ಸಿಂದಗಿ: ಸಿಂದಗಿ ನಗರದ ಬಸ್ ನಿಲ್ದಾಣ ಪಕ್ಕದಲ್ಲಿರುವ ಜಿ.ಪಿ.ಪೋರವಾಲ್ ಪೆಟ್ರೋಲ್ ಪಂಪ್ ಗೆ ನುಗ್ಗಿದ ಸರ್ಕಾರಿ ಬಸ್ ಕಂಡಕ್ಟರ್ ಎಚ್ಚರಿಕೆ ಯಿಂದ ದೊಡ್ಡ ಅನಾಹುತ ತಪ್ಪಿದೆ.
ಅಫಜಲಪುರ ಘಟಕದ ಬಸ್ ಕಲರ್ಬುಗಿ ಯಿಂದ ವಿಜಯಪುರಕ್ಕೆ ತೆರಳುವಾಗ ರಾತ್ರಿಯಾದ ಕಾರಣದಿಂದ ಬಸ್ ನ ಮುಖ್ಯ ಲೈಟ್ ಸಮಸ್ಯೆಯಿಂದ ವಾಹನದಲ್ಲಿರುವ ಎಲ್ಲ ಪ್ರಯಾಣಿಕರನ್ನು ಬೇರೆ ಬಸ್ಸಿಗೆ ಶೀಪ್ಟ್ ಮಾಡಿ ಸಿಂದಗಿ ಬಸ್ ಡಿಪೋ ಗೆ ರಿಪೇರಿಗೆಂದು ತೆರಳುವಾಗ ಘಟನೆ ನಡೆದಿದೆ ಎಂದು ಕಂಡೆಕ್ಟರ್ ತಿಳಿಸಿದ್ದಾರೆ.
ರಸ್ತೆ ಬಿಟ್ಟು ಪಕ್ಕದಲ್ಲಿರುವ ಪೆಟ್ರೋಲ್ ಬಂಕ್ ಕಡೆ ವಾಹನ ಹೋಗುತ್ತಿರುವುದು ಗಮನಿಸಿದ ಕಂಡೆಕ್ಟರ್ ಶರಣು ಟಾಕ್ಕಳಿ ಹೋಗಿ ವಾಹನ ನಿಲ್ಲಿಸಿದ ಕಾರಣ ಬಾರಿ ಅನಾಹುತ ತಪ್ಪಿದೆ.
ಅಲ್ಲಿ ನೋಡಿದಾಗ ಚಾಲಕ ಮುರಿಗೆಪ್ಪ ಸಿದ್ದಪ್ಪ ಅಥಣಿ ಬಿದ್ದಿರುವುದು ನೋಡಿ ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲಿ ಮೃತ್ತಪಟ್ಟಿದು ತೀವ್ರ ಹೃದಯಾಘಾತವಾಗಿದೆ ಎನ್ನಲಾಗಿದೆ. ವಿಷಯ ತಿಳಿದ ಅಫಜಲಪುರ ಘಟಕದ ಡಿಪೋ ಸಿಬ್ಬಂದಿ ಸಚಿನ್ ಜೋಗುರ ಸಂಚಾರ ನಿರೀಕ್ಷಕರು ಇವರು ಹಾಗೂ ಸಿಬ್ಬಂದಿ ವರ್ಗ ಸ್ಥಳಕ್ಕೆ ಆಗಮಿಸಿದ್ದಾರೆ.
ಪೆಟ್ರೋಲ್ ಬಂಕ್ ನಲ್ಲಿ ಸುಮಾರು ಜನರಿದ್ದರು ಅತ್ಯಂತ ಜನಬಿಡು ಇರುವ ಪ್ರದೇಶವಾಗಿದ್ದು ಕೂದಲೆಳೇಯಲ್ಲಿ ಬಾರಿ ಅನಾಹುತ ತಪ್ಪಿದೆ.
Leave a Reply