ವಿಜಯಪುರ : ನಗರದ ಬಾಗಲಕೋಟೆ ರಸ್ತೆಯಲ್ಲಿರುವ ವಿದ್ಯಾನಗರದ ಬಿ.ಎಲ್.ಡಿ.ಈ ಸಂಸ್ಥೆಯ ಎ.ವಿ.ಎಸ್, ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆ ಹಾಗೂ ಸಂಶೋದನಾ ಕೇಂದ್ರದಲ್ಲಿ ಅಗಸ್ಟ 14 ರಿಂದ 19ರ ವರೆಗೆ ಹಸ್ತ ಪಾದ ಸೋರಿಯಾಸಿಸ್ ರೋಗಕ್ಕೆ ಸಂಬಂಧಿಸಿದಂತೆ ಉಚಿತ ತಪಾಸಣೆ, ಚಿಕಿತ್ಸಾ ಹಾಗೂ ಉಚಿತ ಔಷಧ ವಿತರಣಾ ಶಿಬಿರ ಆಯೋಜಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ಪರಿಣಿತ ತಜ್ಞ ವೈದ್ಯರಿಂದ ತಪಾಸಣಾ ಶಿಬಿರ ನಡೆಯಲಿದೆ. ಈ ರೋಗದ ಮುಖ್ಯ ಲಕ್ಷಣಗಳಾದ ಹಸ್ತ-ಪಾದ ಸೀಳುವಿಕೆ, ಸೀಳುವಿಕೆಯಿಂದ ರಕ್ತಸ್ರವ, ಹಸ್ತ-ಪಾದ ತುರಿಕೆ ಸೇರಿದಂತೆ ಇದರ ಸಾಮಾನ್ಯ ಲಕ್ಷಣಗಳನ್ನು ಪರೀಕ್ಷಿಸಿ ಉಚಿತ ಚಿಕಿತ್ಸೆ ನೀಡಲಾಗುವುದು. ತಜ್ಞ ವೈದ್ಯರಾದ ಡಾ|| ಸಂಜಯ ಕಡ್ಲಿಮಟ್ಟಿ, ಡಾ|| ಎಸ್.ಡಿ ಮನಗೂಳಿ, ಡಾ|| ಉಮಾ ಪಾಟೀಲ, ಡಾ|| ಎಸ್.ಎಂ. ಚೌಧರಿ, ಡಾ|| ಅಶ್ವಿನಿ ಸಜ್ಜನವರ ಹಾಗೂ ಡಾ|| ಮಾನಸಾ.ಪಿ, ಚಿಕಿತ್ಸೆ ನೀಡಲಿದ್ದಾರೆ ಎಂದು ಪ್ರಕಠಣೆಯಲ್ಲಿ ತಿಳಿಸಿದ್ದರೆ, ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾಯಿಸಲು ಡಾ||ಸುನೀತಾ ಬಿ. ಅವರನ್ನು ಸಂಪರ್ಕಿಸಿ- 9148159578, 9404299719
Leave a Reply