ಎಂ.ಎಂ.ಕಲಬುರ್ಗಿ ಪೌಂಡೇಶನ್ ವತಿಯಿದ ಜ.7ರಂದು ವಿಚಾರ ಸಂಕಿರಣ, ವಚನ ಗಾಯನ ಮತ್ತು ‘ವಚನ ಸಿರಿ’ ಹಾಗೂ ‘ಸಾಹಿತ್ಯ ಸಿರಿ’ ಪ್ರಶಸ್ತಿ ಪ್ರದಾನ

ಸಿಂದಗಿ: ಜ.7 ರಂದು ಭಾನುವಾರ ಬೆಳಿಗ್ಗೆ 9.40ಕ್ಕೆ ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಾನಪದ ವಿದ್ವಾಂಸ ಹಾಗೂ ಫೌಂಡೇಶನ್ ಸಲಹಾ ಸಮಿತಿ ಸದಸ್ಯ ಡಾ.ಎಂ.ಎಂ. ಪಡಶೆಟ್ಟಿ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಖ್ಯಾತ ಸಂಶೋಧಕ ಡಾ.ಎಂ.ಎಂ. ಕಲುಬರ್ಗಿ ಕುಟುಂಬಸ್ಥರು, ಶಿಷ್ಯ ಬಳಗದವರು ಕೂಡಿಕೊಂಡು ಸಮಾಜೋಧಾರ್ಮಿಕ ಸೇವೆ ಸಲ್ಲಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ ಎಂದರು.
ಅಂದು ಉದ್ಘಾಟನೆ, ಡಾ.ಎಂ.ಎಂ ಕಲಬುರ್ಗಿಯವರ ವಿಚಾರ ಸಂಕಿರಣ, ವಚನ ಗಾಯನ, ಮಹಿಳಾ ಕವಿಗೋಷ್ಠಿ, ಪ್ರಶ್ತಿ ಪ್ರಧಾನ ಹಾಗೂ ಸಮಾರೋಪ ನಡೆಯಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಬೆಳಿಗ್ಗೆ ಶಾಸಕ ರಮೇಶ ಭೂಸನೂರ ಉದ್ಘಾಟಿಸಲಿದ್ದಾರೆ. ಡಾ.ಎಂ.ಎಂ.ಪಡಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ, ಧಾರವಾಡದ ಅಂತರರಾಷ್ಟ್ರೀಯ ಹಿಂದೂಸ್ತಾನಿ ಗಾಯಕ ಡಾ.ಮೃಂತ್ಯುಜಯ ಶೆಟ್ಟರ, ನ್ಯೂಜಿಲೆಂಡ್ ಏಷ್ಯಾ ಪೆಸಿಫಿಕ್ ಬಸವ ಸಮಿತಿ ಚೇರ್ಮನ್ ಡಾ.ಲಿಂಗಣ್ಣ ಕಲಬುರ್ಗಿ ಅಧ್ಯಕ್ಷತೆ ವಹಿಸಿಲಿದ್ದಾರೆ.

ಬೆಳಿಗ್ಗೆ 10.30ಕ್ಕೆ ಗೋಷ್ಠಿ-1 ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ವಿಚಾರ ಸಂಕಿರಣದಲ್ಲಿ ನನ್ನ ಗುರು ವಿಷಯದ ಕುರಿತು ಧಾರವಾಡದ ಖ್ಯಾತ ಸಂಶೋಧಕಿ ಡಾ. ವೀಣಾ ಹೂಗಾರ, ಇಂಡಿಯ ಖ್ಯಾತ ವಿದ್ವಾಂಸ ಡಾ. ಎಸ್. ಕೆ. ಕೊಪ್ಪ ಶಾಸನ ಅಧ್ಯಯನಗಳ ಕುರಿತು ಮಾತನಾಡಲಿದ್ದಾರೆ. ವಿಜಯಪುರ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಯಾಗಿ ಸಿಂದಗಿ ಪುರಸಭೆಯ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ವಹಿಸಲಿದ್ದಾರೆ.

ಮದ್ಯಾಹ್ನ 1ಗಂಟೆಗೆ ವಚನ ಗಾಯನ ಗೋಷ್ಠಿಯನ್ನು ಡಾ. ಮೃತ್ಯುಂಜಯ ಶೆಟ್ಟರ , ನಯನಾ ಗಿರಿಗೌಡರ ವಿದ್ಯಾ ಮಗದುಮ್ ನಡೆಸಿ ಕೊಡಲಿದ್ದಾರೆ.
ಮದ್ಯಾಹ್ನ 2ಕ್ಕೆ ಮಹಿಳಾ ಕವಿಗೋಷ್ಠಿಯನ್ನು ಬೆಳಗಾವಿಯ ವಿಶ್ರಾಂತ ಉಪನ್ಯಾಸಕಿ ಪ್ರೇಮಕ್ಕ ಅಣ್ಣಿಗೇರಿ ಉದ್ಘಾಟಿಸಲಿದ್ದಾರೆ. ಬಾದಾಮಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಶಾರದಾ ಪಾಟೀಲ ಅಧ್ಯಕ್ಷತೆ ಹಾಗೂ ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ ಉಪಸ್ಥಿತಿ ಇರಲಿದ್ದಾರೆ. ಮಹಿಳಾ ಕವಿಯತ್ರಿಯರು ಕವನ ವಾಚನ ಮಾಡಲಿದ್ದಾರೆ.

ಮದ್ಯಾಹ್ನ 3ಗಂಟೆಗೆ ಪ್ರಶಸ್ತಿ ಪ್ರಧಾನ ಹಾಗೂ ಸಮಾರೋಪ ಸಮಾರಂಭದಲ್ಲಿ ಧಾರವಾಡದ ಉಮಾದೇವಿ ಕಲಬುರ್ಗಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ವಚನ ಸಿರಿ ಪ್ರಶಸ್ತಿಯನ್ನು ಸಾಂಗ್ಲಿ ಜಿಲ್ಲಾ ಪರಿಷತ್ ಮಾಜಿ ಸಭಾಪತಿ ಸುಜಾತಾ ಪಾಟೀಲ ಅವರಿಗೆ ಹಾಗೂ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಪುಣೆಯ ವಚನ ಅಧ್ಯಯನ ವೇದಿಕೆಯ ಅಧ್ಯಕ್ಷ ಡಾ.ಶಶಿಕಾಂತ ಪಟ್ಟನ ಅವರಿಗೆ ನೀಡಿ ಗೌರವಿಸಲಾಗುವುದು. ಡಾ.ಚನ್ನಪ್ಪ ಕಟ್ಟಿ ಅಭಿನಂದನಾ ನುಡಿ ಆಡಲಿದ್ದಾರೆ. ಮುಖ್ಯ ಅತಿಥಿಗಳಾಗಿ, ಸಿಂದಗಿ ವಿಶ್ರಾಂತ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಿವಪ್ಪಣ್ಣ ಗವಸಾನಿ, ಸಿಂದಗಿ, ಗಣ್ಯ ವ್ಯಾಪಾರಸ್ಥ ಅಶೋಕ ವಾರದ, ರಾಜಕೀಯ ಧುರೀಣರು, ಅಶೋಕ ಮನಗೂಳಿ ಹಾಗೂ ಅಶೋಕ ಅಲ್ಲಾಪುರ ವಹಿಸಿಕೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಸಿಂದಗಿಯ ವಿಶ್ರಾಂತ ಪ್ರಾಚಾಯ್ ಬಿ.ಎಂ.ಬಿರಾದಾರ ವಹಿಸುವರು. ಎಂದು ಕಲಬುರ್ಗಿ ಫೌಂಡೇಶನ್ ಸದಸ್ಯ ಡಾ.ಎಂ.ಎA ಪಡಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕತೆಗಾರ ಚನ್ನಪ್ಪ ಕಟ್ಟಿ, ಲಿಂಗಣ್ಣ ಕಲಬುರ್ಗಿ, ಶಿವಾನಂದ ಕಲಬುರ್ಗಿ, ಆರ್.ಆರ್.ಪಾಟೀಲ, ಕಾನಿಪ ಅಧ್ಯಕ್ಷ ಆನಂದ ಶಾಬಾದಿ ಸೇರಿದಂತೆ ಅನೇಕರು ಇದ್ದರು.