ತಾಲೂಕಾ ಆಡಳಿತದಿಂದ ಸ್ವಾತಂತ್ರ್ಯೋತ್ಸವ | ಆಡಳಿತ ವರ್ಗಕ್ಕೆ ಖಂಡನೆ

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ 77ನೇ ಸ್ವಾತಂತ್ರ್ಯೋತ್ಸವದಲ್ಲಿ ತಾಲೂಕು ದಂಡಾಧಿಕಾರಿ ಪ್ರದೀಪ ಹಿರೇಮಠ ಧ್ವಜಾರೋಹಣ ಮಾಡಿದರು.

ಸಿಂದಗಿ: ಜಾತಿ, ಧರ್ಮ, ಮತ, ಪಂತಗಳಿಗಿಂತ ದೇಶ ಪ್ರೇಮ ದೊಡ್ಡದು. ಸಂವಿಧಾನದಿಂದ ಭಾರತ ಬದಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ 77ನೇ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಭಾರತವು ಇಂದು ಸಧೃಡವಾಗಿ, ಆರ್ಥಿಕವಾಗಿ ಸಬಲವಾಗಿದೆ ಎಂದರೆ ಅದಕ್ಕೆ ಕಾರಣ ಡಾ.ಬಿ.ಆರ್.ಅಂಬೇಡ್ಕರ್‌ರವರು ಬರೆದಿರುವ ಸಂವಿಧಾನ ಎಂದರು. ಇಂದು ನಾವೆಲ್ಲರೂ ದೇಶಕ್ಕಾಗಿ ಹೋರಾಡಿದ ಹೋರಾಟಗಾರರನ್ನು ಸ್ಮರಿಸಿಕೊಳ್ಳಬೇಕು.

ಕಾಂಗ್ರೆಸ್ ಪಕ್ಷ ಭರವಸೆ ನೀಡದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ. ಸಿಂದಗಿ ಮತಕ್ಷೇತ್ರವನ್ನು ಮಾದರಿ ಅಭಿವೃದ್ದಿಯ ಪಥದಲ್ಲಿ ನಡೆಸುವ ಭರವಸೆ ನೀಡುವೇ ತೋಟಗಾರಿಕೆ ಇಲಾಖೆ, ಕಡಣ ಬ್ರಿಡ್ಜ್ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸಂಪೂರ್ಣ ನೀರಾವರಿ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಕಾರ್ಯವನ್ನು ಮಾಡುವೆ ಎಂದು ಭರವಸೆ ನೀಡಿದರು.

ತಾಲೂಕು ದಂಡಾಧಿಕಾರಿ ಪ್ರದೀಪ ಹಿರೇಮಠ ಮಾತನಾಡಿದರು.
80ವರ್ಷಕ್ಕೂ ಮೇಲ್ಪಟ್ಟು ಸರ್ಕಾರಿ ಪಿಂಚಣ ಪಡೆಯುತ್ತಿರುವ ಹಿರಿಯ ನಾಗರಿಕ ಫಲಾನುಭವಿಗಳಿಗೆ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಮಾಡಲಾಯಿತು. ಪಟ್ಟಣದ ವಿವಿಧ ಶಾಲೆಯ ಮಕ್ಕಳು ಛದ್ಮ ವೇಷ ಧರಿಸಿದ್ದರು. ಕಲಾ ನೃತ್ಯ ತಂಡಗಳಿಂದ ಮನೋರಂಜನೆ ಕಾರ್ಯಕ್ರಮ ನೀಡಲಾಯಿತು.

ಈ ವೇಳೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಬಾಬೂ ರಾಠೋಡ, ಸಿ.ಪಿ,ಐ ಡಿ.ಹುಲುಗಪ್ಪ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಆಯ್.ಎಸ್.ಟಕ್ಕೆ ಇದ್ದರು.ದೈ.ಶಿಕ್ಷಕ ಸಿದ್ದಲಿಂಗ ಚೌಧರಿ ನಿರೂಪಿಸಿದರು.

ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತದ  ವಿರುದ್ಧ ಆಕ್ರೋಶ ವ್ಯಕ್ತ 

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿ ವರ್ಷ  ಧ್ವಜಾರೋಹಣ ತಾಲೂಕಾ ಆಡಳಿತದ ಸಮ್ಮುಖದಲ್ಲಿ ಶಾಸಕರು ಉಪಸ್ಥಿತಿಯಲ್ಲಿ  ಜರುಗುತ್ತಿತ್ತು. ಆದರೆ ಧ್ವಜಾರೋಹಣ ಸಮಯಕ್ಕೆ ಬರಬೇಕಾದ ತಾಲೂಕಾ ಆಡಳಿತದ ಸಿಬ್ಬಂದಿ ತಡವಾಗಿ ಬಂದಿರುವುದರಿಂದ  ಶಾಸಕರು ಮುಂಚಿತವಾಗಿ ಬಂದು ನಮನ ಸಲ್ಲಿಸಿ ಹೋದರು. ದಲಿತ ಮುಖಂಡರ ಸಮ್ಮುಖದಲ್ಲಿ  ಧ್ವಜಾರೋಹಣ ಮಾಡಿ ಮಾತನಾಡಿದ ದಲಿತ ಮುಖಂಡ ರಾಜಶೇಖರ ಕೂಚಬಾಳ ತಾಲ್ಲೂಕು ಆಡಳಿತ ಡಾ.ಬಿ.ಆರ್. ವೃತ್ತಕ್ಕೆ ಆಗಮಿಸದೆ ಇರುವುದು ಅತ್ಯಂತ ಕೆಟ್ಟ ಹಾಗೂ ಅಗೌರವಕ್ಕೆ ಸಾಕ್ಷಿಯಾಗಿದೆ. ಇದರ ವಿರುದ್ಧ  ರಸ್ತೆಗಿಳಿದು  ಹೋರಾಟ ಮಾಡಬೇಕಾಗುತ್ತದೆ  ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಡವಾಗಿ ಬಂದ ನೂತನ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹಾಗೂ ಸಿಬ್ಬಂದಿಗೆ ಅಲ್ಲಿನ ಮುಖಂಡರು ತರಾಟೆಗೆ ತೆಗೆದುಕೊಂಡರು.