ಜನತೆಯ ಇಪ್ಪತ್ತು ವರ್ಷದ ಕನಸು ಇಂದು ನನಸಾಗಿದೆ : ಶಾಸಕ ಅಶೋಕ ಮನಗೂಳಿ

ಲೋಕೊಪಯೋಗಿ ಇಲಾಖೆಯ 2023-24ನೇ ಸಾಲಿನ ಅಪೆಂಡಿಕ್ಸ್ -ಇ ಯೋಜನೆ ಅಡಿಯಲ್ಲಿ ಎರಡು ಪ್ಯಾಕೇಜ್ ಗಳ ಭೂಮಿ ಪೂಜೆ ನೆರವೇರಿಸಿ ಶಾಸಕ ಅಶೋಕ ಮನಗೂಳಿ ಮಾತನಾಡಿದರು.

ಸಿಂದಗಿ : ಪಟ್ಟಣದ ಪರಿಮಿತಿಯ ಜೇವರ್ಗಿ – ಚಿಕ್ಕೋಡಿ ಜಿಲ್ಲಾ ಮುಖ್ಯ ರಸ್ತೆ 0 ಯಿಂದ 6.45 ಕಿ.ಮಿ ವರೆಗೆ ರಾಷ್ಟ್ರೀಯ ಹೆದ್ದಾರಿ 50 ವರ್ತುಲ ರಸ್ತೆಯಿಂದ ಡೋಹರ ಕಕ್ಕಯ್ಯ ವೃತ್ತದಿಂದ ಟಿಪ್ಪು ಸುಲ್ತಾನ್ ವೃತ್ತಕ್ಕೆ ಅಲಂಕಾರಿಕ ಬಿದಿ ದೀಪಗಳನ್ನು ಅಳವಡಿಸಲು 350 ಲಕ್ಷಗಳಲ್ಲಿ, ಹಾಗೂ ಸಿಂದಗಿ ಕೊಡಂಗಲ್ಲ್ ರಾಜ್ಯ ಹೆದ್ದಾರಿಯ ಬಸವೇಶ್ವರ ವೃತ್ತದಿಂದ ವಿವೇಕಾನಂದರ ವೃತ್ತ, ಕನಕದಾಸರ ವೃತ್ತದ ಮುಖಾಂತರ ರಾಷ್ಟ್ರೀಯ ಹೆದ್ದಾರಿ 50 ವರ್ತುಲ ರಸ್ತೆಗೆ 150 ಲಕ್ಷಗಳ ಕಾಮಗಾರಿ ಇಂದು ಚಾಲನೆ ಗೋಳ್ಳುತ್ತಿದ್ದು ಒಟ್ಟು 274 ನೂತನ ವಿದ್ಯುತ್ ಕಂಬಗಳು ನಿಲ್ಲಲಿವೆ. ಜನರು ಕೋಟ್ಟ ಅಧಿಕಾರವನ್ನು ಜನರಿಗಾಗಿ ಮುಡುಪಿಡ ಬೇಕು ಎನ್ನುವ ಕಾಯಕಲ್ಪದೊಂದಿಗೆ ಅಭಿವೃದ್ಧಿ ಮಾಡಲಾಗುತ್ತಿದೆ. ಪಟ್ಟಣದ ಜನರ ಇಪ್ಪತ್ತು ವರ್ಷದ ಕನಸು ನನಸಾಗಿದೆ.

ಅಷ್ಟೇ ಅಲ್ಲದೆ ಸಿಂದಗಿ ಜನತೆಗೆ ಕುಡಿಯುವ ನೀರಿನ ಬವಣೆ ನಿಗಿಸಿದ ನಮ್ಮ ತಂದೆಯವರು ಪ್ರಥಮ ಬಾರಿಗೆ ಸಚಿವರಾಗಿದ್ದಾಗ ಯರಗಲ್ಲ ಕಾಲುವೆಯಿಂದ ಕಳೆದ ಬಾರಿ ಸಚಿವರಾದಾಗ ಬಳಗಾನೂರ ಕಾಲುವೆಯಿಂದ ನೀರು ಸಿಂದಗಿ ನಗರಕ್ಕೆ ತರಲಾಗಿತ್ತು. ಇಂದು ಅವರು ನಡೆದು ಬಂದ ಹಾದಿಯಂತೆ 36 ಕೋಟಿ ವೆಚ್ಚದಲ್ಲಿ ಅಮೃತ 2ಯೋಜನೆ 24/7 ಕುಡಿಯುವ ನೀರಿನ ಯೋಜನೆ ಪಟ್ಟಣಕ್ಕೆ ಮಂಜೂರು ಮಾಡಿಸಲಾಗಿದೆ. 

ಕೆರೆಯ ಸುತ್ತಮುತ್ತಲಿನ ಉದ್ಯಾನವನದ ಅಭಿವೃದ್ಧಿಗೆ 3.50 ಕೋಟಿ, ಬಂದಾಳ ರಸ್ತೆಯಿಂದ ಸಂಗೋಳ್ಳಿ ರಾಯಣ್ಣ ವೃತ್ತದವರೆಗೆ ರಸ್ತೆ ಕಾಮಗಾರಿ, ಸಂಗಮಬಾರ ಎದುರಿಗೆ ಇರುವ ಸೊಂಪುರ ರಸ್ತೆಯಿಂದ ಹಳೆ ಚಾಂದಕವಠೆ ರಸ್ತೆ ಮಹಾತ್ಮ ಗಾಂಧಿಜಿ ವೃತ್ತದಿಂದ ಡಾಲ್ಫಿನ್ ದಾಬಾದವರೆಗೆ ರಸ್ತೆ ಅಗಲಿಕರಣದ ರಸ್ತೆಗಳ ಕಾಮಗಾರಿಗೆ ಅನುದಾನ ತರಲಾಗಿದೆ. ಹದಿನೇಳು ತಿಂಗಳ ಅವಧಿಯಲ್ಲಿ ಸಿಂದಗಿ ನಗರಕ್ಕೆ 80 ಕೋಟಿ ಅನುದಾನ ಮಂಜೂರಾಗಿದೆ ಎಂದು ಹೇಳಿದರು. 

ದಿವ್ಯಾ ಸಾನಿಧ್ಯ ವಹಿಸಿದ್ದ ಡಾ|| ಪ್ರಭುಸಾರಂಗ ದೇವ ಶಿವಾಚಾರ್ಯರು ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು ಅಂದು ಸಿಂದಗಿ ನಗರಕ್ಕೆ ಪ್ರವಚನಕ್ಕೆ ಬಂದಾಗ ದಿ.ಎಂ.ಸಿ.ಮನಗೂಳಿ ಅವರು ನಗರ ಅಭಿವೃದ್ಧಿಗೆ ಉತ್ತಮ ಸಲಹೆ ಕೇಳಿದರು ಅವರಿಗೆ ಉತ್ತರಿಸಿದ ಶ್ರೀಗಳು ಜನರಿಗೆ ಗುಣಮಟ್ಟದ ನೀರು, ರಸ್ತೆ, ವಿದ್ಯುತ್ ಪೂರೈಕೆಮಾಡಿ ನಗರ ತಾನ್ನಾಗಿಯೆ ಅಭಿವೃದ್ಧಿ ಹೊಂದುತ್ತದೆ ಎಂದಿದ್ದರು. ಅದರಂತೆ ಇಂದು ಶಾಸಕ ಅಶೋಕ ಮನಗೂಳಿ ಅವರು ಕಾರ್ಯಪ್ರವೃತ್ತರಾಗಿರುವುದು ಸಂತಸ ಅವರಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಾಗಲಿ ಎಂದು ಆಶೀರ್ವದಿಸಿದರು. 

ಆಸಂಗಿಹಾಳದ ಆರೂಢಮಠದ ಶಂಕರಾನಂದ ಮಹಾರಾಜರು, ಜಮಖಂಡಿಯ ಕೊಣ್ಣೂರ ಹೊರಗಿನ ಮಠದ ಡಾ|| ವಿಶ್ವ ಪ್ರಭುದೇವರು ಸಾನಿಧ್ಯ ವಹಿಸಿದ್ದರು.

ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಲೋಕೊಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಅರುಣಕುಮಾರ ವಡವಡಗಿ, ಪುರಸಭೆಯ ಮಾಜಿ ಅಧ್ಯಕ್ಷರಾದ ಶಾಂತವೀರ ಮನಗೂಳಿ, ಹಣಮಂತ ಸುಣಗಾರ, ಬಾಶಾಸಾಬ ತಾಂಬೋಳಿ ಸದಸ್ಯರಾದ ಬಸವರಾಜ ಯರನಾಳ , ಸಂದೀಪ ಚೌರ, ಸಿದ್ದು ಮಲ್ಲೇದ, ಸಾಯಬಣ್ಣ ಪುರದಾಳ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.