ಗೃಹಲಕ್ಷ್ಮೀ ಯೋಜನೆಗೆ ಚಾಲನೆ | ವೇದಿಕೆಯಲ್ಲಿ ಮಹಿಳೆಯರ ಕೊರತೆ

ಬುಧವಾರ ಸಿಂದಗಿಯ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಶಾಸಕ ಅಶೋಕ ಮನಗೂಳಿ ಉದ್ಘಾಟಿಸಿದರು.

ಸಿಂದಗಿ: ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತರುವ ಮುಖಾಂತರ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದು ಜನರ ವಿಶ್ವಾಸಕ್ಕೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಾತ್ರವಾಗಿದೆ  ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಸಿಂದಗಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡ ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ದಿನಸಿ, ತರಕಾರಿ, ಗೃಹ ಉಪಯೋಗಿ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿತ್ತಲೇ ಇದೆ ಇದನ್ನು ಗಮನಿಸಿದ ಕಾಂಗ್ರೆಸ್ ಸರ್ಕಾರ ಇಂದಿನಿಂದ ಮನೆಯ ಯಜಮಾನಿಗೆ 2000 ರೂ. ನೀಡುವ ಮೂಲಕ ಯೋಜನೆಯನ್ನು ಪ್ರಾರಂಭಗೊಳಿಸಿದೆ.

ಸಿಂದಗಿ ತಾಲೂಕಿನಲ್ಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರು 46,000 ಜನರಿದ್ದಾರೆ. ಅದರಲ್ಲಿ 36,000 ಗೃಹಲಕ್ಷ್ಮೀ ಯೋಜನೆಯನ್ನು ನೋಂದಾಯಿಸಿಕೊಂಡಿದ್ದಾರೆ. ಉಳಿದ 10ಸಾವಿರ ಪಲಾನುಭವಿಗಳು ನೋಂದಣ ಮಾಡಿಕೊಳ್ಳಬೇಕು ಎಂದರು. 5ವರ್ಷಗಳವರೆಗೆ ನಾವು ಪ್ರತಿ ತಿಂಗಳು ಎರಡು ಸಾವಿರ ನೀಡುತ್ತೇವೆ.

ಯುವನಿಧಿ ಕಾರ್ಯಕ್ರಮ ಮುಂದಿನ ಎರಡು ತಿಂಗಳಲ್ಲಿ ಜಾರಿಗೊಳಿಸಲಾಗುತ್ತದೆ. ನುಡಿದಂತೆ ನಡೆದು ಜನರ ವಿಶ್ವಾಸಕ್ಕೆ ನಾವು ಪಾತ್ರರಾಗಿದ್ದೆವೆ ಎಂದರು.

ಗೃಹಲಕ್ಷ್ಮೀ ಯೋಜನೆಯ ಸಿಂದಗಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದ ವೇದಿಕೆಯಲ್ಲಿ ಒಬ್ಬ ಮಹಿಳೆಯು ಇರಲಿಲ್ಲ ಸ್ತ್ರೀ  ಕೊರತೆ ಎದ್ದು ಕಾಣುತ್ತಿತ್ತು. ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಅಧಿಕೃತ ಸದಸ್ಯರು ಹೊರತುಪಡಿಸಿ ರಾಜಕೀಯ ಮುಖಂಡರ ಉಪಸ್ಥಿತಿಯಿಂದ ಸರ್ಕಾರದ ಕಾರ್ಯಕ್ರಮ ಕಾಂಗ್ರೆಸ್ ಕಾರ್ಯಕ್ರಮದಂತೆ ಕಂಡುಬಂತು.

ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಪ್ರದೀಪ ಹಿರೇಮಠ, ತಾಪಂ ಇಒ ಬಾಬು ರಾಠೋಡ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಬಸವರಾಜ ಜಿಗಳೂರ, ಪುರಸಭೆ ಸದಸ್ಯರಾದ ಹಣಮಂತ ಸುಣಗಾರ, ಭಾಷಾಸಾಬ ತಾಂಬೊಳ್ಳಿ, ಬಸವರಾಜ ಯರನಾಳ, ಸಂದೀಪ ಚೌರ, ಹಾಸಿಂಪೀರ ಆಳಂದ, ಬ್ಲಾಕ್ ಕಾಂಗ್ರೆಸ್ ಸಮಿತಿ ತಾಲೂಕಾಧ್ಯಕ್ಷ ಸುರೇಶ ಪೂಜಾರಿ, ಮಲ್ಲಣ್ಣ ಸಾಲಿ,  ರಾಜಶೇಖರ ಕೂಚಬಾಳ, ರಮೇಶ  ನಡುವಿನಕೇರಿ ಸೇರಿದಂತೆ ಮಹಿಳೆಯರು, ಪಕ್ಷದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು, ಕಾರ್ಯಕರ್ತರು ಇದ್ದರು.

ಕೊಕಟನೂರ: ಸಿಂದಗಿ ತಾಲೂಕಿ ಕೊಕಟನೂರ ಗ್ರಾಮದಲ್ಲಿ ಹಮ್ಮಿಕೊಂಡ ‘ಸ್ತ್ರೀ ಸ್ವಾವಲಂಬನೆಯತ್ತ ಒಂದು ದಿಟ್ಟ ಹೆಜ್ಜೆ’ ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನ ಕಾರ್ಯಕ್ರಮವನ್ನು ಶಾಸಕ ಅಶೋಕ ಮನಗೂಳಿ ಸಾಂಕೇತಿಕವಾಗಿ ಮಹಿಳೆಯರಿಗೆ ಚೆಕ್ಕ್ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗುಬ್ಬೇವಾಡ: ತಾಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಂಡ ಗೃಹಲಕ್ಷಿö್ಮ ಯೋಜನೆಗೆ ಗ್ರಾಪಂ ಅಧ್ಯಕ್ಷೆ ಸಿತಮ್ಮ ಕಟ್ಟಿಮನಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಗ್ರಾಪಂನ ಸದಸ್ಯರು, ಅಧಿಕಾರಿಗಳು, ಮಹಿಳೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 

ಕ್ಷೇತ್ರದ ಎಲ್ಲ ಗ್ರಾಮ ಪಂಚಾಯತಗಳಲ್ಲಿ  ಕಾರ್ಯಕ್ರಮ ಜರುಗಿದವು.