ಸಿಂದಗಿ: ಶ್ರೀ ಆದಿಶೇಷ ಪ್ರೊಡಕ್ಷನ್ಸ್ ವತಿಯಿಂದ ಮಕ್ಕಳ ಚಲನಚಿತ್ರಕ್ಕೆ ಮಕ್ಕಳ ಮುಖ್ಯ ಪಾತ್ರ ಮತ್ತು ಪೋಷಕ ಪಾತ್ರಗಳಿಗಾಗಿ ಇಂದು ಜು.30 ರವಿವಾರದಂದು ಜ್ಞಾನ ಭಾರತಿ ವಿದ್ಯಾಮಂದಿರದಲ್ಲಿ ಆಡಿಷನ್ ನಡೆಯಲಿದೆ.
ಮಕ್ಕಳ ಪಾತ್ರಕ್ಕಾಗಿ 12 ರಿಂದ 14 ವರ್ಷದ ಮಕ್ಕಳು ಭಾಗವಹಿಸಬಹುದು. ಪೋಷಕ ಪಾತ್ರಗಳಿಗಾಗಿ 30 ರಿಂದ 45 ವರ್ಷದ ವಯಸ್ಕರು ಭಾಗವಹಿಸಬಹುದು.
ಚಲನಚಿತ್ರ ಆಯ್ಕೆ ಪ್ರಕ್ರಿಯೆಗೆ ಬರುವಾಗ ಅಭ್ಯರ್ಥಿಗಳು ಆಧಾರ್ ಕಾರ್ಡ್ ಹಾಗೂ 2 ಪಾಸ್‌ಪೋರ್ಟ್ ಸೈಜ್ ಭಾವಚಿತ್ರಗಳನ್ನು ಕಡ್ಡಾಯವಾಗಿ ತರಬೇಕು. ಆಡಿಷನ್ ಭಾಗವಹಿಸುವ ಅಭ್ಯರ್ಥಿಗಳಿಗೆ 2 ನಿಮಿಷಗಳ ಕಾಲಾವಧಿ ನಿಗದಿಪಡಿಸಲಾಗಿದ್ದು ತಮಗೆ ಇಚ್ಚೆಯನುಸಾರವಾದ ಪಾತ್ರ ಹಾಗೂ ಸಂಭಾಷಣೆಯನ್ನು ಪ್ರದರ್ಶನ ಮಾಡಲು ಅವಕಾಶವಿದೆ. ಎಂದು ಚಿತ್ರ ತಂಡ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9986696566, 9916896660
Leave a Reply