ಸಿಂದಗಿ : ಇಂದು ದೇಶ ದಲ್ಲೇಲಾ ವಂದೇ ಮಾತರಂ , ಜನ ಗಣ ಮನ ದಿಂದ ಪ್ರತಿಧ್ವನಿಸುತ್ತಿದೆ. ನಮ್ಮ ದೇಶವು ಬ್ರಿಟಿಷರ್ ದಾಶ್ಯದಿಂದ ಬಿಡುಗಡೆಗೊಂಡು ಸ್ವಾತಂತ್ರ ಪಡೆದು ಮೂರು ವರ್ಷಗಳ ಬಳಿಕ ನಮ್ಮದೆ ಆದ ಸಂವಿಧಾನ ರಚಿಸಲು ಅನೇಕ ಚಿಂತಕರು ತಜ್ಞರು ಡಾ.ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಪ್ರಪಂಚಕ್ಕೆ ಮಾದರಿಯಾಗುವ ಸಂವಿಧಾನ ರಚಿಸಿದ್ದಾರೆ ಎಂದು ಶಾಸಕ ಭೂಸನೂರ ಹೇಳಿದರು .
ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ರಮೇಶ ಭೂಸನೂರ ಮಾತನಾಡಿ 1947ರ ಅಗಷ್ಟ 15 ಸ್ವಾತಂತ್ರ್ಯ ಪಡೆದುಕೊಂಡ ದಿನವಾದರೆ 1950 ಜನೇವರಿ 26 ರಾಜ್ಯ ಪ್ರಭುತ್ವ ತ್ಯಜಿಸಿ ಪ್ರಜಾ ಪ್ರಭುತ್ವದಲ್ಲಿ ನಿಜ ಅಸ್ತಿತ್ವವನ್ನು ಸ್ಥಾಪಿಸಿದ ದಿನವಾಗಿದೆ. ಈ ಕಾರಣಕ್ಕಾಗಿ ಭಾರತೀಯರ ಪಾಲಿಗೆ ಗಣರಾಜ್ಯವು ಮಹತ್ವದ ದಿನವಾಗಿದೆ. ಭಾರತ ತನ್ನದೆ ಯಾದ ಸಂವಿಧಾನ ಜಾರಿಗೆ ತರುತ್ತಿದ್ದಂತೆ ಪ್ರಜಾಪ್ರಭುತ್ವ ಗಣರಾಜ್ಯವಾಗಿ ಬದಲಾಯಿತು. ಇದರ ಮೂಲ ದ್ಯೇಯ ಸಮಾನತೆ ಎಲ್ಲರಿಗೂ ಒಂದೇ ಕಾನೂನು ಸರ್ವ ಧರ್ಮ ಸಮನ್ವತೆಯಿಂದ ಕೂಡಿದೆ ಎಂದು ಹೇಳಿದರು. ಪುರಸಭೆ ಅದ್ಯಕ್ಷ ಡಾ. ಶಾಂತವೀರ ಮನಗೂಳಿ ಹಾಗೂ ತಾಲುಕಾ ದಂಡಾಧಿಕರಿ ನಿಂಗಣ್ಣ ಬಿರಾದಾರ ಮಾತನಾಡಿದರು.
ಆಕರ್ಷಕ ಪಥಸಂಚಲನ
ಶಾಲಾ ಮಕ್ಕಳ ಪಥಸಂಚಲನದಲ್ಲಿ ಸ್ಕೌಟ್ ಮತ್ತು ಗೈಡ್ಸನೊಂದಿಗೆ ಲೋಯಲಾ ಶಾಲೆ, ಅಗ್ನೀ ಶಾಮಕ ಸಿಬ್ಬಂದಿಗಳು, ಪದಕವಾಮತ ಹುಪ್ಸನೊಂದಿಗೆ ಎಚ್.ಜಿ. ಕನ್ಯಾ ಪ್ರೌಡ ಶಾಲೆ, ಡಂಬೆಲ್ಸ್ ಅಂಜುಮನ ಪ್ರೌಡ ಶಾಲೆ, ಪದಕವಾಯತ ಪ್ರೇರಣಾ ಮತ್ತು ಆದರ್ಶ ಶಾಲಾ ಮಕ್ಕಳು, ಪ್ಲಾವರ್ ಪದ್ಮರಾಜ ಶಾಲೆ, ಎನ್.ಸಿ.ಸಿ ಯೊಂದಿಗೆ ಆರ್.ಡಿ.ಪಾಟೀಲ ಮತ್ತು ಟಿ.ಎಮ್.ಸಿ ಮನಗೂಳಿ ಪ.ಪೂ ಸಿಂದಗಿ ಹಾಗೂ ಎಚ್.ಜಿ. ಪ್ರೌಡ ಶಾಲಾ ಮಕ್ಕಳು ಅದ್ಬುತವಾದ ಪಥ ಸಂಚಲನ ನಡೆಸಿಕೊಟ್ಟರು.
ಬೇಟಿ ಬಚಾವೋ ಬೇಟಿ ಪಡಾವೋ ಪ್ರತಿಜ್ಞಾವಿಧಿ
ಬಾರತದ ಪ್ರಜೆಗಳಾದ ನಾನು ವೈಯಕ್ತಿಕವಾಗಿ ಮತ್ತು ಸಂಘಕವಾಗಿ ಕೆಲಸ ನಿರ್ವಹಿಸಿ ಎಲ್ಲ ಬಗೆಯ ಲಿಂಗಧಾರಿತ ತಾರತಮ್ಯವನ್ನು ಕೊನೆಗೊಳಿಸಲು ಬದ್ದನಾಗಿದ್ದೇನೆ. ಹೆಣ್ಣು ಮಗುವಿನ ಶಿಕ್ಷಣಕ್ಕೆ ಹಾಗೂ ಅವಳಿಗೆ ಲಭಿಸಬೇಕಾದ ಪ್ರೀತಿ, ವಾತ್ಸಲ್ಯ, ಸುರಕ್ಷತೆ, ಹಾಗೂ ಪೋಷಣೆ ದೊರೆಯುವಂತೆ ನೋಡಿಕೊಳ್ಳುವ ಮೂಲಕ , ಅವಳನ್ನು ಈ ದೇಶದ ಶಕ್ತಿಶಾಲಿ ಹಾಗೂ ಸಮಾನ ಅಧಿಕಾರಗಳನ್ನು ಹೊಂದಿದ ಪ್ರಜೆಯಾಗುವಂತೆ ರೂಪಗೊಳ್ಳಲು ನಾನು ನನ್ನ ಕರ್ತವ್ಯ ಪಾಲಿಸುತ್ತೆನೆ. ಈ ಹೆಣ್ಣು ಮಗುವನ್ನು ರಕ್ಷೀಸಿ ಹೆಣ್ಣು ಮಗುವನು ಓದಿಸಿ ಎಂಬ ಸಂದೇಶವನ್ನು ನನ್ನ ನೆರೆಹೊರೆಯಲ್ಲಿ ಪಸರಿಸುವ ಕಾರ್ಯವನ್ನು ಶೃದ್ಧಾಪೂರ್ವಕವಾಗಿ ಮಾಡುವುದಾಗಿ ಪ್ರತಿಜ್ಞಾವಿಧಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜ ಜಿಗಳೂರ ಭೋದಿಸಿದರು.
ಪ್ರೋತ್ಸಾಹದಾಯಕವಾಗಿ ಲ್ಯಾಪಟಾಪ್ ವಿತರಣೆ
2021-22ನೇ ಸಾಲಿನಲ್ಲಿ ಸರಕಾರಿ ಪ್ರೌಡ ಶಾಲೆಗಳಲ್ಲಿ ಓದಿ ಎಸ್.ಎಸ್.ಎಲ್.ಸಿ ವಾರ್ಷಿಕ ಪರೋಕ್ಷೆಯಲ್ಲಿ ಅತಿ ಹೆವ್ವು ಅಂಕ ಪಡೆದ ತಾಲೂಕಿನ ಮೂರು ವಿಧ್ಯಾರ್ಥಿಗಳಾದ ಕುಮಾರಿ ಪವಿತ್ರಾ ಮಲ್ಲಪ್ಪ ಬಿರಾದಾರ, ಕುಮಾರ ಪ್ರಜ್ವಲ್ ಮಲ್ಲಪ್ಪ ಜಮಾದಾರ, ಹಾಗೂ ಕುಮಾರಿ ಮೆಹವಿಶ್ ಬಿಲ್ಕಿಶ್ ತಾಂಬೆ ಅವರಿಗೆ ಲ್ಯಾಪಟಾಪ್ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತ್ರಾಯ ಹರನಾಳ ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಗೌರವಿಸಿದರು.
ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಆರಕ್ಷಕ ವೃತ್ತ ನಿರೀಕ್ಷಕರಾದ ಡಿ.ಹುಲಿಗಪ್ಪ, ಪುರಸಭೆ ಮುಖ್ಯಾಧಿಕಾರಿ ರಾಜೇಶ್ವರಿ ತುಂಗಳ, ವೇದಿಕೆಮೇಲಿದ್ದರು.
Leave a Reply