ಕಲೆ ಹಾಗೂ ನಟನೆ ಶಿಕ್ಷಣದ ಒಂದು ಅವಿಭಾಜ್ಯ ಅಂಗ ; ಎಸ್ ಪ್ರಭು

ವಿದ್ಯಾರ್ಥಿಗಳಿಗೆ ರಂಗಭೂಮಿ ಪರಿಚಯ ಹಾಗೂ ರಂಗನಿರ್ದೇಶಕರೊಂದಿಗೆ ಸಂವಾದ ಕಾರ್ಯಕ್ರಮ

ವೇಗದೂತ ಜನದನಿ

ಬೀದರ: ನಗರದ ಸಿದ್ಧಾರ್ಥ ಪಿಯು ಕಾಲೇಜಿನಲ್ಲಿ ಜನ ಜನಿತ ಕಲಾ ಪ್ರದರ್ಶನ ಸಂಘದ ವತಿಯಿಂದ ಕಾಲೇಜ್ ವಿದ್ಯಾರ್ಥಿಗಳಿಗೆ ರಂಗಭೂಮಿ ಪರಿಚಯ ಹಾಗೂ ರಂಗನಿರ್ದೇಶಕರೊಂದಿಗೆ ಸಂವಾದ ಕಾರ್ಯಕ್ರಮ ಸಸಿಗೆ ನೀರರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯ ಎಸ್ ಪ್ರಭು  ಸಿದ್ದಾರ್ಥ್ ಪಿ. ಯು. ಕಾಲೇಜು ಇಂದಿನ ವಿದ್ಯಾರ್ಥಿಗಳು ಕಲೆಯ ಬಗ್ಗೆ ಬಿಟ್ಟು ಮೊಬೈಲ್ ಗೀಳು ಹಚ್ಚಿಕೊಂಡಿರುವ ವಿದ್ಯಾರ್ಥಿಗಳಿಗಾಗಿ ಕಲೆ ತರಬೇತಿ ಸಿಕ್ಕರೆ ಉತ್ತಮ ಕಲಾವಿದರಾಗಿ ಹೊರಹೊಮ್ಮುತ್ತಾರೆ. ಕಲೆ ಹಾಗೂ ನಟನೆ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ ಎಂದು ತಿಳಿಸಿದರು.

ಪ್ರಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು. ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕ ಅಧ್ಯಕ್ಷ ಎಸ್. ಬಿ. ಕುಚಬಾಳ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕಲೆ ಅದರಲ್ಲೂ ರಂಗಭೂಮಿ ಕಲೆ ಇಂದಿನ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ನಾಟಕ ನೋಡಿ ಬದಲಾವಣೆಯಾದ ಉದಾಹರಣೆಗಳಿವೆ ಎಂದು ತಿಳಿಸಿದರು.

ನಂತರ ರಂಗಭೂಮಿ ನಟ ನಿರ್ದೇಶಕ ಹಾಗೂ ಚಲನಚಿತ್ರ ನಟ ಯಶವಂತ ಕುಚಬಾಳ ಮಾತನಾಡುತ್ತಾ ರಂಗ ಭೂಮಿ ಮಾನವ ಕುಲಕ್ಕೆ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ವಿವರಣೆ ನೀಡಿ ಬೀದರಿನ ಎಲ್ಲಾ ಹವ್ಯಾಸಿ ವಿದ್ಯಾರ್ಥಿಗಳಿಗಾಗಿ ಮುಂದಿನ ದಿನಗಳಲ್ಲಿ ಬೀದರ ಜಿಲ್ಲೆಯಲ್ಲಿ ದೊಡ್ಡ ಮಟ್ಟದ್ದಲ್ಲಿ ಒಂದು ರಂಗ ಶಿಬಿರವನ್ನು ನಡೆಸುವದಾಗಿ ತಿಳಿಸಿದರು. ಹಾಗೆಯೇ ಬ್ರೂಣ ಹತ್ಯೆ ಬಗ್ಗೆ ಒಂದು ಗೀತೆಯನ್ನು ಹಾಡಿ ರಂಜಿಸಿದ್ದರು. ಜೊತೆಗೆ ವಿದ್ಯಾರ್ಥಿಗಳೊಡನೆ ರಂಗ ಶಿಬಿರದ ಬಗ್ಗೆ ಸಂವಾದ ನಡೆಸಿದರು.

ವಿಶಾಲ್ ಪಾಟೀಲ್ ರಂಗಭೂಮಿ ನಿರ್ದೇಶಕರು ಮಕ್ಕಳ ಜೊತೆಯಲ್ಲಿ ರಂಗಾಟಗಳನ್ನು ಆಡಿಸುವ ಮೂಲಕ ರಂಗಭೂಮಿಯ ಮಜಲಗಳನ್ನು ತಿಳಿಸಿದರು. ಬೀದರ್ ತಾಲೂಕ ವಿಸ್ತರಣಾಧಿಕಾರಿ ಉಮೇಶ್ ಕಡಾಳ್ಕರ್ ಅವರು ಅತಿಥಿಗಳಾಗಿ ಆಗಮಿಸಿದ್ದರು.

ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಸುಲೋಚನಾ ಬಿರಾದಾರ ಕಾರ್ಯಕ್ರಮದ ನಿರೂಪಣೆಸಿದರು ಪ್ರಾಧ್ಯಾಪಕ ಎಕನಾಥ್ ಸುಣಗಾರ  ಉಪಸ್ಥಿತರಿದ್ದರು.   ಪ್ರಾಧ್ಯಾಪಕ ಶಿವುಕುಮಾರ್ ಸ್ವಾಗತಿಸಿದರು ಪ್ರಕಾಶ್ ಕುಚುಬಾಳ ವಂದಿಸಿದರು


Comments

Leave a Reply

Your email address will not be published. Required fields are marked *