮನಸ್ಸಿನ ಸ್ವಭಾವದವರು ಪ್ರಥಮಬಾರಿಗೆ ಅಧಿಕಾರ ವಹಿಸಿಕೊಂಡಾಗ ಅವರು ಕಛೇರಿಯ ಬಗ್ಗೆ ಕೆಲವು ದೂರುಗಳು ಬಂದಾಗ ಅವರಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದೆ, ಆದರೆ‌ ಅದನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಕಾರ್ಯಾಡಳಿತವನ್ನೆ ಬದಲಿಸಿ ಅಧಿಕಾರಿಗಳಿಗೆ ಪ್ರೇರಣೆಯಾಗಿ ಇಲ್ಲಿಂದ ಅವಿಭಾಜಿತ ತಾಲ್ಲೂಕಿಗೆ ಪದೋನ್ನತಿ ಹೊಂದಿ ಸೇವೆ ಸಲ್ಲಿಸಲು ಹೋಗುತ್ತಿರುವುದು ಸಂತಸದ ವಿಷಯ ಎಂದರು.

ನಂತರ ಕಾರ್ಯಕ್ರಮದ ಕೇಂದ್ರ ಬಿಂದು ತಹಶೀಲ್ದಾರರಾಗಿ ಕಾರ್ಯನಿರ್ವಹಿಸಿ ವರ್ಗಾವಣೆ ಗೊಂಡ ನಿಂಗಪ್ಪ ಬಿರಾದಾರ ಮಾತನಾಡಿ ಜಿಲ್ಲೆಯಲ್ಲಿ  ಕಡತಗಳ ವಿಚಾರವಾಗಿ ಬಹು ಹಿನ್ನಡೆ ವಾಗಿರುವ ತಾಲ್ಲೂಕು ಸಿಂದಗಿ ಎನ್ನಲಾಗಿತ್ತು. ಆದರೆ ಇಂದು ನಿಮ್ಮ ಸಹಕಾರದಿಂದ ಎರಡು ಮತ್ತು ಮೂರು ಸ್ಥಾನದಲ್ಲಿ  ಇರುವುದು ಸಂತಸ ತಂದಿದೆ. ಭೂಮಿಯಲ್ಲಿ ಪ್ರಥಮ ಸ್ಥಾನ ಹೊಂದಿದೇವೆ. ರೈತರ ರಸ್ತೆ ಪ್ರಕರಣಗಳು ಇತ್ಯರ್ಥ ಮಾಡಿರುವ ತೃಪ್ತಿ ನನ್ನಗಿದೆ ಇದುವರೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು.

ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಪ್ರಕಾಶ ಸಿಂದಗಿ ಅವರು ಮಾತನಾಡಿ  ಅನಿರ್ವಾಯವಾಗಿ ಸರ್ಕಾರಿ ನೌಕರಿಗೆ ಬಂದವನು, ವಕೀಲನಾಗ ಬೇಕಾದವನು ಕಂದಾಯ ಇಲಾಖೆಯಿಂದ ಸೇವೆ ಮಾಡುವ ಸೌಭಾಗ್ಯ ನನ್ನಗೆ ಸಿಕ್ಕಿದೆ. ಇಂದಿನ ಕೆಲಸ ಇಂದೇ ಮುಗಿಸಬೇಕು ಎಂಬುದು ನನ್ನ ಹವ್ಯಾಸ ಅದನ್ನೇ ಆಡಳಿತದಲ್ಲಿಯೂ ರೂಡಿಸಿಕೊಂಡೆ.  ನಮ್ಮ ಅಧಿಕಾರಿಗಳು ಸಹಕರಿಸಿದರು  ಅದರ ಪರಿಣಾಮವಾಗಿ ಉತ್ತಮ ಸೇವೆ ನೀಡಲು ಸಾದ್ಯವಾಯಿತು ಎಂದರು 

ಅಧ್ಯಕ್ಷತೆ ವಹಿಸಿದ ತಾಲೂಕಾ  ತಹಶೀಲ್ದಾರ್ ರಾಗಿ ತಾತ್ಕಾಲಿಕವಾಗಿ ಕರ್ತವ್ಯ ವಹಿಸಿಕೊಂಡ ಸುರೇಶ ಡಿ.ಚಾವಲರ ಅಧ್ಯಕ್ಷೀಯ ನುಡಿಗಳನ್ನಾಡಿ ಈ ಕೆಲಸ ಆಗಬೇಕೆಂದರೆ ಆಗಲ್ಲೆ ಬೇಕು, ಕೇವಲ ಕಛೇರಿಯಲ್ಲಿ ಕುಳಿತು ಸಹಿ ಮಾಡುವ ಅಧಿಕಾರಿ ನಿಂಗಣ್ಣ ಬಿರಾದಾರ ಅವದದು ಅಲ್ಲ.  ಅದರ ತಳಹದಿಯಿಂದ ಅಧ್ಯಯನಿಸಿ ಮುಂದೆ ನಿರ್ಣಯ ತೆಗೆದುಕೊಳ್ಳುವ ಕಾರ್ಯ ಅವರದ್ದು. 

ಸಿಂದಗಿ ಚುನಾವಣೆ ಕಪ್ಪು ಚುಕ್ಕೆ ಬಾರದಂತೆ ಕೆಲಸ ಮಾಡಿರುವುದು ನಮ್ಮ ಸೇವೆಯಲ್ಲಿ ಸ್ಮರಣಿಯವಾದದ್ದು.

ಪ್ರಕಾಶ ಸಿಂದಗಿ ಅವರು ಕಾನೂನು ಅನುಬವಸ್ಥರು ಅವರು ನೋಡಿ ಕಲಿಯುವುದು ತುಂಬಾ ಇದೆ ದೇ.ಹೀಪ್ಪರಗಿಯ ಹಲವು ಒಡನಾಡಿಗಳಲ್ಲಿ

ನಾನು ಹೇಳಿರುವೆ ಅವರು ನಿಮ್ಮ ತಾಲೂಕಿಗೆ ಬಂದಿರುವುದು ನಿಮ್ಮ ಪುಣ್ಯ ಎಂದು. ಇಬ್ಬರು ಅಧಿಕಾರಿಗಳು ಮತ್ತೆ ಪದೋನ್ನತಿ ಹೊಂದಿ ಸಿಂದಗಿಗೆ ಸೇವೆ ಮಾಡಲು ಬರಲಿ ಎಂದು ಆಶಯ ವ್ಯಕ್ತಪಡಿಸಿದರು. 

ಡಿ.ಹುಲುಗಪ್ಪ ಸಿ.ಪಿ.ಐ ಸಿಂದಗಿ, ಅಶೋಕ ತೇಲ್ಲೂರು ಮಾತನಾಡಿದರು. ಬಾಬು ರಾಠೋಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿರಸ್ತೇದಾರ ರೊಡಗಿ, ಸರ್ಕಲ್ ಕಾಸಿಂ ಮಕಾಂನದಾರ, ತಲಾಟಿ ನಿಕೀಲ, ಚೇತನ ಬೋಸಗಿ, ಶೈಲಜಾ ಸ್ಥಾವರಮಠ,‌ ಸುನಂದಾ ಯಂಪೂರೆ, ಹಾಗೂ ಇಲಾಖೆಯ ಸಿಬ್ಬಂದಿ ವರ್ಗ ಹಾಗೂ ನಗರದ ಪ್ರಮುಖರು ಉಪಸ್ಥಿತರಿದ್ದರು.