ಸಿಂದಗಿ : ಶ್ರೀ ಶಂಕರಲಿಂಗ ಮಹಾರಾಜರ ನೂರನೇ ಶತಮಾನೋತ್ಸವ ಹಾಗೂ 63 ಶರಣರ ಮಹಾಮಂಟಪ ಪೂಜೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಯಿಂದ ಸಹಸ್ರಾರು ಭಕ್ತಾಧಿಗಳು ಆಗಮಿಸುತ್ತಾರೆ. ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಅನ್ನ ಪ್ರಸಾದ ವ್ಯವಸ್ಥೆ ಇರುತ್ತದೆ. ಗ್ರಾಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳು ಸ್ವಚ್ಛತೆ ಹಾಗೂ ನೀರಿನ ವ್ಯವಸ್ಥೆ ಕೊರತೆ ಬಾರದಂತೆ ನೋಡಿಕೊಳ್ಳಬೇಕು ಎಂದು ಶಾಸಕ ರಮೇಶ ಭೂಸನೂರ ಸೂಚಿಸಿದರು.
ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದ ಶ್ರೀ ಸಿದ್ದಲಿಂಗ ಮಹಾರಾಜರ ಮಠದಲ್ಲಿ ಜರುಗಿದ ಶ್ರೀ ಶಂಕರಲಿಂಗ ಮಹಾರಾಜರ ರಥೋತ್ಸವದ ಶತಮಾನೋತ್ಸವ ಹಾಗೂ 63 ಶರಣರ ಮಹಾಮಂಟಪ ಪೂಜೆಯ ಬೆಳ್ಳಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿ ವರ್ಷವೂ ಶ್ರೀ ಸಿದ್ದಲಿಂಗ ಮಾಹಾರಾಜರ ಹಾಗೂ ಶಂಕರಲಿಂಗ ಮಾಹಾರಾಜರ ಜಾತ್ರೆ ಅದ್ದೂರಿಯಾಗಿ ಜರುಗುತ್ತ ಬಂದಿದೆ. ಈ ಬಾರಿ ವಿಶೇಷವಾಗಿ ಶ್ರೀ ಶಂಕರಲಿಂಗ ಮಹಾರಾಜರ ಒಂದು ನೂರನೇ ಶತಮಾನೋತ್ಸವ ಹಾಗೂ ಬೆಳ್ಳಿ ಮಹೋತ್ಸವ ಇರುವುದರಿಂದ ಜಿಡಗಾ ಪೂಜ್ಯರಿಂದ ಹೇಲಿಕ್ಯಾಪ್ಟರ್ ಮೂಲಕ ಪುಷ್ಪರ್ಚನೆ ನಡೆಯುತ್ತದೆ. ಜೊತೆಗೆ ವಿವಿಧ ಕಾರ್ಯಕ್ರಮ ಜರುಗುತ್ತವೆ. ಜೊತೆಗೆ ಜಾತ್ರಾ ಕಮೀಟಿಯವರು ಜಾತ್ರೆಯಲ್ಲಿ ಜಾಗ್ರತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದ ಅವರು ಜಾತ್ರೆಗೆ ನನ್ನ ವ್ಯಯಕ್ತಿಕವಾಗಿ ಒಂದು ಲಕ್ಷ ಹಣವನ್ನು ನೀಡುತ್ತೇನೆ ಹಾಗೂ ಜಾತ್ರೆ ಇನ್ನು ಒಂದು ತಿಂಗಳು ಬಾಕಿ ಇದೆ ಅಷ್ಟರಲ್ಲಿ ನನ್ನ ಅನುಧಾನದಲ್ಲಿ ನಿಂಗಾರಾಯ ದೇವಸ್ಥಾನದಿಂದ ಸಿದ್ದಲಿಂಗ ಮಹಾರಾಜರ ಮಠದ ವರೆಗೆ ಸಂಪೂರ್ಣ ಸಿಸಿ ರಸ್ತೆ ನಿರ್ಮಿಸುತ್ತೇನೆ ಎಂದು ಭರವಸೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಎಸ್. ಆರ್. ಎಂ. ಸ್ವಾಮಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಜಿ. ಪಂ, ವಿಜಯಪುರ, ಅಶೋಕ ಪಾಟೀಲ್, ಗ್ರಾ. ಪಂ. ಅಧ್ಯಕ್ಷ ನಿಂಗನಗೌಡ ಓತಿಹಾಳ, ಅಭಿವೃದ್ಧಿ ಅಧಿಕಾರಿ ಪ್ರಕಾಶ ರಾಠೋಡ, ಮಾಜಿ ಜಿ. ಪಂ. ಸದಸ್ಯ ಬಿಂದುರಾಯಗೌಡ ಪಾಟೀಲ್, ಶರಣಪ್ಪ ಸಾಂಬಾ, ಸೇರಿದಂತೆ ಗ್ರಾಮಸ್ಥರು ಇದ್ದರು.
Leave a Reply