ಸಿಂದಗಿ : ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಲಾಗುತ್ತಿದೆ ಎಂದು ಪ್ರಾಚಾರ್ಯ ಡಾ.ಬಿ.ಜಿ ಪಾಟೀಲ ಹೇಳಿದರು.
ಪಟ್ಟಣದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಸಿ.ಎಮ್.ಮನಗೂಳಿ ಕಲಾ ಮಹಾವಿದ್ಯಾಲಯ ಸಿಂದಗಿಯಲ್ಲಿ ನಡೆದ ಪತ್ರಿಕಾ ಗೋಷ್ಠಿ ಕುರಿತು ಮಾತನಾಡಿದ ಅವರು ಸಿ.ಎಮ್.ಮನಗೂಳಿ ಕಲಾ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಕನೇಕ್ಟ್ ಅಪ್ರೆಂಟಿಸ್ ಕಂಪನಿಯ ಸಹಯೋಗದೊಂದಿಗೆ ದಿನಾಂಕ 04 ಸಪ್ಟಂಬರ್ 2023 ರಂದು ಬೃಹತ್ತ ಉದ್ಯೋಗ ಮೇಳದೊಂದಿಗೆ ವಿಶೇಷವಾಗಿ ಶಿಕ್ಷಕರ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ.
ಒಟ್ಟು ಪ್ರಮುಖವಾಗಿ ನಾಲ್ಕು ಕಂಪನಿಗಳು ಆಗಮಿಸುತ್ತಿದ್ದು ಟಾಟಾ ಮಾರ್ಕೋಪೋಲೊ, ಟೋಯೊಟಾ, ಅಪೊಲೊ ಹಾಸ್ಪಿಟಲ್ ಮತ್ತು ಮೇಡಿಸ್ಕಿಲ್ಸ್, ಹಾಗೂ ಸೆನ್ಸರಾ ಇಂಜನಿಯರಿಂಗ್ ಪ್ರೈವೇಟ್ ಲಿ. ಕಂಪನಿಗಳು ಒಳಗೊಂಡಂತೆ ಹಲವಾರು ಕಂಪಂನಿಗಳು ಬಾಗವಹಿಸಲಿವೆ. ವಿಶೇಷವಾಗಿ ಪ್ರೋಪೆಸರ್ ರಾಹುಲ ಕಾಂಬಳೆ ಇವರಿಂದ ಪ್ರೇರಣದಾಯಕ ನುಡಿಗಳು ಯುವಕರ ದಾರಿ ದೀಪವಾಗಲಿವೆ.
18 ರಿಂದ 35 ವರ್ಷದೊಳಗಿನ ಐ.ಟಿ.ಐ, ಪದವಿ ಅಥವಾ ಡಿಗ್ರಿ ಅಥವಾ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ನಿರುದ್ಯೋಗಿಗಳು ಇದರ ಸದುಪಯೋಗ ಪಡೆದುಕೋಳ್ಳಬೇಕು. ಉದ್ಯೋಗ ಸೃಷ್ಠಿಸುವ ಹಿನ್ನಲ್ಲೆಯಲ್ಲಿ ಈ ಉದ್ಯೋಗ ಮೇಳ ಆಯೋಜನೆ ಮಾಡುತ್ತಿದ್ದು ಸಿ.ಎಮ್.ಮನಗೂಳಿ ಕಾಲೇಜು ಆವರದಲ್ಲಿ ಬೇಳಿಗ್ಗೆ 8 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ನಡೆಯಲಿದ್ದೆ. ಮೂಲ ದಾಖಲಾತಿಯೊಂದಿಗೆ ಹಾಜರಾಗಿ ಅವಕಾಶ ಬಳಸಿಕೋಳ್ಳಲು ತಿಳಿಸಿದರು.
ಭಾಗವಹಿಸುವ ವಿದ್ಯಾರ್ಥಿಗಳು ಹೇಚ್ಚಿನ ಮಾಹಿತಿಗಾಗಿ ಮಂಜುನಾಥ ಪರಮಾನಂದ 9663888980 ಹಾಗೂ ಶ್ರೀಧರ ಕುಲಕರ್ಣಿ 9945555092 ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸ ಬಹುದಾಗಿದೆ.
Leave a Reply