ನಿಮ್ಮಗಿಂತಲೂ ಚಿಕ್ಕವರ ಕೈಗೆ ಮಹತ್ತರ ಜವಾಬ್ದಾರಿ ನೀಡಿದ್ದಿರಿ ನಮ್ಮಗೆ ಸರಿಯಾದ ಮಾರ್ಗ ತೋರಿಸಿ ಎಂದು ನೂತನ ಅಧ್ಯಕ್ಷ ಮುತ್ತು ಮುಂಡೇವಾಡಗಿ ಮನವಿ ಮಾಡಿದರು.
ಸಿಂದಗಿ : ಪಟ್ಟಣದ ಸಂಗಮೇಶ್ವರ ದೇವಾಸ್ಥಾನದಲ್ಲಿ ನಡೆದ ಗುತ್ತಿಗೆದಾರರ ಸಭೆಯಲ್ಲಿ ಎಲ್ಲರ ಸಹಮತದೊಂದಿಗೆ ಸಿಂದಗಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಸರ್ವ ಸದಸ್ಯರ ಒಮ್ಮತ್ತದಿಂದ ಅಧ್ಯಕ್ಷರಾಗಿ ನೇಮಕಗೊಂಡ ಅವರು ನಾವು ಸಂಘದ ಕೆಲಸವನ್ನು ಎಷ್ಟರ ಮಟ್ಟಿಗೆ ನಿಬಾಯಿಸುತ್ತೇವೆ ಎಂಬುದು ಮುಖ್ಯವಾದದ್ದು. ನಿವೇಲ್ಲರು ಸಮ್ಮ ಸರಿ ತಪ್ಪುಗಳಲ್ಲಿ ನಮ್ಮೊಂದಿಗೆ ಇದ್ದೀರಿ ಎಂಬ ಭರವಸೆಯೊಂದಿಗೆ ಈ ಜವಾಬ್ದಾರಿಯನ್ನು ತೆಗೆದುಕೊಂಡಿರುವೆವು ನಮ್ಮ ತಪ್ಪುಗಳನ್ನು ತಿಳಿ ಹೇಳಿ ನಮ್ಮ ಸರಿಗಳಿಗೆ ಬೆಂಬಲವಾಗಿರುತ್ತಿರೆಂದು ನಂಬಿದೇನೆ ನನ್ನನು ಸರ್ವ ಒಮ್ಮತ್ತದಿಂದ ಆಯ್ಕೆ ಮಾಡಿದ ಎಲ್ಲ ಗೌರವಾನ್ವಿತ ಸದಸ್ಯರಿಗೆ ಧನ್ಯವಾದಗಳು ಹೇಳಿದರು.
https://www.facebook.com/share/v/18SMNyWqTc/
ನಂತರ ಮಾತನಾಡಿದ ಗುತ್ತಿಗೆದಾರ ಧಾನೇಶ ಬಮ್ಮಣ್ಣಿ ಸಂಘ ಉತ್ತರೋತ್ತರವಾಗಿ ಸಂಘ ಬಹಳ ದಿನಗಳಿಂದ ಆಗಬೇಕಾಗಿತ್ತು ಇಂದು ನೇರೆವೇರುತ್ತಿರುವುದು ಸಂತಸ ತಂದಿದೆ. ಸಣ್ಣ ಗುತ್ತಿಗೇದಾರರಿಂದ ದೊಡ್ಡ ಗುತ್ತಿಗೇದಾರರ ಹಿತ ಕಾಪುಡುವುದು ಸದಸ್ಯರ ಹಾಗೂ ಸಂಘದ ಕರ್ತವ್ಯವಾಗಿರುತ್ತದೆ ಅವರಿಗೆ ಅನೂಕುಲಕರವಾಗಿರಲ್ಲಿ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ತಾವೇಲ್ಲರು ಪ್ರಮುಖ ಪಾತ್ರ ವಹಿಸುತ್ತಿರಿ ಎಂಬ ಭರವಸೆ ಇದೆ. ಈ ರೀತಿಯಾಗಿ ನಮ್ಮ ಸಂಘವು ಇನ್ನು ಎತ್ತರಕ್ಕೆ ಬೆಳೆಯಲ್ಲಿ ಎಂದು ಸಂಗಮೇಶ್ವರರಲ್ಲಿ ಪಾರ್ಥಿಸುತ್ತೇನೆ ಎಂದರು.
ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಮುತ್ತು ಮುಂಡೇವಾಡಗಿ ಉಪಾಧ್ಯಕ್ಷರಾಗಿ ಬಾಬು ಬಿಜ್ಜರಗಿ ಹಾಗೂ ರಾಮನಗೌಡ ಬಿರಾದಾರ, ನಾನಾಗೌಡ ಕಡ್ಲೇವಾಡ, ಕಾರ್ಯದರ್ಶಿಯಾಗಿ ಪಿ.ವಿ. ಬಿರಾದಾರ ಹಾಗೂ ನಾರಾಯಣ ಕುಲಕರ್ಣಿ, ಖಜಾಂಚಿ ಎಮ್.ಬಿ.ಕೋರಿ ಆಯ್ಕೆಯಾದರು. ಸಲಹಾ ಸಮಿತಿ ಸದಸ್ಯರಾಗಿ ಮಹಾದೇವಪ್ಪ ಸಿಂದಗಿ, ಸೋಮನಗೌಡ, ಪ್ರಭುಗೌಡ ಪಾಟೀಲ, ಬಿ.ಎಸ್.ನಾಗೂರ, ಬಸªನಗೌಡ ಪಾಟೀಲ, ಬಸವರಾಜ ಶೀಚವಂತ, ಅಶೋಕ ಮಠ, ಬಿ.ಜಿ ನಾಗೂರ ಆಯ್ಕೆಯಾದರು.
ಈ ಸಂಧರ್ಭದಲ್ಲಿ ಶೀವಪುತ್ರ ಕರ್ನಾಳ, ಕುಮಾರ ದೇಸಾಯಿ, ಮಹೇಶ ಮನಗೂಳಿ, ಮುತ್ತು ಮಾಳೇಗಾರ, ಚನ್ನು ಹೊಡ್ಲ, ನಾರಾಯಣ ರಡ್ಡಿ ಮಲ್ಲು ಶಂಬೇವಾಡ, ಎನ್.ಎಮ್. ಸಿಂದಗಿಕರ, ಸಂತೋಷ ಪೂಜರಿ ಹಲವಾರು ಗುತ್ತಿಗೆದಾರರು ಉಪಸ್ಥಿತರಿದ್ದರು. ರಾಜೂ ಕೂಚಬಾಳ ವಂದನಾರ್ಪಣೆ ಮಾಡಿದರು.
Leave a Reply