ಇಸ್ಪೀಟ್ ಕ್ಲಬ್ ವ್ಯವಹಾರಕ್ಕಾಗಿ ರೌಡಿ ಶೀಟರ್ ಬರ್ಬರ ಕೊಲೆ?

ಆಲಮೇಲ: ನೂತನ ತಾಲ್ಲೂಕಿನ ದೇವರನಾವದಗಿ ಗ್ರಾಮದಲ್ಲಿ  ರೌಡಿ ಶೀಟರ್ ಮಾಳು ತಂದೆ ಯಮನಪ್ಪ ಮೇತ್ರಿ (38)  ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ.

ಕೋಲೆಯಾದ ವ್ಯಕ್ತಿ ಹಲವು ವರ್ಷಗಳಿಂದ  ರೌಡಿ ಶೀಟರ್  ಆಗಿದ್ದು ಕೆಲವೇ ದಿನಗಳ ಹಿಂದೆ ಸೇರವಾಸ ಅನುಭವಿಸಿ ಬಂದಿದ್ದ. ಹತ್ಯೆ  ಮಾಡಲು ಕಾರಣ ಶೋಧಿಸಿದ ತಂಡಕ್ಕೆ ಬಲ್ಲ ಮೂಲಗಳಿಂದ ಆಶ್ಚರ್ಯ ಎಂಬಂತೆ ಅಕ್ರಮವಾಗಿ  ನಡೆಯುತ್ತಿರುವ ಇಸ್ಪೀಟ್  ಕ್ಲಬ್  ಕಾರಣ ಎಂಬುದು ತಿಳಿದುಬಂದಿದೆ.

ಅಲ್ಲಿ ನಡೆದ ಹಣದ ವಹಿವಾಟಿನಲ್ಲಿ ವ್ಯತ್ಯಾಸ ಕಂಡು ಬಂದ ಕಾರಣದಿಂದ. ಮೂವರೂ ಸೇರಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧೀಕ್ಷಕ (SP) ಎಚ್.ಡಿ.ಆನಂದಕುಮಾರ, ಪೊಲೀಸ್ ಉಪಾಧೀಕ್ಷಕ (DYSP) ಚಂದ್ರಕಾಂತ ನಂದರಡ್ಡಿ, ಇಂಡಿ ಗ್ರಾಮೀಣ ವೃತ್ತ ನಿರೀಕ್ಷಕ (CPI) ಎಂ.ಎನ್.ಶೀರಹಟ್ಟಿ  ನೇತೃತ್ವದಲ್ಲಿ ಆಲಮೇಲ ಠಾಣೆಯ  ಆರಕ್ಷಕ  ನಿರೀಕ್ಷಕ (PSI) ಕುಮಾರ ಹಡಕರ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಂದಗಿ ಆರಕ್ಷಕ  ನಿರೀಕ್ಷಕ (PSI) ಸೊಮೇಶ ಗೇಜ್ಜಿ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಂತಕರ ಹಿಡಿಯಲು ಪೊಲೀಸರು ಚುರುಕಿನ  ಕಾರ್ಯಾಚರಣೆ  ನಡೆಸಿದ್ದಾರೆ.

ಜಿಲ್ಲೆಯಾದ್ಯಂತ ಇಸ್ಪೀಟ್ ಕ್ಲಬ್ ಗಳು

ಗುಮ್ಮಟನಗರಿ ವಿಜಯಪುರದಲ್ಲಿ  ಅನೇಕ ಇಸ್ಪೀಟ್ ಕ್ಲಬ್ ಗಳಿದ್ದು  ಬಬಲೇಶ್ವರ, ಕೊಲ್ಹಾರ, ನಿಡಗುಂದಿ,ಇಂಡಿ, ದೇ.ಹೀಪ್ಪರಗಿ, ಸಿಂದಗಿ, ಆಲಮೇಲ, ಹಾಗೂ ಪಕ್ಕದ ಜಿಲ್ಲೆ ಅಪಜಲಪುರ, ಯಾದಗಿರಿ ಜಿಲ್ಲೆಯ ಹುಣಸಗಿ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರಕ್ಕು ಇಸ್ಪೀಟ್ ಆಟಗಳಿವೆ ಎಂದು ತಿಳಿದು ಬಂದಿದೆ ಇದನ್ನು ಅಕ್ರಮವಾಗಿ ನಡೆಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಪೊಲೀಸರು ಕಂಡು ಕಾಣದಂತೆ ಕುಳಿತ್ರಾ? ಅಕ್ರಮ ಇಸ್ಪೀಟ್ ಕ್ಲಬ್ ಗಳಲ್ಲಿ ಪೊಲೀಸರ ಪಾತ್ರವೇನು ಎಂಬುದು  ಜನರ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.


Comments

Leave a Reply

Your email address will not be published. Required fields are marked *