ಬೆಳಗಿನ ಜಾವ ಮನೆ ಮುಂಬಾಗದ ರಸ್ತೆ ಮೇಲೆ ನಿಲ್ಲುವ ಮೂರು ಚಕ್ರದ ವಾಹನ ಮೂವತ್ತು ಜನರನ್ನು ಒಯ್ಯಲು ಸಿದ್ದವಾಗಿಯೇ ಬಂದಿರುತ್ತಾನೆ. ಟಂ..ಟಂ.. ಚಾಲಕ ತನ್ನ ಹತ್ತು ರೂಪಾಯಿ ಕಮೀಷನ್ ಆಸೆಗಾಗಿ ಕೂಲಿಗೆ ಬರುವ ಸಣ್ಣ ಮಕ್ಕಳನ್ನು ಟಂಟಂ ನ ಮೇಲ್ಬಾಗದಲ್ಲಿ ಹಾಗೂ ಹೆಣ್ಣು ಮಕ್ಕಳನ್ನು ಹತ್ತಿಯ ಚೀಲದಂತೆ ಒತ್ತಿ ಒತ್ತಿ ತುಂಬುತ್ತಾನೆ.
ಇದ್ದು ಗೂಡ್ಸ್ ಗಾಡಿಯೋ ಅಥವಾ ಜನರಿಗೆ ಸಂಪರ್ಕ ಕಲ್ಪಿಸುವ ವಾಹನವೋ ತಿಳಿಯದಾಗಿದೆ. ನಾಲ್ಕು ದುಡ್ಡಿನ ಆಸೆಗೆ ಬಡವನ ಕುಟುಂಬ ಅನಾಥವಾದಿತು ಎಂಬ ಅರಿವೇ ಇಲ್ಲದೆ ಟಂ ಟಂ ತಿರುಗುತ್ತಿವೆ. ಇದನ್ನು ನೋಡಿದ ಪೋಲಿಸರು ಕಣ್ಣಿಗೆ ಕಾಣದಂತೆ ಸುಮ್ಮನಾಗುತ್ತಾರೆ. ಹೊಟ್ಟೆ ಪಾಡು ಏನು ಮಾಡೋದು ಎಂಬ ಭಾವನೆ ಅವರಲ್ಲಿಯೂ ಇರಬಹುದು.
ನಸುಕಲ್ಲಿ ಎದ್ದು ಗಂಡನಿಗೆ ಊಟಕ್ಕೆ ರೋಟಿ ತಟ್ಟಿ, ಸ್ವಲ್ಪ ಖಾರ ಸ್ವಲ್ಪ ಎಣ್ಣಿ ಹಚ್ಚಕೊಂಡು ಶಾಲೆಗೆ ತೆರಳಬೇಕ್ಕಿದ್ದ ಎಂಟು ವರ್ಷದ ಮಕ್ಕಳ ಕೈ ಹೀಡಿದು ದಿನಗೂಲಿ ಮೂನೂರಕ್ಕೆ ಜಮೀನುದಾರರ ಹೋಲಕ್ಕೆ ಕುರಪಿ ಹಿಡಿದು ಹೋಗುವ ಹೆಣ್ಣು ಮಕ್ಕಳು ತಮ್ಮ ಪ್ರಾಣ ಯಾವಾಗ ಹೋಗುತ್ತದೆಯೋ ಎಂಬ ಅರಿವೇ ಇಲ್ಲದೆ ಜೀವ ಮುಡಿಪಾಗಿಟ್ಟು ಕೂಲಿಗೆ ಹೋಗುತ್ತಾರೆ.
ಗಾಡಿಯಲ್ಲಿ ಕುಳಿತವರನ್ನು ಕೇಳಿದರೆ ಮನೆಯಲ್ಲಿ ಯಜಮಾನರು ದುಡಿದು ಹಾಕಬೇಕಿತ್ತು ದಾರು ಕುಡಿದು ದವಾಖಾನೆಗೆ ಹಾಕೀವ್ರಿ. ಎಷ್ಟೇ ಆಗಲೀ ಅವನು ನನ್ನ ಗಂಡ ಅವ್ನಿಗೆ ಊಳಸಕೋಬೇಕಲ್ರೀ ಅದಕ್ಕೇ ಮಗಳಿಗಿ ತಗೊಂಡು ಕೆಲಸಕ್ಕ ಹೊಂಟಿನ್ರೀ.
ಎನ್ನು ಮಾಡೋದ್ರಿ ವರ್ಷಕೆ ಒಂದರಂತೆ ನಾಲ್ಕು ಹೆಣ್ಣು ಒಂದು ಗಂಡು ಐದು ಮಕ್ಕಳು ವಯಸ್ಸಾದ ಅತ್ತಿ , ಮಾವ ಹೆಣ್ಣ ಮಕ್ಕಳ ಮದವಿ ಮಾಡಬೇಕ್ರಿ ಗಂಡ ಹೆಂಡತಿ ದುಡಿದರು ವಾರದ ಸಂಗಿಗಿ ಹಣ ಸಾಲಾ ಮಾಡಬೇಕ್ರೀ ಅದಕ್ಕ ಮಕ್ಕಳಿಗಿ ಕರಕೊಂಡು ಕೂಲಿಗೆ ಹೋಗೋದ ಬಿಟ್ಟರೆ ಬೇರೆ ದಾರಿ ಇಲ್ಲರೀ. ಇಂತಹ ಉತ್ತರಗಳು ಸರ್ವೆ ಸಾಮಾನ್ಯವಾಗಿ ಬರುತ್ತವೆ.
ಮಾನವೀಯತೆ ಮೇರೆಯಲು ಹೋಗಿ ಕುಟುಂಬಗಳು ಅನಾಥಾವಾದರೆ ಅವರ ಕುಟುಂಬಕ್ಕೆ ಆಧಾರ ವಾಗುವರಾರು ಎಂಬುದು ಪ್ರಶ್ನೆ ಯಾಗಿಯೇ ಉಳಿದು ಬಿಡುತ್ತದೆ. ಇದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಪೋಲಿಸರು ಕಾನೂನಿನ ಅರಿವು ಟಂ ಟಂ ಚಾಲಕರಿಗೆ, ಮಾಲಿಕರಿಗೆ ಮುಟ್ಟಿಸಬೇಕಾಗಿದೆ. ಎಲ್ಲಂದರಲ್ಲಿ ಟಂ ಟಂ ದುರಂತಗಳು ಹೆಚ್ಚಾಗಿ ನೋಡುವುದರಿಂದ ಅಂತಹ ದುರಂತಗಳು ಮರುಕಳಿಸಿಬಾರದು ಎಚ್ಚರಿಕೆ ತಪ್ಪಿದರೆ ಅನಾಹುತ ಗ್ಯಾರಂಟಿ ಆದರಿಂದ ಪೋಲಿಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ನಿಗಾವಹಿಸಿ ಕ್ರಮಕ್ಕೆ ಮುಂದಾಗಬೇಕಿದೆ.
ಹೊಟ್ಟೆ ಪಾಡೆಂದು ಸುಮ್ಮ ನೀರಲ್ಲೆ.. ಪ್ರಾಣ ಹೊದಿತೆಂದು ಆತಂಕ ಪಡಲೇ? ಎಂಬ ಕಳವಳದಿಂದ.
Leave a Reply