ನಗರದಲ್ಲಿ ಕಲುಷಿತ ಆಹಾರ ಸೇವನೆ ಮಾಡಿ ತೀವ್ರ ಅಸ್ವಸ್ಥ ಗೊಂಡಿದ್ದ ಹಸುವೊಂದನ್ನು ಪೊಲೀಸ್ ಪೆದೆ ಸಿದ್ದನಗೌಡ ದೊಡ್ಡಮನಿ ಮತ್ತು ಸಿದ್ದು ಗಂಗನಳ್ಳಿ ಪಶು ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿದರು.
ಸಿಂದಗಿ: ಪಟ್ಟಣದ ವಿದ್ಯಾ ನಗರದಲ್ಲಿ ಕಲುಷಿತ ಆಹಾರ ಸೇವನೆ ಮಾಡಿ ತೀವ್ರ ಅಸ್ವಸ್ಥ ಗೊಂಡಿದ್ದ ಹಸುವೊಂದನ್ನು ಗಮನಿಸಿದ ಸಿಂದಗಿ ಠಾಣೆ ಪೊಲೀಸ ಸಿಬ್ಬಂದಿ ಸಿದ್ದನಗೌಡ ದೊಡ್ಡಮನಿ ಹಾಗು ಸಿದ್ದು ಗಂಗನಹಳ್ಳಿ ಅವರು ತಕ್ಷಣ ಪಶು ವೈದ್ಯರಿಗೆ ಕರೆ ಮಾಡಿ ಅವರನ್ನು ಕರೆಯಿಸಿ ಚಿಕಿತ್ಸೆ ಕೊಡಿಸುವ ಮೂಲಕ ಅದನ್ನು ಪ್ರಾಣಾಪಾಯದಿಂದ ಪಾರಾಗುವಂತೆ ಮಾಡಿದ ಕಾರ್ಯ ನಿಜಕ್ಕೂ ಶ್ಲಾಘನೀಯ. ಪೊಲೀಸರ ಬಗೆಗೆ ಕೇವಲ ಋಣಾತ್ಮಕವಾಗಿರುವ ಮಾತುಗಳು ಕೇಳಿ ಬರುವ ಈ ಕಾಲದಲ್ಲಿ ಕರ್ತವ್ಯದ ಜೊತೆಗೆ ಈ ರೀತಿಯ ಮಾನವೀಯ ಕಾರ್ಯ ಮಾಡಿದ್ದು ಸಿಂದಗಿ ನಗರದ ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.
Leave a Reply