ವೇಗದೂತ ಜನದನಿ ವೇಬ್ ಪತ್ರಿಕೆಗೆ ಇಂದು ಪೂಜ್ಯ ಷ.ಬ್ರ.ಡಾ|| ಪ್ರಭು ಸಾರಂಗದೇವ ಶಿವಚಾರ್ಯರು ಇವರ ದಿವ್ಯ ಸಾನಿಧ್ಯದಲ್ಲಿ ವಿಶ್ರಾಂತ ಮುಖ್ಯ ಗುರುಗಳಾದ ಮಹಾದೇವಪ್ಪ ಚೌರ ಇವರು ಉದ್ಘಾಟಿಸಿದರು.
ಹೆಸರೆ ಸೂಚಿಸುವಂತೆ ನೊಂದವರ ಧ್ವನಿಯಾಗಿ ಅತ್ಯಂತ ವೇಗವಾಗಿ ಜನರ ಸಂಕಷ್ಟಗಳಿಗೆ ಆಸರೆ ಆಗುವಂತ ಕೆಲಸ ಪ್ರಾರಂಭಿಸಲಿ ವೇಗದೂತ ಜನದನಿಯು ಯಶಸ್ವಿಯಾಗಿ ಮುಂದುವರೆಸುವ ಶಕ್ತಿ ಭಗವಂತ ಶಿವಾನಂದ ಅವರಿಗೆ ಕರುಣಿಸಲೆಂದು ಆರ್ಶಿವದಿಸಿದರು.
ಆರ್ಶಿವಚನ ನೀಡಿದ ಷ.ಬ್ರಡಾ|| ಪ್ರಭುಸಾರಂಗದೇವ ಶಿವಾಚಾರ್ಯರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಪ್ರಜಾವಾಣಿ ಪತ್ರಿಕೆಯ ವರದಿಗಾರರಾದ ಶಾಂತೂ ಹಿರೇಮಠ ಗುರುಗಳು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಅನ್ಯಾಯವಾದಾಗ ಎತ್ತಿ ತೋರಿಸುವ ಎದೆಗಾರಿಕೆ, ಸಾಮಾಜಿಕ ಕಳಕಳಿ ಶಿವಾನಂದ ಅವರಿಗೆ ಇದೆ. ಅವರು ಕೆಡಿಪಿ ಸದಸ್ಯರು ಹೌದು ಕೆಡಿಪಿ ಸಭೆಯಲ್ಲಿ ಅವರು ಪ್ರಶ್ನಿಸುವ ಸಮಾಜದ ಸುಧಾರಣೆ ತರುವ ಬಗ್ಗೆ ಮಾತನಾಡುವ ಶೈಲಿಯನ್ನು ನಾನು ಕಣ್ಣಾರೆ ಕಂಡಿದ್ದೆನೆ. ವೇದಿಕೆಯಿಂದ ಕಾರ್ಮುಕ್ರಮದ ಅರ್ಧಕ್ಕೆ ಮುಂದಿನ ಕಾರ್ಯಕ್ರಮಗಳಿಗಾಗಿ ನಿರ್ಗಮಿಸಿದ ರಾಜಕೀಯ ಮುಖಂಡರ ಕುರಿತು ಟೀಕಿಸಿದ ಅವರು ರಾಜಕೀಯದವರು ತಮ್ಮ ಲಾಭಕ್ಕೆ ಮಾತ್ರ ಬಳಸಿಕೋಳ್ಳುತ್ತಾರೆ ಎಂದು ಖಾರವಾಗಿ ನುಡಿದರು. ರಾಜಕೀಯ ಸಂತೃಪ್ತಿಯ ಕಾರ್ಯ ಅವರಿಂದ ಆಗದು ಎಂಬ ಭರವಸೆ ಇದೆ. ಇಗ ಪತ್ರಿಕೆ ಉದ್ಯಮವಾಗಿದೆ ಅದು ಅನಿವಾರ್ಯವುವಾಗಿದೆ. ಹತ್ತರೊಳಗೆ ಹನ್ನೊಂದು ಆಗದೆ ನಿಮ್ಮದೆ ಘನತೆ ಗೌರವ ಉಳಿಸಿಕೋಳ್ಳಿ ಎಂದು ಮಾರ್ಗದರ್ಶನ ಮಾಡಿದರು.
ನಾವು ವಿದ್ಯಾಭ್ಯಾಸ ಮಾಡುತ್ತಿರುವಾಗ ಲಂಕೇಶ ಪತ್ರಿಕೆ ಖರೀದಿಸಲು ಮುಗಿಬಿಳುತ್ತಿದೇವು ಮಳಿಗೆಗೆ ಹೋಗುವಷ್ಟರಲ್ಲಿಯೇ ಪತ್ರಿಕೆಗಳು ಖಾಲಿ ಆಗಿರುತ್ತಿದ್ದವು. ಸತ್ಯಾ ಸತ್ಯತೆಯ ಅಂಶಗಳನ್ನು ತಿಳಿಸಿದಾಗ ಮಾತ್ರ ಜನರು ನಿಮ್ಮನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಾರೆ, ಸಮಾಜದ , ರಾಜಕೀಯ ಜನಪ್ರತಿ ನಿಧಿಗಳ, ಇನ್ನು ಹಲವಾರು ಕ್ಷೇತ್ರಗಳ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ವೇಗದೂತ ಮಾಡಲಿ. ಸಾಮಾಜಿಕ ಜಾಲತಾಣಗಳಲಿ ಹೊಸ ಬೆಳಕು ಸತ್ಯತೆ ಇದ್ದಲ್ಲಿ ಪ್ರೋತ್ಸಾಹ ಇದ್ದೆ ಇರುತ್ತದೆ. ಪತ್ರಕರ್ತರ ಜೊತೆ ಸದಾಕಾಲ ಇರುತ್ತೆನೆ ಎಂದು ಭರವಸೆಯ ನುಡಿಗಳನ್ನಾಡಿದರು.
ಸಮಾಜದ ಓರೆಕೋರೆಗಳನ್ನು ತಿದ್ದುವ ಕಾರ್ಯಮಾಡಿ ಸತ್ಯಕ್ಕೆ ಸಮೀಪವಾದ ಸುಧ್ದಿ ಪ್ರಚಾರಪಡಿಸಿದಾಗ ಮಾತ್ರ ಯಶಸ್ಸು ಸಾಧ್ಯ. ರಾಜಕೀಯ ಒತ್ತಡಕ್ಕೆ ಮಣಿದು ಸುಧ್ದಿ ಮಾಡಬಾರದು ಪೆನ್ನಿಗೆ ಸಮಾಜ ತಿದ್ದುವ ಶಕ್ತಿ ಇದೆ. ವೆಬ್ ಪತ್ರಿಕೆಯು ಇಗಿನ ಕಾಲಗಳಲ್ಲಿ ಎಲ್ಲರಿಗು ಅವಶ್ಯಕವಾಗಿರುವುದಾಗಿದೆ. ಹಿಂದಿನ ಸಮಯದಲ್ಲಿ ವರದಿ ಬರಬೇಕಾದರೆ ಒಂದು ದಿನದಿಂದ ದಿನಕ್ಕೆ ಕಾಯಬೇಕಿತ್ತು. ಇಂದು ಈಗ ಮಾತನಾಡುತ್ತಿರುವುದು ಇನ್ನೊಂದು ದೂರದ ಸ್ಥಳದಲ್ಲಿ ಕುಳಿತು ನೋಡುವ ಜಮಾನ ಇದಾಗಿದೆ. ಅಧ್ಯಕ್ಷತೆ ವಹಿಸಿದ ಹಿರಿಯ ವರದಿಗಾರರಾದ ಶಾಂತೂಸರ್ ಹಿರೇಮಠ ಅವರ ಲೇಖನಗಳು ಹರಿತಾಗಿರುತ್ತವೆ ಅದೆ ರೀತಿಯಾಗಿ ಶಿವಾನಂದ ಯಾವುದೇ ಸಂಧರ್ಭದಲ್ಲಿಯು ಹಿಂದೆ ನೋಡದೆ ಅವರು ನೈಜ್ಯವಾದ ಸುಧ್ದಿ ಪ್ರಕಟಿಸಲಿ ವೇಗವಾಗಿ ಬೆಳೆಯಲ್ಲೆಂದು ಶುಭ ಕೋರಿದರು.
ದೇಶದ ಉನ್ನತ್ತಿಗೆ ಪತ್ರಿಕೆಗಳ ಪಾತ್ರ ಹಿರಿಯದು. ಡಿಜಿಟಲ್ ಯುಗದಲ್ಲಿ ವೇಗದೂತ ಜನದನಿ ಉತ್ತಮವಾದ ಕಾರ್ಯನಿರ್ವಹಿಸಲಿ ಇನ್ನು ಎತ್ತರಕ್ಕೆ ವೇಗದೂತ ಬೆಳಯಲಿ ನೇರವಾದ ನಿಖರವಾದ ಸುದ್ದಿಗಳು ಬರಲಿ ಎಂದು ಡಾ.ಶಾಂತವೀರ ಮನಗೂಳಿ ತಮ್ಮ ಶುಭನುಡಿಗಳನ್ನಾಡಿದರು.
ಸಿಂದಗಿಯ ವೃತ್ತ ನಿರೀಕ್ಷಕರಾದ ರವಿ ವಕ್ಕುಂದ ಅವರು ಮಾತನಾಡಿ ಸಿಂದಗಿ ತಾಲೂಕಿಗೆ ಸೇವೆ ಮಾಡಲು ಬಂದು ಇದೆ ಮೊದಲ ಬಾರಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಸಂತೋಷ ತಂದಿದೆ. ಸುದ್ದಿ ವೇಗ ಮತ್ತು ವಿಶ್ವಾಸಹರ್ತೆಯಿಂದ, ಪಾಸಿಟಿವ್ ಮತ್ತು ನೇಗಟಿವ್ ಸುಧ್ದಿಗಳನ್ನು ನಿಖರತೆಯಿಂದ ಈ ವೇಗದೂತ ಜನದನಿ ಸಂಕಷ್ಟದಲ್ಲಿರುವವರ ಧ್ವನಿಯಾಗಿ ಕೆಲಸಮಾಡಲಿ ಪಾರದರ್ಶಕತೆಯ ಸುಧ್ದಿ ಬಿತ್ತರಿಸಲೆಂದು ಶುಭ ಹಾರೈಸಿದರು.
ಶಿವಾನಂದ ಆಲಮೇಲ ಪ್ರಾಸ್ತಾವಿಕ ಹಾಗೂ ವಂದನಾರ್ಪಣೆ
ಪತ್ರಿಕಾ ರಂಗ ಪ್ರಾರಂಭವಾಗಿದ್ದು ಸುಮಾರು ಸಾವಿರ ವರ್ಷಗಳ ಹಿಂದೆ ಚೀನಾದಲ್ಲಿ ಪ್ರಕಟವಾಯಿತು. ಅದರ ಹೆಸರು ಚಿಂಗ್ ಪಾವೋ ಅದರರ್ಥ ರಾಜದಾನಿಯ ಸುದ್ದಿ ಈ ಪತ್ರಿಕೆ ಮೂಲಕ ಸರ್ಕಾರ ಜನತೆಗೆ ಮುಖ್ಯ ಮುಖ್ಯ ಘಟನೆಗಳ ಬಗ್ಗೆ ಸಮಾಚಾರ ಕೋಡುತ್ತಿತ್ತು. 1780 ಜನೇವರಿ 29ರಂದು ದ ಬೆಂಗಾಲ್ ಗೆಜ್ಹಟ್ ಇದು ಭಾರತದಲ್ಲಿ ಅಚ್ಚಾದ ಮೊದಲ ಸುದ್ದಿ ಹಾಳೆಯಾಗಿದೆ. ನಂತರ ಅದು ತನ್ನ ಹೆಸರನ್ನು ದಿ ಇಂಗ್ಲೀಷಮನ್ ಎಂದು ಬದಲಿಸಿಕೊಂಡಿತು. 1948 ರಲ್ಲಿ ಭಾರತದ ಸ್ವಾತಂತ್ರ್ಯ ನಂತರ ಕೆ.ಎನ್. ಗುರುಸ್ವಾಮಿ ಅವರು ದಿ ಪ್ರಿಂಟರ್ಸ್, ಮೈಸೂರು ಪ್ರೈ.ಲಿ ಎಂಬ ಕಂಪನಿಯನ್ನು ಪ್ರಾರಂಭಿಸಿದರು. ಈಗಿನ ಡೇಕಾನ್ ಹೇರಾಲ್ಡ್ ಇಂಗ್ಲೀಷ ಹಾಗೂ ಪ್ರಜಾವಾಣಿ ಕನ್ನಡ ದಿನ ಪತ್ರಿಕೆಗಳನ್ನು ಪ್ರಾರಂಭಿಸಿದರು.
1989ರಲ್ಲಿ ಟಿಮ್ ಬರ್ನರ್ಸ್-ಲೀ ಅವರು ವರ್ಲ್ಡ ವೈಡ್ ವೆಬ್ ( www ) ಅನ್ನು ಕಂಡುಹಿಡಿದರು. ಪ್ರಪಂಚದಾದ್ಯಂತ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳ ನಡುವೆ ಮಾಹಿತಿ ಹಂಚಿಕೆಯ ಬೇಡಿಕೆಗಳನ್ನು ಪೂರೈಸಲು ವೆಬ್ ಅನ್ನು ಸ್ಥಾಪಿಸಲಾಯಿತ್ತು. 2007 ರ ಹೋತ್ತಿಗೆ ಎಲ್ಲಾ ಪ್ರಮುಖ ಪತ್ರಿಕೆಗಳು ಅಂತರ್ಜಾಲದಲ್ಲಿ ಆನ್ಲ್ಯನ್ ಆವೃತ್ತಿಗಳನ್ನು ತಯಾರಿಸಿದವು. ವೆಬ್ ಪತ್ರಿಕೆಗಳು ಬಂದಾಗ ಮುದ್ರಣ ಪತ್ರಿಕೆಗಳಿಗೆ ತುಂಬಾ ಹೊಡೆತಬಿದ್ದರು ಇದುವರೆಗೆ ಸಮಾಜಮುಖಿ ಕೆಲಸ ಮಾಡುತ್ತಾ ಬಂದಿರುವುದು ಮುದ್ರಣ ಪತ್ರಿಕೆಯದ್ದು. ಕನ್ನಡ ಪತ್ರಿಕೆಗಳ ಯುಗವು 1843 ರಲ್ಲಿ ಬಾಸೆಲ್ ಮಿಷನ್ ನ ಮಿಷನರಿ ಹರ್ಮನ್ ಮೊಗ್ಲಂಗ್ ಮಂಗಳೂರಿನಿಂದ ಮೊದಲ ಕನ್ನಡ ಪತ್ರಿಕೆ ಮಂಗಳೂರು ಸಮಾಚಾರವನ್ನು ಪ್ರಕಟಿದಾಗ ಪ್ರಾರಂಭವಾಯಿತು.
ವೇಗದೂತ ಜನದನಿ ಕಾರ್ಯಕ್ರಮ ಶುಭಾರಂಭಕ್ಕೆ ದಿವ್ಯ ಸಾನಿದ್ಯವಹಿಸಿದ ಷ.ಬ್ರ.ಡಾ|| ಪ್ರಭುಸಾರಂಗದೇವ ಶಿವಚಾರ್ಯರಿಗೆ ಹಾಗೂ ಯಶಸ್ಸಿಗೆ ಕಾರಣಿಕರ್ತರಾದ ಕರ್ನಾಟಕ ಕಾರ್ಯನಿರತ ಪರ್ತಕರ್ತರನ್ನು ನೆನದರು. ಮತ್ತು ಉದಯೋನ್ಮುಖ ಯುವ ಪರ್ತಕರ್ತರು ನನ್ನೊಂದಿಗೆ ಸದಾಕಾಲ ಭುಜಕ್ಕೆ-ಭುಜ ನೀಡಿ ನಿಂತಿರುವುದರ ಪ್ರತಿಪಲವೆ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು. ಕಾರ್ಯಕ್ರಮಕ್ಕೆ ವೇದಿಕೆ ಮೇಲಿದ್ದ ತಾಲೂಕಾ ದಂಡಾಧಿಕಾರಿಗಳಾದ ನಿಂಗಣ್ಣ ಬಿರಾದಾರ, ಕಾಂಗ್ರೇಸ್ ಮುಖಂಡ ಅಶೋಕ ಮನಗೂಳಿ, ಆನಂದ ಶಾಬಾದಿ, ವೆಂಕಟೇಶ ಆರ್ ಗುತ್ತೆದಾರ, ಸಂಗಮೇಶ ಮುಂಡಾಸ, ಅನುಪಸ್ಥಿತಿಯಲ್ಲಿದ್ದ ವಿಶ್ರಾಂತ ಶೀಕ್ಷಕರಾದ ಎಸ್.ಎಸ್.ಬಿರಾದಾರ (ಸಿದ್ದಪ್ಪಮಾಸ್ತರ್) ಹಾಗೂ ಎಲ್ಲ ಗೌರವಾನ್ವಿತರನ್ನು, ಕಾರ್ಯಕ್ರಮ ನಿರೂಪಿಸಿದ ಗುರುಗಳಾದ ಜಗದೀಶ ಶಿಂಗೆ ಹಾಗೂ ಸ್ವಾಗತಿಸಿದ ಯುವ ವರದಿಗಾರ ಗುರು ಮಠ,ಸ್ನೇಹಿತ- ಬಂದುಗಳಿಗೆ ಆಗಮಿಸಿ ಶುಭ ಹರಿಸಿದ ಹಲವಾರು ಉಪಸ್ಥಿತರಿಗೆ ವಂದಿಸಿ ಕಾರ್ಯಕ್ರಮ ಸಮಾರೋಪ ಗೋಳಿಸಲಾಯಿತ್ತು.
ಕಾರ್ಯಕ್ರಮದ ಕೆಲವು ಬಾವ ಚಿತ್ರಗಳು.
Leave a Reply