ವಿಜಯಪುರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಅವರು ಮಾತನಾಡಿ, ಭಾರತದ ಕೇರಳದಲ್ಲಿ ಜನಿಸಿದ ಬ್ರಹ್ಮಶ್ರೀ ನಾರಾಯಣಗುರು ಅವರು ಧೀಮಂತ ಸಮಾಜ ಸುಧಾಕರು, ಶ್ರೇಷ್ಟ ದಾರ್ಶನಿಕರಾಗಿದ್ದಾರೆ. ಕೆಳವರ್ಗದ, ಕೆಳವರ್ಣದ ಜನರ ಉದ್ದಾರಕ್ಕೆ ಅವರ ಕೊಡುಗೆ ಅಪಾರವಾದುದಾಗಿದೆ ಸರ್ವಧರ್ಮದ ಸಮಾವೇಶ ಮಾಡುವ ಮೂಲಕ ಮಾನವರೆಲ್ಲರೂ ಒಂದೇ ಎಂಬ ಭಾವನೆ ಅರಳಲು ಅವರು ಸಾಕಷ್ಟು ಶ್ರಮ ವಹಿಸಿದರು. ಮಾನವ ಜನಾಂಗದ ಏಳ್ಗೆಗೆ, ಸರ್ವಜನರ ಕಲ್ಯಾಣಕ್ಕೆ ನಾರಾಯಣಗುರು ಅವರು ಅಪರೂಪದ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಬ್ರಹಶ್ರೀ ನಾರಾಯಣಗುರು ಅವರ ಕುರಿತು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಾಹಿತಿಗಳಾದ ಡಾ.ಮಲ್ಲಿಕಾರ್ಜುನ ಮೇತ್ರಿ ಅವರು ಮಾತನಾಡಿ, ‘ಬ್ರಹಶ್ರೀ ನಾರಾಯಣಗುರು ಅವರು ಜನಪರ ಕಾಳಜಿ ಹೊಂದಿದವರಾಗಿದ್ದರು. ಸಾಮಾನ್ಯರಲ್ಲಿಯೇ ಅಸಾಮಾನ್ಯರಾಗಿದ್ದರು. ಅವರ ಸೇವಾವ್ಯಾಪ್ತಿ ತುಂಬಾ ವಿಶಾಲವಾದುದು. ಅವರ ಚಿಂತನೆಗಳು ಅಮೂಲ್ಯವಾಗಿರುವಂತವು. ಇತ್ತೀಚಿನ ಶತಮಾನದಲ್ಲಿ ಅವರಂತೆ ಇರುವವರೇ ಅಪರೂಪ. ನಾರಾಯಣಗುರು ಅವರು ಯೋಗದಲ್ಲಿ ಪತಂಜಲಿ ಗುರುಗಳಂತೆ, ಜ್ಞಾನದಲ್ಲಿ ಶಂಕರಾಚಾರ್ಯರAತೆ, ಅಹಿಂಸೆಯಲ್ಲಿ ಮಹಾತ್ಮ ಬುದ್ಧನಂತೆ, ಮಾನವೀಯತೆಯಲ್ಲಿ ಯೇಸುಕ್ರಿಸ್ತನಂತೆ ತೋರುತ್ತಾರೆ ನನಗೆ; ಅವರೊಬ್ಬ ದೇವರ ಅವತಾರಿಯಂತಿದ್ದರು’ ಎಂದು ಆ್ಯನಿಬೇಸೆಂಟ್ ಅವರು ಹೇಳುವುದರಲ್ಲಿಯೇ ನಾರಾಯಣಗುರು ಅವರ ವ್ಯಕ್ತಿತ್ವ ಎಂತಹುದು ಎಂಬುದರ ಮಹತ್ವ ಅಡಗಿದೆ ಎಂದು ತಿಳಿಸಿದರು.
ಸಮಾಜದಲ್ಲಿ ತುಂಬಿಕೊAಡಿರುವ ಅಸಮಾನತೆಯನ್ನು ಹೋಗಲಾಡಿಸಲು, ಮಾನವ ಜನಾಂಗವು ಒಂದೇ ಎಂಬುದನ್ನು ತಿಳಿಸಿ ದೀನ ದಲಿತರ ಪರವಾಗಿ ಅಮೂಲ್ಯ ಚಿಂತನೆಗಳನ್ನು, ಬೋಧನೆಯನ್ನು ನಾರಾಯಣಗುರು ಅವರು ಮಾಡಿದರು ಎಂದು ತಿಳಿಸಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ನ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಎ.ಬಿ.ಅಲ್ಲಾಪುರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಎಸ್.ಜಿ.ಲೋಣಿ, ಈಡಿಗ ಸಮಾಜದ ಮುಖಂಡರು ಹಾಗೂ ಜಿಲ್ಲಾಧ್ಯಕ್ಷರಾದ ಬಸವರಾಜ ಈಳಗೇರ, ಡಾ.ನಾಗೇಶ ಈಳಗೇರ, ಪ್ರಭಾಕರ ಈಳಗೇರ, ಸದಾಶಿವ ಈಳಗೇರ, ಹನುಮಂತಪ್ಪ ಈಳಗೇರ, ಮಲ್ಲಿಕಾರ್ಜುನ ಈಳಗೇರ, ಬಾಪು ಈಳಗೇರ, ಸಾಹಿತಿಗಳಾದ ವಿದ್ಯಾವಂತಿ ಅಂಕಲಗಿ, ವಿವಿಧ ಸಮುದಾಯಗಳ ಮುಖಂಡರಾದ ಗಿರೀಶ ಕುಲಕರ್ಣಿ, ಭೀಮರಾವ್ ಜಿಗಜಿಣಗಿ, ದೇವೇಂದ್ರ ಮೇರೆಕರ ಹಾಗೂ ಇತರರು ಇದ್ದರು. ಗಾಯಕಿ ದಾನಮ್ಮ ಕೋರಿ ಅವರು ನಾಡಗೀತೆ ಹೇಳಿ, ಬಳಿಕ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಬಿ.ನಾಗರಾಜ ಅವರು ವಂದಿಸಿದರು.

Leave a Reply