ಸಿಂದಗಿ ಪಟ್ಟಣದ ಶ್ರೀ ಪದ್ಮರಾಜ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪಪೂ ಕಾಲೇಜಿನಲ್ಲಿ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮ ಜರುಗಿತು.ಸಿಂದಗಿ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣದ ಮುಖ್ಯ ಆಶಯ. ಇಂತಹ ಆಶಯ ಈಡೇರಿಸುವಲ್ಲಿ ಪಠ್ಯಪೂರಕ ಚಟುವಟಿಕೆಗಳೆರಡು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿಯೇ ಶೈಕ್ಷಣಿಕವಾಗಿ ಪಠ್ಯಪೂರಕವು ಅವಿಭಾಜ್ಯ ಅಂಗವಾಗಿ ಇರಿಸಲಾಗಿದೆ ಎಂದು ಆರ್. ಡಿ ಪಾಟೀಲ್ ಪಪೂ ಕಾಲೇಜಿನ ಪ್ರಚಾರ್ಯ ವಿ. ವಿ. ಜಿರಲೇ ಹೇಳಿದರು.
ನಗರದ ಶ್ರೀ ಪದ್ಮರಾಜ ಮಹಿಳಾ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬದುಕಿನ ಮೌಲ್ಯ ಅರಿಯುವಲ್ಲಿ, ಬೌದ್ಧಿಕ ಮತ್ತು ಕಲಾತ್ಮಕ ವ್ಯಕ್ತಿತ್ವ ಬೆಳೆಸುವಲ್ಲಿ, ಸಹಕಾರ, ಸಮಾನತೆ, ಸಹಬಾಳ್ವೆ ಪಸರಿಸುವಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಾರಣವಾಗಿವೆ. ಪಠ್ಯಪೂರಕ ಚಟುವಟಿಕೆ ಎಂದರೆ ಕೇವಲ ಪಠ್ಯವಾಗಿರದೆ ಪಠ್ಯೇತರ ಕಾರ್ಯಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೋಂಡರೆ ಮಹಾವಿದ್ಯಾಲಯದ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಪರಮ ಪೂಜ್ಯ ಶ್ರೀ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ವಿದ್ಯಾರ್ಥಿಗಳು ಎಂದೊಡನೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡುವುದು ಶಿಸ್ತು ಎಂಬ ಕಲ್ಪನೆ. ವಿದ್ಯಾರ್ಥಿ ಎಂಬ ಪದಕ್ಕೆ ಇನ್ನೊಂದು ಅರ್ಥವೇ ಶಿಸ್ತು. ಆದ್ದರಿಂದಲೇ ಮನೆಯಲ್ಲಿಯೂ ಸಹ ಮಕ್ಕಳಿಗೆ ತಮ್ಮ ಹಿರಿಯರಿಂದ ಶಿಸ್ತನ್ನು ಮೈಗೂಡಿಸಿಕೊಳ್ಳುವ ಕುರಿತು ನೀತಿ-ಬೋಧನೆ ಸಾಗುತ್ತಲೇ ಇರುತ್ತದೆ. ಯಾವ ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ, ಆಟದಲ್ಲಿ, ಶಾಲಾ ಕಾಲೇಜಿನ ಚಟುವಟಿಕೆಗಳಲ್ಲಿ, ಮನೆಯ ಕೆಲಸ-ಕಾರ್ಯಗಳಲ್ಲಿ ಆಸಕ್ತಿಯ ಜೊತೆಗೆ ಶಿಸ್ತನ್ನು ಅಳವಡಿಸಿಕೊಂಡಿರುತ್ತಾರೋ ಅಂತಹ ವಿದ್ಯಾರ್ಥಿಗಳು ತಮ್ಮ ಜೀವನದ ಪ್ರಮುಖ ಘಟ್ಟವನ್ನು ತಲುಪಿದಂತೆಯೇ ಸರಿ ಎಂದು ಆಶೀರ್ವದಿಸಿದರು.
ಶ್ರೀಗಳ ಆಶೀರ್ವಚನದ ಸಂಪೂರ್ಣ ವೀಡಿಯೋಗಾಗಿ https://fb.watch/fhOIwbSOmd/
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಎಂ ಎಸ್ ಹೈಯಾಳಕರ ಮಾತನಾಡಿ, ವಿದ್ಯಾರ್ಥಿಗಳ ಒಕ್ಕೂಟಕ್ಕೆ ಆಯ್ಕೆಯಾದ ಪದಾಧಿಕಾರಿಗಳು ತಮ್ಮ ಕಾರ್ಯಗಳನ್ನು ಕಾಯಾ ವಾಚಾ ಮನಸಾ ಪೂರ್ವಕವಾಗಿ ಮಾಡಬೇಕಾಗುತ್ತದೆ. ಪ್ರತಿಯೊಂದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಬಹಳ ಮುಖ್ಯವಾಗಿರುತ್ತದೆ. ಅಕ್ಕ ತಂಗಿಯರ ಧ್ವನಿ ರೊಕ್ಕ ಬಾರಿಸಿದಂಗ ಎನ್ನುವ ನಾಣ್ಮುಡಿಯಂತೆ ಎಲ್ಲಿ ಕೆಲಸವಿರುತ್ತದೆಯೋ ಅಲ್ಲಿ ಕಾರ್ಯ ಮಾಡಿ ಕಾಯಕವೇ ಕೈಲಾಸ ಎಂಬ ಮನೋಭಾವವನ್ನು ನಮ್ಮಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿಗೆ ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹಾಗೂ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಕಾರ್ಯಧ್ಯಕ್ಷ ರೇವಣಸಿದ್ಧ ಹಾಲಕೇರಿ, ಪದವಿ ಕಾಲೇಜಿನ ಪ್ರಚಾರ್ಯ ಎಸ್ ಎಂ ಪೂಜಾರಿ, ಹಿರಿಯ ಸಾಹಿತಿ ಚನ್ನಪ್ಪ ಕಟ್ಟಿ, ಉಪನ್ಯಾಸಕರಾದ ಯು.ಸಿ ಪೂಜೇರಿ, ಜಿ.ಎ. ನಂದಿಮಠ, ಗಿರೀಶ ಕುಲಕರ್ಣಿ, ಡಾ. ಬಾಹುಬಲಿ ವನಕುದರಿ, ಸಾಯಬಣ್ಣ ಸಜ್ಜನ, ಅನಿಲಕುಮಾರ ರಜಪೂತ, ವರ್ಷಾ ಪಾಟೀಲ್, ಆಶಿಫ್ ಕೋಕಣಿ, ವಿಜಯಲಕ್ಷ್ಮಿ ಭಜಂತ್ರಿ, ಪ್ರಭಾವತಿ ಮಾಲಿಪಾಟೀಲ್, ಶೃತಿ ಹೂಗಾರ್, ಎಂ ಕೆ ಬಿರಾದಾರ್, ಸರಸ್ವತಿ ಪಟೇದ, ಮಂಗಳಾ ಈಳಗೇರ, ಲಕ್ಷ್ಮೀ ಗೋಗಿ, ಹೇಮಾ ಕಾಸರ, ಸತೀಶ ಕಕ್ಕಸಗೇರಿ, ಡಿ ಎಂ ಪಾಟೀಲ್, ಮಮತಾ ಹರನಾಳ, ಲಕ್ಷ್ಮೀ ಭಜಂತ್ರಿ, ಶಿವಶಂಕರ ಕುಂಬಾರ ಮತ್ತು ಮುದ್ದು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನೀಲಾಂಬರಿ ಬಬಲೇಶ್ವರ ನಿರೂಪಿಸಿದರು, ಉಪನ್ಯಾಸಕಿ ಹೇಮಾ ಹಿರೇಮಠ ಸ್ವಾಗತಿಸಿದರು. ಸರಸ್ವತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಂಗೀತಾ ಪೂಜಾರಿ ವಂದಿಸಿದರು.
Leave a Reply