ಸಿಂದಗಿ: ಪಟ್ಟಣದ ಅಭಿವೃದ್ದಿ ಕುಂಠಿತ ಹಿನ್ನಲೆ ಪುರಸಭೆಯನ್ನು ಸೂಪರ್ ಸೀಡ್ ಮಾಡಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ಹೇಳಿದರು.
ಮಂಗಳವಾರದಂದು ತಹಶೀಲ್ದಾರ ಕಚೇರಿಯಲ್ಲಿ ಪುರಸಭೆಯನ್ನು “ಸೂಪರ್ ಸೀಡ್” ಮಾಡಲು ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಅವರು. ಜನ ಸಾಮಾನ್ಯರ ಸಮಸ್ಯೆ, ಬೇಡಿಕೆ, ಕುರಿತಾಗಿ ಆಡಳಿತ ವರ್ಗ ಸದಸ್ಯರ ನಿರ್ಲಕ್ಷ ದೊಂದಿಗೆ ಅಭಿವೃದ್ದಿ ವಿಚಾರದಲ್ಲಿನಡೆಸಿದ ಒಣ-ಒಳ ರಾಜಕೀಯವನ್ನು ಪತ್ರಕರ್ತರಾದ ನಾವುಗಳು ಕಂಡಂತೆ ಸುದ್ದಿಗಳನ್ನು ಪ್ರಕಟಿಸುತ್ತಿದ್ದೇವೆ. ಆದರೆ ಕೆಲ ಪುರಸಭೆ ಸದಸ್ಯರು ಲಮ್‌ಸಮ್ ಪಡೆದು ಸುದ್ದಿ ಪ್ರಕಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಾರಣ ನಮ್ಮ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿದೆ ಈ ಹಿನ್ನಲೆ ಜಿಲ್ಲಾಧಿಕಾರಿಗಳು ಪುರಸಭೆಯ ಆಡಳಿತವನ್ನು ಸೂಕ್ತವಾಗಿ ಪರಿಶೀಲಿಸಿ ಕುಂಠಿತಗೊಂಡಿರುವ ಪಟ್ಟಣದ ಅಭಿವೃದ್ದಿಗೆ ಒತ್ತು ನೀಡಿ ಪುರಸಭೆಯ ಆಡಳಿತವನ್ನು “ ಸೂಪರ್ ಸೀಡ್ ” ಮಾಡುವ ಮೂಲಕ ಸಿಂದಗಿ ಪಟ್ಟಣದ ಜನತೆಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.
ಪುರಸಭೆಯ ಆಡಳಿತವನ್ನು ಸೂಕ್ತವಾಗಿ ಪರಿಶೀಲಿಸಿ ಅಭಿವೃದ್ಧಿಗೆ ಕುಂಠಿತಗೊಂಡಿರುವ ಆಡಳಿತವನ್ನು “ ಸೂಪರ್ ಸೀಡ್ “ ಮಾಡಿ ಸಿಂದಗಿ ಜನತೆಗೆ ನ್ಯಾಯ ಒದಗಿಸಲು ಜಿಲ್ಲಾಅಧಿಕಾರಿಗಳಿಗೆ ತಾಲೂಕಾ ದಂಡಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು ಆಡಳಿತಸೌಧದ ಅಧಿಕಾರಿಯಾದ ಶ್ರೀಮತಿ ಎಸ್.ಆಯ್.ಚೌವಾಣ ಮನವಿ ಸ್ವೀಕರಿಸಿದರು.
ಈ ವೇಳೆ ಪತ್ರಕರ್ತರಾದ ಶಾಂತೂ ಹಿರೇಮಠ, ಮಹಾಂತೇಶ ನೂಲಾನವರ, ರವಿಚಂದ್ರ ಮಲ್ಲೇದ, ರಮೇಶ ಪೂಜಾರ, ಸುದರ್ಶನ ಜಂಗಣ್ಣಿ, ನಾಗೇಶ ತಳವಾರ, ಸಂಗಮೇಶ ಡಿಗ್ಗಿ, ಶಿವಾನಂದ ಆಲಮೇಲ, ಭೋಜರಾಜ ದೇಸಾಯಿ, ಶಾಂತವೀರ ಹಿರೇಮಠ, ಗುರುರಾಜ ಮಠ ಇದ್ದರು.
Leave a Reply