ಪೊಲೀಸ ಠಾಣೆಯ ಪಿ.ಎಸ್.ಐ ಭೀಮಪ್ಪ ರಬಕವಿ ವಾಹನ ಸವಾರರಿಗೆ ಕಟ್ಟು ನಿಟ್ಟಿನ ಕ್ರಮಕ್ಕೆ ವಾರದಗಡವು.
ಸಿಂದಗಿ : ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಾಲೂಕುಗಳಲ್ಲಿ ಸಿಂದಗಿ ಪ್ರಥಮವಾಗಿ ನಿಲ್ಲುತ್ತದೆ. ಸಿಂದಗಿಗೆ ಶೀಕ್ಷಣ ಕಾಶಿ ಕರ್ನಾಟಕದ ದ್ವೀತಿಯ ಧಾರವಾಡ ವೆಂದು ಬಣ್ಣಿಸಲ್ಪಡುತ್ತದೆ. ಹೇಚ್ಚಾಗಿ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಶೀಕ್ಷಣಕ್ಕಾಗಿ ವಲಸೆ ಬಂದಿರುವವರು ಸಂಖ್ಯೆಯು ಹೇಚ್ಚು. ಸಿಂದಗಿ ಪಟ್ಟಣದಲ್ಲಿಯೆ ಅಂದಾಜು 60 ಸಾವಿರ ಜನಸಂಖ್ಯೆ ವಾಸಮಾಡುತ್ತಿದ್ದಾರೆ ಎನ್ನಲಾಗುತ್ತದೆ.
ಜನದಟ್ಟಣೆಯ ಪ್ರದೇಶದಲ್ಲಿ ಪೊಲೀಸ ಠಾಣೆಯ ಪಿ.ಎಸ್.ಐ ಭೀಮಪ್ಪ ರಬಕವಿ ವಾಹನ ಸವಾರರಿಗೆ ಕಾನೂನಿನ ರುಚಿ ತೋರಿಸಲು ಕಟ್ಟು ನೀಟ್ಟಿನ ಕ್ರಮಕ್ಕೆ ಮುಂದಾಗಿದ್ದು ಸವಾರರ ಯಾವ ತಪ್ಪುಗಳಿಗೆ ಎಷ್ಟೇ ಎಷ್ಟು ದಂಢ ವೀಧಿಸಲಾಗುತ್ತದೆ ಎಂಬ ನಾಮಪಲಕಗಳು ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಗೋಚರಿಸುತ್ತಿವೆ.
ವೇಗದೂತ ಜನದನಿಗೆ ಪ್ರತಿಕ್ರೀಯೆ ಹಂಚಿಕೊಂಡ ಅವರು ಮುನ್ನೇಚ್ಚರಿಕಾ ಕ್ರಮವಾಗಿ ಮಾಹಿತಿ ಪಲಕಗಳನ್ನು ಹಾಕಲಾಗಿದೆ. ಹೆಲ್ಮೇಟ್ ತೆಗೆದುಕೋಳ್ಳಲು ಹಾಗೂ ಇನ್ನೀತರ ಪರವಾನಗಿಗಳಿಗಾಗಿ ವಾರದ ಗಡವು ನೀಡಲಾಗಿದೆ. ಸರಿ ಪಡಿಸಿಕೊಂಡರೆ ಉತ್ತಮ ಇಲ್ಲದಿದ್ದರೆ ಪ್ರತಿ ಬಾರಿ ಸಿಕ್ಕಾಗ ತಪ್ಪಿನ ಅನೂಗುಣವಾಗಿ ಪೈನ್ ಗ್ಯಾರಂಟಿ ಎಂದು ತಿಳಿಸಿದರು. ಈ ಬದಲಾವಣೆ ಎಷ್ಟರ ಮಟ್ಟಿಗೆ ಜಾರಿಯಾಗುತ್ತೆ ಸಿಂದಗಿಯ ಸವಾರರು ಯಾವ ರೀತಿ ತೆಗೆದುಕೋಳ್ಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.
Leave a Reply