ಸಿಂದಗಿ : ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಸುವಂತೆ ದಿನಾಂಕ ನಿಗದಿಯಾಗಿತ್ತು. ಚುನಾವಣಾಧಿಕಾರಿಯಾದ ತಾಲೂಕಾ ದಂಡಾಧಿಕಾರಿ ನಿಂಗಪ್ಪ ಬಿರಾದಾರ ಚುನಾವಣೆ ಪ್ರಕ್ರೀಯೆ ನಡೆಸಿದರು.
ಅಧ್ಯಕ್ಷ ಚುನಾವಣೆಗಾಗಿ ವಾರ್ಡ ನಂ 6ರ ಪುರಸಭೆ ಸದಸ್ಯ ಹಣಮಂತ ಸುಣಗಾರ ಒಬ್ಬರೆ ಎರಡು ನಾಮಪತ್ರಗಳನ್ನು ಸಲ್ಲಿಸಿದರು. ಸೋಚಕರಾಗಿ ವಾರ್ಡ ನಂ2 ರ ಪುರಸಭೆ ಸದಸ್ಯೆ ಉಮಾದೇವಿ ಶರಣಪ್ಪ ಸುಲ್ಪಿ ಆದರೆ ಅನುಮೋದಕರಾಗಿ ವಾರ್ಡ ನಂ4 ರ ಪುರಸಭೆ ಸದಸ್ಯೆ ಕಲಾವತಿ ಅನೀಲ ಕಡಕೋಳ ಆಗಿದ್ದರು.
ಶಾಸಕ ರಮೇಶ ಭೂಸನೂರ ಹಾಗೂ 22 ಪುರಸಭೆ ಸದಸ್ಯರು ಒಳಗೊಂಡಂತೆ ಸರ್ವಾನುಮತದಿಂದ ಅವಿರೋಧವಾಗಿ ಹಣಮಂತ ಸುಣಗಾರ ನೂತನ ಪುರಸಭೆ ಅಧ್ಯಕ್ಷರಾಗಿದ್ದಾರೆ ಎಂದು ಸಭೆಯಲ್ಲಿ ಚುನಾವಣಾಧಿಕಾರಿ ನಿಂಗಪ್ಪ ಬಿರಾದಾರ ಘೋಷಿಸಿದರು. ವಾರ್ಡ ನಂ 11 ರ ಪುರಸಭೆ ಸದಸ್ಯೆ ವಿಜಯಲಕ್ಷ್ಮೀ ನಾಗೂರ ಸಭೆಗೆ ಗೈರಾಗಿದ್ದರು.
ಎಲ್ಲ ಪಕ್ಷಗಳು ಪಕ್ಷಾತೀತವಾಗಿ ಒಮ್ಮತದಿಂದ ಹಣಮಂತ ಸುಣಗಾರ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲು ಇಚ್ಚಿಸಿದ್ದಾರೆ. ಆದರಿಂದ ನಗರದ ಹಿತದೃಷ್ಠಿ ಇಟ್ಟುಕೊಂಡು ಒಬ್ಬ ವ್ಯಕ್ತಿಯಾಗಿ ನಗರದ ಶಕ್ತಿಯಾಗಿ ಅವರಿಗೆ ಸಿಕ್ಕ ಅಲ್ಪ ಕಾಲಾ ಅವಧಿಯಲ್ಲಿ ಅವರು ಉತ್ತಮ ಕೆಲಸ ನಿರ್ವಹಿಸಲೆಂದು ಶಾಸಕ ರಮೇಶ ಭೂಸನೂರ ಶುಭಕೋರಿದರು.
ನಂತರ ಮಾತನಾಡಿದ ನೂತನ ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ ನನ್ನ ಮೇಲೆ ವಿಶ್ವಸವಿಟ್ಟು ನನ್ನಗೆ ಬೆಂಬಲಿಸಿದ ಸದಸ್ಯರು ಹಾಗೂ ಸ್ಥಳಿಯರ ಸಹಕಾರ ಅಗತ್ಯವಾಗಿದೆ, ನನ್ನಗೆ ಸಿಕ್ಕಿರುವ ಸ್ವಲ್ಪ ಸಮಯದಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕಿದೆ ಶಾಸಕರ ಆಶೀರ್ವಾದ ನಮ್ಮ ಮೇಲ್ಲಿರಲಿ ಸಹಕರಿಸಿದ ಎಲ್ಲರಿಗು ಅಭಿನಂದನೆಗಳು ತಿಳಿಸಿದರು. ನಿಕಟಪೂರ್ವ ಅಧ್ಯಕ್ಷ ರಾದ ಶಾಂತವೀರ ಮನಗೂಳಿ ಹಾಗೂ ಶಾಂತುಗೌಡ ಬಿರಾದಾರ ಚುನಾವಣಾಧಿಕಾರಿಗಳ ಎಲ್ಲ ಪ್ರಕ್ರೀಯೆ ಮುಗಿಯುತ್ತಿದಂತೆ ಸಭಾ ಭವನದಿಂದ ಹೊರನಡೆದರು. ಶಾಸಕರು ಹಾಗೂ ಸದಸ್ಯರು ಹೊರಬರುತ್ತಿದಂತೆ ಪುರಸಭೆ ಕಾರ್ಯಾಲಯದ ಎದುರುಗಡೆ ಜಮಾಯಿಸಿದ ಕಾಂಗ್ರೇಸ್ ಹಾಗೂ ಬಿಜೆಪಿ ಕಾರ್ಯಕ್ರತರು ಬಣ್ಣ ಎರಚಿ ಸಂಭ್ರಮಿಸಿದರು.
Leave a Reply