ಅಂಬುಲೆನ್ಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ 

ಸಿಂದಗಿ: ಸಿಂದಗಿಯಿಂದ ಕಲಬುರ್ಗಿಗೆ ತೆರಳುತ್ತಿದ್ದ ಅಂಬುಲೆನ್ಸ್  ಕಲಬುರ್ಗಿ ಮಾರ್ಗದಿಂದ ಬರುತ್ತಿರೋ ಲಾರಿಗೆ ರಭಸವಾಗಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೆ ಪ್ರಾಣ ಬಿಟ್ಟ ಚನ್ನು ರಾಯಚೂರು (ಗಾಣಗೇರ).ವಯಾ 26. ಸಾ.ಅಂತರಗಂಗಿ ಗ್ರಾಮದವನು  ಎನ್ನಲಾಗಿದೆ. ಯರಗಲ್ಲ ಗ್ರಾಮದ ಹತ್ತಿರ ಘಟನೆ ನಡೆದಿದೆ.

ಮನಗೂಳಿ ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದನ್ನು ಕೆಲಸದ ನಿಮಿತ್ತವಾಗಿ ಕಲಬುರ್ಗಿಗೆ ತೆರಳುತ್ತಿದ್ದರು. ಸ್ಥಳಕ್ಕೆ ಶಾಸಕ ಅಶೋಕ ಮನಗೂಳಿ ಭೇಟಿ ನೀಡಿ ಕುಟುಂಬದೊಂದಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿದರು.

ಜೊತೆ ಇದ್ದ ಇಬ್ಬರಲಿ  ಸಂತೋಷ ಪ್ರಾಣಕ್ಕಾಗಿ ಹೋರಾಟ ನಡೆಸಿದರೆ ಇನ್ನೋಬ್ಬ ಸಿದ್ದು ಕಾಲು ಮುರಿದಿದೆ ಎಂದು ಊಹಿಸಲಾಗಿದೆ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರಕ್ಕೆ ಕಳುಹಿಸಿದ್ದಾರೆ. 

ಸಿಂದಗಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಥಮ ಹಂತದ  ತನಿಖೆ ನಡೆಸಿದ್ದಾರೆ .