ಎತ್ತಿನಬಂಡಿಯಲ್ಲಿ ಮತದಾನದ ಜಾಗೃತಿ ಜಾತಾ ಮಾಡಿದ ಅಧಿಕಾರಿಗಳು


ಸಿಂದಗಿ : ಇಂದು ಸಿಂದಗಿ ನಗರದಲ್ಲಿ ತಾಲೂಕು ಆಡಳಿತ, ತಾಲೂಕು ಸ್ವೀಪ್ ಸಮಿತಿ, ತಾಲೂಕು ಪಂಚಾಯತ್ ಸಿಂದಗಿ ಮತ್ತು ಕೃಷಿ ಇಲಾಖೆಯ ಸಹಯೋಗದೊಂದಿಗೆ  10 ಮೇ  2023 ರಂದು ನಡೆಯುವ ವಿಧಾನ ಸಭೆ ಚುನಾವಣೆ ನಿಮಿತ್ತವಾಗಿ ಜನರಲ್ಲಿ ಮತದಾನ ಜಾಗೃತಿ ಮೂಡಿಸಲು ಎತ್ತಿನ ಬಂಡಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ತಹಸೀಲ್ದಾರ್ ಕಚೇರಿಯಿಂದ ಪ್ರಾರಂಭವಾಗಿ ಬಸವೇಶ್ವರ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಡಾ. ಅಂಬೇಡ್ಕರ್ ವೃತ್ತ ಮತ್ತು ಮಹಾತ್ಮ ಗಾಂಧಿ ವೃತ್ತದವರೆಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಮಯದಲ್ಲಿ ಮಾತನಾಡಿದ ಸ್ವೀಪ್ ಸಮಿತಿ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಆದ ಶ್ರೀ ಬಾಬು ರಾಠೋಡ ರವರು ಮತದಾನ ಹಕ್ಕು ನಮ್ಮೆಲ್ಲರ ಹಕ್ಕು ಆದ್ದರಿಂದ ಎಲ್ಲರೂ ತಪ್ಪದೇ ಜವಾಬ್ದಾರಿಯಿಂದ ಮತ ಚಲಾಯಿಸಿ ಮತ್ತು ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಿಸಿ ಎಂದು ಜಾಥಾ ಉದ್ದೇಶಿಸಿ ಮಾತನಾಡಿದರು.

ಈ ಸಮಯದಲ್ಲಿ ಆಲಮೇಲ್ ತಹಸೀಲ್ದಾರ್ ಶ್ರೀ ಸುರೇಶ ಚಾವಲರ, ತಾಲೂಕು ಜಂಟಿ ನಿರ್ದೇಶಕರು ಶ್ರೀ ಪ್ರಕಾಶ್ ಸಿಂಗೇಗೋಳ, ಸಹಾಯಕ ನಿರ್ದೇಶಕರು ಶ್ರೀ ನಿತ್ಯಾನಂದ ಯಲಗೋಡ ತಾಲ್ಲೂಕಿನ ಎಲ್ಲ PDO ರವರು, ಸೆಕ್ರೆಟರಿ ರವರು ಮತ್ತು ಸಿಬ್ಬಂದಿಗಳು ಐ ಇ ಸಿ ಸಂಯೋಜಕ ಭೀಮರಾಯ ಚೌಧರಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Comments

Leave a Reply

Your email address will not be published. Required fields are marked *