ವರ್ಗಾವಣೆಗೊಂಡ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಗೆ ಹಣದ ಅವಶ್ಯಕತೆನಾ?
ವಿಜಯಪುರ : ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ವಿಜಯ ಮಹಾಂತೇಶ್ ಅವರ ಭಾವಚಿತ್ರ ಬಳಸಿ ವಿಜಯಪುರ ಜಿಲ್ಲಾಧಿಕಾರಿಗಳ ಖಾತೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಮುಖಾಂತರ ಹಣಹಾಕಿ ಎಂದು ಮನವಿಯ ಸಂದೇಶ ರವಾನೆ ಮಾಡಿರುವುದು ಕಂಡುಬಂದಿದೆ.
ಮೂವತ್ತು ಸಾವಿರ ರೂಪಾಯಿ ಹಾಕುವಂತೆ ಮನವಿ ಮಾಡಿದ ಆನ್ಲೈನ್ ಖದೀಮ ದೂರವಾಣಿ ಸಂಖ್ಯೆ ನೀಡಿ ಗೂಗಲ್ ಪೇ ಹಾಗೂ ಪೋನ್ ಪೇ ಇದೆ ಇದಕ್ಕೆ ಹಣ ಹಾಕಿ ಎಂದು ಹೇಳಿದ್ದಾನೆ ಈ ಮುಂದಿನ ದೂರವಾಣಿ ಸಂಖ್ಯೆ ನೀಡಿದ್ದಾನೆ 7705837732 ಆದರೆ ಮೊಬೈಲ್ ಸಂಖ್ಯೆಗು ಪ್ರಕರಣಕ್ಕು ಎಷ್ಟರ ಹೊಂದಾಣಿಕೆ ಇದೆ ಎಂದು ತನಿಖಾಧಿಕಾರಿಗಳು ತಿಳಿಸಬೇಕಾಗಿದೆ.
ಇಂತಹ ಹಲವಾರು ಘಟನೆಗಳು ಜನಸಾಮಾನ್ಯರ ಮದ್ಯ ನಡೆಯುತ್ತಿದ್ದವು ಇಂದು ಜಿಲ್ಲಾಧಿಕಾರಿಗಳಿಗೆ ಬಂದು ನಿಂತಿದೆ. ಈಗಾಗಲೇ ಸೈಬರ್ ಕ್ರೈಂ ನಲ್ಲಿ ದೂರುದಾಖಲು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ತಿಳಿಸಿದ್ದಾರೆ
ಇಂತಹ ಪ್ರಕರಣಗಳಿಂದ ಹಲವಾರು ಜನರು ವಂಚಿತರಾಗಿದ್ದು, ಇನ್ನಾದರು ಇದಕ್ಕೆ ಮುಕ್ತಿ ಸಿಗಲಿ ಇಲ್ಲದಿದ್ದರೆ ಸರಕಾರದ ಖಾತೆಯೇ ಹ್ಯಾಕ್ ಮಾಡುತ್ತಾರೆ ಎಂದು ಮಾತನಾಡುವುದು ಸಾಮಾನ್ಯವಾಗಿದೆ.
Leave a Reply