ಸಿಂದಗಿ ಪುರಸಭೆ ಕಳಂಕಿತ ನಾಮಾಂಕಿತದಿಂದ ಹೊರಬರುತ್ತಿದೆ, ಉತ್ತಮ ಸೇವೆ ದೊರಕಲಿ ; ಡಾ.ಪ್ರಭು ಸಾರಂಗದೇವ ಶಿವಾಚಾರ್ಯಾರು.

ನಾನು ಸಿಂದಗಿ ಪುರಸಭೆಗೆ ಪ್ರಥಮ ಬಾರಿಗೆ ಆಗಮಿಸುತ್ತಿದ್ದು ನಾವು ಜನಸಾಮಾನ್ಯರಿಂದ ಸಿಂದಗಿ ಪುರಸಭೆ ಕುರಿತು ಹಲವು ಆಪಾಧನೆಗಳೆ ಕೇಳುತ್ತಿದೆವು ಪ್ರಥಮ ಬಾರಿಗೆ ಬದಲಾವಣೆಯ ಗಾಳಿ ಬಿಸಿದೆ ಎಂದು ಸಾರಂಗಮಠದ ಪೂಜ್ಯರಾದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯಾರು ಹೇಳಿದರು.

ಸಿಂದಗಿ :  ಪುರಸಭೆ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಈ- ಆಫೀಸ್ ಚಾಲನೆ ಪೌರಕಾರ್ಮಿಕರಿಗೆ ವಿಶ್ರಾಂತಿ ಗೃಹ ಉದ್ಘಾಟನೆ  ಹಾಗೂ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆಯ ಹಕ್ಕುಪತ್ರ ಉದ್ಘಾಟನೆಯ  ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ ಪೂಜ್ಯರು ಸಿಂದಗಿ ಪುರಸಭೆ ಅಂದರೆ ಜಿಲ್ಲೆಯಲ್ಲಿಯೆ ಬೇರೆ ಭಾವನೆಯಿಂದ ನೋಡುವ ಪರಿಸ್ಥಿತಿ ಉಂಟಾಗಿತ್ತು. ಯಾರದೋ ಆಸ್ತಿಗಳು ಇನ್ಯಾರದೋ ಹೇಸರಿಗೆ ಅಕ್ರಮ ಬದಲಾವಣೆಗಳು ಹಾಗೂ ದಿಟ್ಟ ನಿರ್ಧಾರ ತೆಗೆದುಕೋಳ್ಳುವಲ್ಲಿ ವಿಪಲತೆ ಹೊಂದಲಾಗುತ್ತಿದೆ ಎಂಬುದು ಮಾತಾಗಿತ್ತು. ಆದರೆ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ದಿಟ್ಟ ಹೇಜ್ಜೆ ಇಟ್ಟು ರಸ್ತೆ ಬದಿ ಇರುವ  ಅಕ್ರಮ ಗುಡಾಂಗಡಿ ತೆರವಿಗೆ ಮುಂದಾಗಿರುವುದು ಜನಮಣನೆ ಗಳಿಸಿದೆ ಜನರಲ್ಲಿ ಒಂದು  ವಿಶ್ವಾಸ ಮೂಡಿಸಿದೆ. ಸಿಂದಗಿ ಪುರಸಭೆ ಕಳಂಕಿತ ನಾಮಾಂಕಿತದಿಂದ ಹೊರಬುತ್ತಿದೆ ಎಂಬ ಮಾತುಗಳು ಪ್ರಾರಂಭವಾಗಿವೆ ನಿಮ್ಮಿಂದ ಜನರಿಗೆ ಉತ್ತಮ ಸೇವೆ ದೊರಕಲಿ ಎಂದು ಆಶೀರ್ವದಿಸಿದರು.

ಉದ್ಘಾಟನಾ ಮಾತುಗಳನ್ನಾಡಿದ ಶಾಸಕ ಅಶೋಕ ಮನಗೂಳಿ ಸಿಂದಗಿ ಪುರಸಭೆಯ ನಿಜವಾದ ಆಸ್ತಿ ಎಂದರೆ ಅದು ಪೌರಕಾರ್ಮಿಕರು ತಮ್ಮ ಜೀವನದ ಹಂಗು ತೊರೆದು ನಗರವನ್ನು ಸ್ವಚ್ಚಂದವಾಗಿ ಇಡುತ್ತಾರೆ.  ನಮ್ಮಗೆ ಚುನಾಯಿತ ಪ್ರತಿನಿಧಿಯಾಗಿ ಚುನಾಯಿಸಿದ ಕಟ್ಟ ಕಡೆಯ  ಜನರಿಗೆ  ಸರಕಾರದ ಸವಲತ್ತುಗಳು ಮುಟ್ಟಿಸಿದಾಗ ಮಾತ್ರ ನಮ್ಮಗೆ ನೀಡಿದ ಜವಾಬ್ದಾರಿಗೆ ಗೌರವ ಬರುತ್ತದೆ. ಅಧಿಕಾರ ವಿದೆ ಎಂದು ವ್ಯಯಕ್ತಿಕವಾಗಿ, ಕುಟುಂಬಕ್ಕಾಗಿ, ಜಾತಿಗಾಗಿ ಧರ್ಮಕ್ಕಾಗಿ ಬಳಸಿಕೊಂಡರೆ ಐದು ವರ್ಷದ ಅವಧಿ ನಂತರ  ನಮ್ಮಗೆ ತಕ್ಕ ಉತ್ತರ  ನೀಡಲು ಜನರು ಸಿದ್ದರಿರುತ್ತಾರೆ. ಇಂದು ಈ-ಆಪೀಸ್, ಹಾಗೂ ಪೌರಕಾರ್ಮಿಕರಿಗೆ ವಿಶ್ರಂತಿ ಗೃಹ ಹಾಗೂ ನಿವೇಶನಕ್ಕಾಗಿ ಹಕ್ಕುಪತ್ರ ವಿತರಣೆ ಮಾಡುತ್ತಿರುವುದು ಸಂತಸ ತಂದಿದೆ.

ಈ ಸಂಧಂರ್ಭದಲ್ಲಿ ಮಾಜಿ ಸದಸ್ಯ ರಾಜಶೇಖರ ಕೂಚಬಾಳ , ನಾಮನಿರ್ದೇಶಿತ ಸದಸ್ಯ ಸಾಯಬಣ್ಣ ಪುರದಾಳ ಸದಸಯ  ಬಸವರಾಜ ಯರನಾಳ ಮಾತನಾಡಿದರು. ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು  ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಮಾಜಿ ಅಧ್ಯಕ್ಷರಾದ ಭಾಷಾಸಾಬ ತಾಂಬೋಳಿ, ಹಣಮಂತ ಸುಣಗಾರ, ಸದಸ್ಯರಾದ ಪ್ರತಿಭಾ ಕಲ್ಲೂರ, ಸಿದ್ದು ಮಲ್ಲೇದ, ಪ್ರತಿನಿಧಿಗಳಾದ ಆನಂದ ಡೋಣುರ,  ಶರಣಪ್ಪ ಸುಲ್ಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕರ್ನಾಟಕ ಮಹಿಳಾ ಕ್ರೀಕೇಟ್  ತಂಡಕ್ಕೆ ಆಯ್ಕೆಯಾದ ಸಿಂದಗಿಯ ಸುಪುತ್ರಿ  ಜಯಶ್ರೀ ಕೂಚಬಾಳ ಅವರಿಗೆ ಸನ್ಮಾನಿಸಿ ಪುರಸಭೆಯಿಂದ  ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ಕ್ರೀಕೇಟ್ ಸಲಕರಣೆ ಕೋಡಿಸಲಾಗುವುದು.-ಶಾಂತವೀರ ಬಿರಾದಾರ ಅಧ್ಯಕ್ಷರು ಪುರಸಭೆ ಸಿಂದಗಿ